Top

ಜಿಯೋ ಸರ್ವಿಸ್`ಗಾಗಿ ಪ್ರಿಯಾಂಕಾ ಚೋಪ್ರಾ ಅಪ್ಲಿಕೇಶನ್..? ಆನ್`ಲೈನ್`ನಲ್ಲಿ ವೈರಲ್


Asianet News Tuesday 06 September 2016 12:12 pm IST Film News
ಜಿಯೋ ಸರ್ವಿಸ್`ಗಾಗಿ ಪ್ರಿಯಾಂಕಾ ಚೋಪ್ರಾ ಅಪ್ಲಿಕೇಶನ್..? ಆನ್`ಲೈನ್`ನಲ್ಲಿ ವೈರಲ್
06 Sep

ಮುಂಬೈ(ಸೆ.06): ಮುಖೇಶ್ ಅಂಬಾನಿ ಒಡೆತನದ ರಿಲಯನ್ಸ್ ಇಂಡಸ್ಟ್ರೀಸ್ ಟೆಲಿಕಾಂ ಇಂಡಸ್ಟ್ರೀಗೆ ತನ್ನ ಜಿಯೋ ನೆಟ್ವರ್ಕ್ ಪರಿಚಯಿಸಿದ್ಧೇ ತಡ ಎಲ್ಲೆಲ್ಲೂ ಇದರದ್ದೇ ಮಾತು. ಅಗ್ಗದ ಡೇಟಾ, ಸಿಮ್ ಕಾರ್ಯವೈಖರಿ ಸೇರಿದಂತೆ ಹಲವು ವಿಶೇಷತೆಗಳ ಬಗ್ಗೆ ಸುದ್ದಿಯಾಗುತ್ತಲೇ ಇದೆ. ಈ ಬಾರಿ ಬಾಲಿವುಡ್ ನಟಿ ಪ್ರಿಯಾಂಕಾಚೋಪ್ರಾ ಜಿಯೋ ಸಬ್`ಸ್ಕ್ರಿಪ್ಷನ್`ಗಾಗಿ ಸಲ್ಲಿಸಿದ್ದಾರೆನ್ನಲಾದ ಅಪ್ಲಿಕೇಶನ್ ಒಂದು ಆನ್`ಲೈನ್`ನಲ್ಲಿ ಭಾರೀ ಸದ್ದು ಮಾಡುತ್ತಿದೆ.

ಪಾಸ್`ಪೋರ್ಟ್ ಸೈಜ್ ಫೋಟೋ ಇರುವ ಅಪ್ಲಿಕೇಶನ್ನಿನನಲ್ಲಿ ಸಹಿ ಸಹ ಮಾಡಲಾಗಿದೆ. ಮಹಾರಾಷ್ಟ್ರ ಎಂದು ಅಡ್ರೆಸ್ ನೀಡಲಾಗಿದೆ. ಹಲವರು ಟ್ವಿಟ್ಟರ್`ನಲ್ಲಿ ಈ ಅಪ್ಲಿಕೆಶನ್ ಪೋಸ್ಟ್ ಮಾಡಿದ್ದಾರೆ. ಅರ್ಜಿಯ ಸತ್ಯಾಸತ್ಯತೆ ಇನ್ನಷ್ಟೆ ತಿಳಿಯಬೇಕಿದೆ ಎಂದು ಎನ್ಡಿಟಿವಿ ವರದಿ ಮಾಡಿದೆ. ಆದರೆ, ಕ್ವಾಂಟಿಕೋ ಸೀಸನ್-2 ಶೂಟಿಂಗ್ನಲ್ಲಿ ಬ್ಯುಸಿಯಾಗಿರುವ ಪ್ರಿಯಾಂಕಾ ಚೋಪ್ರಾ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.Follow us on Google Plus

Follow us on Facebook and twitter

Subscribe our youtube channel

Get Latest News in your e-mail Inbox!