Top

ನಾಸಾದ ಸ್ಪರ್ಧೆಗೆ ಆಯ್ಕೆಯಾದ ಭಾರತದ 12 ವಿದ್ಯಾರ್ಥಿಗಳು


Asianet News Friday 01 July 2016 05:17 pm IST Automobile
ನಾಸಾದ ಸ್ಪರ್ಧೆಗೆ ಆಯ್ಕೆಯಾದ ಭಾರತದ 12 ವಿದ್ಯಾರ್ಥಿಗಳು
01 Jul

ನವದೆಹಲಿ(ಜು.1): ವಿಶ್ವದ ಪ್ರತಿಷ್ಟಿತ ಬಾಹ್ಯಕಾಶ ಸಂಸ್ಥೆಯಾದ ಅಮೆರಿಕಾದ ನಾಸಾ(ನ್ಯಾಷನಲ್ ಏರೋನಾಟಿಕ್ಸ್ ಅಂಡ್  ಸ್ಪೇಸ್ ಅಡ್ಮಿನಿಸ್ಟ್ರೇಷನ್) ಏರ್ಪಡಿಸುವ 'ಅಂತರರಾಷ್ಟ್ರೀಯ ಬಾಹ್ಯಾಕಾಶ ನೆಲೆಸುವಿಕೆಯು ವಿನ್ಯಾಸ ಸ್ಪರ್ಧೆ "ಗೆ(ಐಎಸ್'ಎಸ್'ಡಿಸಿ) ಭಾರತದ 12 ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ.

ಈ ವಿದ್ಯಾರ್ಥಿಗಳು ಏಷ್ಯಾದ ಪ್ರಾದೇಶಿಕ ಸುತ್ತಿನಲ್ಲಿ ಪಾಕಿಸ್ತಾನ, ಚೀನಾ, ಜಪಾನ್ ಹಾಗೂ ಕೊರಿಯಾ ದೇಶಗಳನ್ನು ಒಳಗೊಂಡ ತಂಡಗಳ ವಿರುದ್ಧ ಜಯಿಸಿ ಅಂತಿಮ ಸುತ್ತಿಗೆ ಆಯ್ಕೆಯಾಗಿದ್ದಾರೆ. 'ಇವರು ತಲುಪುವ ಸಾಧನೆಯ ಹಾದಿ ದೇಶದ ಎಲ್ಲ ಶಾಲಾ ಮಕ್ಕಳಿಗೆ ದಾರಿದೀಪವಾಗಲಿದೆ' ಎಂದು ಪ್ರಧಾನಮಂತ್ರಿ ಕಚೇರಿಯ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಹರ್ಷ ವ್ಯಕ್ತಪಡಿಸಿದ್ದಾರೆ.

ಸ್ಪರ್ಧೆಗೆ ಆಯ್ಕೆಯಾಗಿರುವ 12 ಮಂದಿ ವಿದ್ಯಾರ್ಥಿಗಳು ನವದೆಹಲಿಯ ಆರ್.ಕೆ. ಪುರಂ ಶಾಲೆಯ 10 ಮತ್ತು 12ನೇ ತರಗತಿಯ ವಿದ್ಯಾರ್ಥಿಗಳಾಗಿದ್ದಾರೆ. ಅತೀ ದೊಡ್ಡ ವಿಜ್ಞಾನ ಪ್ರತಿಭೆಗಳನ್ನು ಹೊಂದಿದ ದೇಶ ಭಾರತವಾಗಿದೆ. ಸರ್ಕಾರವು ಈ ವಿದ್ಯಾರ್ಥಿಗಳಲ್ಲದೆ ವಿಜ್ಞಾನ ಕ್ಷೇತ್ರದಲ್ಲಿ ಪ್ರತಿಭೆಯಿರುವರನ್ನು ದೇಶದ ವೈಜ್ಞಾನಿಕ ರಂಗದ ಅಭಿವೃದ್ಧಿಗೆ ಬಳಸಿಕೊಳ್ಳಲಾಗುವುದಾಗಿ ಸಚಿವರು ತಿಳಿಸಿದ್ದಾರೆ.Follow us on Google Plus

Follow us on Facebook and twitter

Subscribe our youtube channel

Get Latest News in your e-mail Inbox!