Top

ಹೆಂಗಿದೆ ಗೊತ್ತಾ ನಿರ್ದೋಸೆ..?


Asianet News Friday 02 September 2016 07:19 pm IST Film Review
ಹೆಂಗಿದೆ ಗೊತ್ತಾ ನಿರ್ದೋಸೆ..?
02 Sep

ಬೆಂಗಳೂರು(ಸೆ.02): ಸ್ಯಾಂಡಲ್ ವುಡ್ ನಲ್ಲಿ ಟ್ರೈಲರ್ ನಿಂದ ಸೌಂಡ್ ಮಾಡಿದ ನೀರ್ ದೋಸೆ ಫೈನಲಿ ಪ್ರೇಕ್ಷಕರ ಮುಂದೆ ಬಂದಿದೆ. ೀ ಸಿನಿಮಾದ ಒಂದು ಡೈಲಾಗ್ ಕೇಳಿದ್ರೆ ಸಾಕು ಜನ ಇದು ನೀರ್ ದೋಸೆ ಅಲ್ಲ ಮಸಾಲೆ ದೋಸೆ ಅನ್ನೋರೆ ಹೆಚ್ಚು.  ಆದರೆ, ಸಿನಿಮಾ ನೋಡಿ ಹೊರಗೆ ಬರೋ ಪ್ರೇಕ್ಷಕ ಅಂದುಕೊಳ್ತಾನೆ.. ಮೌನ, ತಾಳ್ಮೆ, ಸಹನೆ ದೌರ್ಬಲ್ಯವಲ್ಲ, ಅವು ಅಸ್ತ್ರ.  ಸಿನಿಮಾ ಟ್ಯಾಗ್​ಲೈನ್​ಗೆ ತಕ್ಕನಾಗಿಯೇ ಸಿನಿಮಾ ಇದೆ.

ಬದುಕಿನ ಸಿದ್ಧ ಸೂತ್ರಗಳನ್ನ ಪಕ್ಕಕ್ಕಿಟ್ಟು ತಮ್ಮದೇ ಧಾಟಿಯಲ್ಲಿ ಬದುಕನ್ನ ಕಟ್ಟಿ ಕೊಳ್ಳೋ ರೀತಿಯೇ ನೀರ್ ದೋಸೆ ಅನ್ನೋದು ಅರ್ಥವಾಗುತ್ತೆ.

ಒಂದಕ್ಕೊಂದು ಡೈಲಾಗು ಕೇಳಿದ್ರೆ ಕತೆಗೆ ಸಿಂಕ್ ಆಗೊಲ್ಲ. ಆದರೆ, ಬೇರೆ ಬೇರೆ ಘಟನೆಗಳನ್ನೆಲ್ಲ ಸೇರಿಸಿ ನಿಮಗೊಂದು ರುಚಿಯಾದ ಕಿಚಿಡಿ ಮಾಡಿಕೊಟ್ಟಿದ್ದಾರೆ ಡೈರೆಕ್ಟರ್ ವಿಜಯ್ ಪ್ರಸಾದ್. ಸೀನ್​ಗಳು ಸಿಂಕಾಗಲ್ಲ ಅಂತಿದ್ದೀರಿ ಮತ್ತೆ ಸಿನಿಮಾ ಹೆಂಗೆ ಅಂದ್ರಾ? ಸಿನಿಮಾ ಪೂರ್ತಿ ನೋಡಿದ್ರೇನೆ ಅದು ಸರಿ ಹೋಗುವುದು.

40ರ ಹತ್ತರತ್ತಿರ ವಯಸ್ಸಾದರೂ ಮದುವೆ ಆಗದೇ ಹೆಣ ಹೊರುವ ಗಾಡಿ ಡ್ರೈವರ್ ಆಗಿ ಜಗ್ಗೂ  ಅಲಿಯಾಸ್ ಜಗ್ಗೇಶ್. ಇವರ ಜೊತೆಗಿರುವ ಹೆಂಡತಿ ಕಳೆದುಕೊಂಡ ವಯಸ್ಸಾದ ಹಿರಿಜೀವ. ಆದರೆ, ಉಪ್ಪಿಗೆ ಹುಳಿಗೆ ಇವರಲ್ಲಿ ಮುಪ್ಪಿಲ್ಲ ಎನ್ನುವ ಕ್ಯಾರೆಕ್ಟರ್.  ಸದ್ಯಕ್ಕೆ, ಲೈಫಲ್ಲಿ ಹೆಣ್ಣಿಲ್ಲದ ಈ ಎರಡು ಗಂಡು ಜೀವಗಳು ಕಾಳಾಕೋದು ಬಾರ್ ಡಾನ್ಸರ್ ಹರಿಪ್ರಿಯಾಗೆ.

