Top

ಅಜಯ್ ದೇವಗನ್ V/S ಕರಣ್ ಜೋಹರ್


Asianet News Sunday 04 September 2016 12:12 pm IST Film News
ಅಜಯ್ ದೇವಗನ್ V/S ಕರಣ್ ಜೋಹರ್
04 Sep

ಮುಂಬೈ(ಸೆ.04): ಖ್ಯಾತ ನಿರ್ದೇಶಕ ಕಮ್ ನಟ ಕರಣ್ ಜೋಹರ್ ಮತ್ತು ಅಜಯ್ ದೇವಗನ್ ಅವರ ಮುಸುಕಿನ ಗುದ್ದಾಟ ಬಹಿರಂಗವಾಗಿದೆ.

ನಿರ್ಮಾಪಕ ಕರಣ್ ಜೋಹರ್ ಮತ್ತು ಚಿತ್ರ ವಿಮರ್ಶಕ ಕಮಲ್ ಆರ್ ಖಾನ್ ಅವರ ವಿರುದ್ಧ ತನಿಖೆ ನಡೆಯುವಂತೆ ನಿರ್ಮಾಪಕ ಕಮ್ ನಟ ಅಜಯ್ ದೇವಗನ್ ದೂರು ನೀಡಿದ್ದಾರೆ. ಅಜಯ್ ದೇವಗನ್ ಅಭಿನಯದ ಶಿವಾಯ್ ಸಿನಿಮಾ ಮತ್ತು ಕರಣ್ ಜೋಹರ್ ನಿರ್ದೇಶನದ ಏ ದಿಲ್ ಹೈ ಮುಷ್ಕಿಲ್ ಚಿತ್ರಗಳು ಬಿಡುಗಡೆಗೆ ತಯಾರಾಗಿವೆ.

ಈ ಹಿನ್ನೆಲೆಯಲ್ಲಿ  ಶಿವಾಯ್ ಚಿತ್ರದ ಬಗ್ಗೆ ಕೆಟ್ಟದಾಗಿ ವಿಮರ್ಶೆ ಮಾಡಿ, ಏ ದಿಲ್ ಹೈ ಮುಷ್ಕಿಲ್' ಸಿನಿಮಾವನ್ನು ಹೊಗಳಿ ಟ್ವಿಟ್ಟರ್ ನಲ್ಲಿ ಬರೆಯುವಂತೆ ಕರಣ್ ಜೋಹರ್ ಕಮಲ್ ಆರ್ ಖಾನ್ ಅವರಿಗೆ 25 ಲಕ್ಷ ರೂ ಹಣ ನೀಡಿದ್ದಾರೆ ಎಂದು ಅಜಯ್ ದೇವಗನ್ ಆರೋಪಿಸಿದ್ದಾರೆ.



Follow us on Google Plus

Follow us on Facebook and twitter

Subscribe our youtube channel

Get Latest News in your e-mail Inbox!