Top

ಬಿಪಿಎಲ್ ಕಾರ್ಡ್'ನಿಂದ ರೇಷನ್ ಪಡೆಯುತ್ತಿದ್ದಾರೆ ದೀಪಿಕಾ, ಸೋನಾಕ್ಷಿ, ಜಾಕ್ವೆಲಿನ್ ಹಾಗೂ ರಾಣಿ ಮುಖರ್ಜಿ!


Asianet News Tuesday 06 September 2016 03:15 pm IST Film News
ಬಿಪಿಎಲ್ ಕಾರ್ಡ್'ನಿಂದ ರೇಷನ್ ಪಡೆಯುತ್ತಿದ್ದಾರೆ ದೀಪಿಕಾ, ಸೋನಾಕ್ಷಿ, ಜಾಕ್ವೆಲಿನ್ ಹಾಗೂ ರಾಣಿ ಮುಖರ್ಜಿ!
06 Sep

ಬಾಲಿವುಡ್'ನ ಪ್ರಖ್ಯಾತ ನಟಿಯರಾದ ದೀಪಿಕಾ ಪಡುಕೋಣೆ, ಜಾಕ್ವೆಲಿನ್ ಫೆರ್ನಾಂಡಿಸ್, ಸೋನಾಕ್ಷಿ ಸಿನ್ಹಾ ಹಾಗೂ ರಾಣಿ ಮುಖರ್ಜಿ ಬಹು ಮಹಡಿ ಮನೆಗಳಲ್ಲಿ ವಾಸಿಸುತ್ತಿದ್ದರೂ, ಉತ್ತರ ಪ್ರದೇಶದ ಫರ್ಕಾಬಾದ್ ಜಿಲ್ಲೆಯ ಕಾಯ್ಮಗಂಜ್ ಕ್ಷೇತ್ರದಲ್ಲಿ ಇವರ ಹೆಸರಿನಲ್ಲಿ ಬಡತನ ರೇಖೆಗಿಂತ ಕೆಳಗಿರುವ(ಬಿಪಿಎಲ್) ಶ್ರೇಣಿಯಲ್ಲಿ ರೇಷನ್ ಕಾರ್ಡುಗಳಿವೆ. ಇಷ್ಟೇ ಅಲ್ಲದೆ ವ್ಯವಸ್ಥತವಾಗಿ ರೇಷನ್ ಕೂಡಾ ಹಂಚಲಾಗುತ್ತಿದೆ.

ಈ ಕುರಿತಾಗಿ ಮಾತನಾಡಿರುವ ಜಿಲ್ಲಾಧಿಕಾರಿ ಪ್ರಕಾಶ್ ಬಿಂದು 'ಬಿಪಿಎಲ್ ಕುಟುಂಬಗಳಿಗೆ ಕಲ್ಪಿಸಲಾಗಿರುವ ಅಂತ್ಯೋದಯ' ಕಾರ್ಡುಗಳ ಪಟ್ಟಿಯಲ್ಲಿ ದೀಪಿಕಾ ಪಡುಕೋಣೆ, ಜಾಕ್ವೆಲಿನ್ ಫೆರ್ನಾಂಡಿಸ್, ಸೋನಾಕ್ಷಿ ಸಿನ್ಹಾ ಹಾಗೂ ರಾಣಿ ಮುಖರ್ಜಿ ಹೆಸರನ್ನು ಸೇರಿಸಲಾಗಿದ್ದು, ರೇಷನ್ ಕೂಡಾ ನೀಡಲಾಗುತ್ತಿದೆ. ಈ ಕುರಿತಾಗಿ ಇದೀಗ ಆರೋಪಗಳು ಕೇಳ ಬಂದಿವೆ' ಎಂದಿದ್ದಾರೆ.

ಕಾಯ್ಮಂಜನ್ ಕ್ಷೇತ್ರದ ಸಾಹಬ್'ಗಂಜ್ ಹಳ್ಳಿಯ 169 ಕುಟುಂಬಗಳಿಗೆ ರೇಷನ್ ಕಾರ್ಡ್ ವಿತರಿಸಲಾಗಿದ್ದು, ಈ ಕುರಿತಾದ ಒಂದು ವರದಿಯನ್ನು ಉಪ ಜಿಲ್ಲಾಧಿಕಾರಿಗಳಿಂದ ತರಿಸಿಕೊಂಡಿದ್ದೇನೆ. ಇವರಲ್ಲಿ 40 ಕುಟುಂಬಗಳಿಗೆ 'ಅಂತ್ಯೋದಯ' ಸೌಲಭ್ಯ ನೀಡಲಾಗಿದ್ದು, ಈ 40 ಕುಟುಂಬಗಳ ಪಟ್ಟಿಯಲ್ಲಿ ಬಹುತೇಕ ಹೆಸರುಗಳು ಪ್ರಖ್ಯಾತ ನಡ ನಡಿಯರದ್ದೇ ಆಗಿದೆ' ಎಂದಿದ್ದಾರೆ.

ಈ ರೇಷನ್ ಕಾರ್ಡ್'ಗಳಲ್ಲಿ ನಮೂದಿಸಿರುವ ಪ್ರಕಾರ ದೀಪಿಕಾ ಪಡುಕೋಣೆ ರಾಕೇಶ್ ಚಂದ್ರ ಎಂಬವನ ಪತ್ನಿ ಎಂದು ನಮೂದಾಗಿದ್ದರೆ, ಜಾಕ್ವೆಲಿನ್ ಸಾಧುಲಾಲ್ ಎಂಬಾತನ ಪತ್ನಿ. ಇನ್ನು ರಾಣಿ ಮುಖರ್ಜಿ ಸ್ವರೂಪ್ ಹಾಘೂ ಸೋನಾಕ್ಷಿ ಸಿನ್ಹಾ ರಮೇಶ್ ಚಂದ್ರ ಎಂಬಾತನ ಪತ್ನಿ ಎಂದು ದಾಖಲಾಗಿದೆ.Follow us on Google Plus

Follow us on Facebook and twitter

Subscribe our youtube channel

Get Latest News in your e-mail Inbox!