ಬಾರ್ ಡಾನ್ಸರ್​ಗೆ  ಹತ್ತಿರವಾಗೋ ಜರ್ನಿಯಲ್ಲಿ ಜಗ್ಗೂ ಲೈಫಲ್ಲಿ  ಶಾರದಾಮಣಿಯನ್ನೋ ಇನ್ನೊಂದು ಬೆಳಕು ಎಂಟ್ರಿಯಾಗುತ್ತೆ. ಏಜ್ ಬಾರ್ ಆದರೂ ಮದುವೆಯಾಗಲು ಗಂಡು ಸಿಕ್ಕಿರಲ್ಲ .ಜಗ್ಗೂ ಜೊತೆ ಲವ್ವಲ್ಲಿ ಬೀಳೋ ಶಾರದ ನೋಡೋಕೆ ಹಸುವಿನಂತೆ ಕಂಡ್ರೂ ಡೈಲಾಗ್ ಹೇಳಿದ್ರೆ ಎತ್ತು ಗುಮ್ದಂದಷ್ಟೇ ಪವರ್ ಫುಲ್.

ಜಗ್ಗೇಶ್, ದತ್ತಣ್ಣ , ಹರಿಪ್ರಿಯಾ, ಸುಮನ್ ಈ ನಾಲ್ವರ ನಡುವೆ ಬರೀ ಹಾಸ್ಯ, ಅಪಹಾಸ್ಯದ ಡೈಲಾಗು ಅಂತ ಹೊರನೋಟಕ್ಕೆ ನಿಮಗನ್ನಿಸಿದ್ರೂ ಸಿನಿಮಾ ನೋಡುವಾಗ ಬೇರೊಂದು ಬದುಕಿನ ಮುಖವನ್ನ ನೋಡಿದ ಅನುಭವವೂ ಆಗುತ್ತೆ. ಅದನ್ನ ಅನೂಪ್ ಸೀಳಿನ್ ಸಂಗೀತದ ಅವ್ರದ್ದೇ ಕಂಠದಲ್ಲಿ ಮೂಡಿಬರುವ ಹೋಗಿ ಬಾ ಬೆಳಕೆ ಹಾಡು ದರ್ಶನ ಮಾಡಿಸುತ್ತೆ.

ಜನ ನಿಧಾನವಾಗಿ ನುಗ್ಗಿ ಬರೋ ಸೂಚನೆಯೂ ಸಿಕ್ಕಾಗಿದೆ. ನಿರ್ಮಾಪಕ ಪ್ರಸನ್ನ  ಒಂದೊಳ್ಳೆ ಸಿನಿಮಾ ಕೊಟ್ಟು ಸಂತಸದಿಂದ ಬೀಗುತ್ತಿರೋದ್ರಲ್ಲೂ ಅರ್ಥವಿದೆ. ನಿರ್ದೇಶಕ ವಿಜಯ್​ ಪ್ರಸಾದ್ 3 ವರ್ಷಗಳಿಂದ ಒದ್ದಾಡಿದ್ದಕ್ಕೂ ಸಾರ್ಥಕತೆ ಸಿಕ್ಕಿದೆ. ಅವರ ಫೋನು ನಾಟ್ ರೀಚಬಲ್ ಇರೋದು ಅದಕ್ಕೆ ಉತ್ತರವಾಗಿದೆ. ಕನ್ನಡಕ್ಕೊಂದು ವಿಭಿನ್ನ  ರುಚಿಯ ನೀರ್ದೋಸೆ ಸಿಕ್ಕಾಗಿದೆ. ಖಾಲಿಯೋಗೋ ಮುನ್ನ ನೀವೂ ಹೋಗಿ ಸವಿಯಿರಿ.

ರವಿಕುಮಾರ್ ಎಂ.ಕೆ ಎಂಟರ್`ಟೈನ್`ಮೆಂಟ್ ಬ್ಯೂರೋ ಸುವರ್ಣ ನ್ಯೂಸ್

 

 



Follow us on Google Plus

Follow us on Facebook and twitter

Subscribe our youtube channel

Get Latest News in your e-mail Inbox!