Top

ಸಿದ್ದಾರ್ಥ್'ಗೆ ಈ ಹಾಟ್ ಬಾಲಿವುಡ್ ಬೆಡಗಿ ಇದ್ದರೆ ಜಿಮ್ ಮಾಡೋದೆ ಬೇಡ್ವಂತೆ!


Asianet News Tuesday 23 August 2016 11:11 am IST Spice
 ಸಿದ್ದಾರ್ಥ್'ಗೆ  ಈ ಹಾಟ್ ಬಾಲಿವುಡ್ ಬೆಡಗಿ ಇದ್ದರೆ  ಜಿಮ್  ಮಾಡೋದೆ ಬೇಡ್ವಂತೆ!
23 Aug

ಸಿದ್ದಾರ್ಥ ಮಲ್ಹೋತ್ರರ ಇನ್‌ಸ್ಟಗ್ರಾಮ್, ಟ್ವಿಟ್ಟರ್ ಖಾತೆಯ ಮೇಲೀಗ ಎಲ್ಲರ ಕಣ್ಣು. ಯಾಕೆ ಗೊತ್ತಾ? ಆ ಖಾತೆಯಲ್ಲೀಗ ದಿನಕ್ಕೊಂದು ಹಾಟ್ ಪಿಕ್ ಹಾಜರಿ ಹಾಕ್ತಿದೆ! ಕತ್ರಿನಾ ಕೈಫ್ ಜೊತೆಗೆ ರೊಮ್ಯಾನ್ಸ್ ಮಾಡಿರುವ ಮಾದಕ ಚಿತ್ರಗಳನ್ನು ಒಂದೊಂದಾಗಿಯೇ ಅವರು ಸೋಷಿಯಲ್ ಮೀಡಿಯಾದ ಬುಟ್ಟಿಗೆ ಹಾಕ್ತಿದ್ದಾರೆ. ನಿತ್ಯಾ ಮೆಹ್ರಾ ನಿರ್ದೇಶನದ ‘ಬಾರ್ ಬಾರೋ ದೇಖೋ’ ಸಿನಿಮಾ ಸೆ.9ರಂದು ತೆರೆಕಾಣುತ್ತಿದ್ದು, ಇದೇ ಚಿತ್ರದ ಹಾಟ್ ಸ್ಟಿಲ್ಸ್‌ಗಳನ್ನು ಸಿದ್ದಾರ್ಥ್ ಹೀಗೆ ಎಲ್ಲರ ಮುಂದಿಡ್ತಿದ್ದಾರೆ.

ಬ್ಲ್ಯೂ ಟ್ಯಾಂಕ್ ಟಾಪ್ ಮತ್ತು ಜೀನ್ಸ್‌ನಲ್ಲಿರುವ ಕತ್ರಿನಾ, ಅಂಗಿ ಧರಿಸದ ಸಿದ್ದಾರ್ಥ್ ನಡುವಿನ ಕಾಂಬಿನೇಶನ್ ಸಿನಿರಸಿಕರನ್ನು ಸೆಳೆದಿದೆ. ಇದಕ್ಕಿಂತ ಆಕರ್ಷಕ ಸಿದ್ದಾರ್ಥ್ ಈ ಫೋಟೋಗಳಿಗೆ ಕೊಡುತ್ತಿರುವ ಕ್ಯಾಪ್ಷನ್. ‘ನೀನಿರುವಾಗ ಜಿಮ್‌ಗಳೆಲ್ಲ ಯಾಕೆ!?’ ಎಂಬ ಒಂದು ಕ್ಯಾಪ್ಷನ್, ಈ ಸಿನಿಮಾ ಎಷ್ಟು ಹಾಟ್ ಎಂಬುದನ್ನು ಸೂಚಿಸುತ್ತಿದೆ. ‘ಪಿತೂರ್’ ಎಂಬ ಫ್ಲಾಪ್ ಸಿನಿಮಾದ ನಂತರ ಕತ್ರಿನಾ ಇಲ್ಲಿ ನಟಿಸುತ್ತಿದ್ದು, ಈ ಚಿತ್ರವಾದರೂ ಕ್ಯಾಟ್ ಕೈಹಿಡಿಯುತ್ತಾ ಎಂಬ ನಿರೀಕ್ಷೆ ಅಭಿಮಾನಿಗಳದ್ದು.



Follow us on Google Plus

Follow us on Facebook and twitter

Subscribe our youtube channel

Get Latest News in your e-mail Inbox!