Top

ರಸ್ತೆಯಲ್ಲಿ ಓಡುವ ಕಾರುಗಳು ಇನ್ನು ಮುಂದೆ ಆಕಾಶದಲ್ಲಿ ಹಾರಾಡಲಿವೆ: ಗೂಗಲ್'ನಿಂದ ವಿನೂತನ ಸಾಹಸ, ಶೀಘ್ರದಲ್ಲಿಯೇ ಮಾರುಕಟ್ಟೆಗೆ


Asianet News Friday 10 June 2016 06:18 pm IST Automobile
ರಸ್ತೆಯಲ್ಲಿ ಓಡುವ ಕಾರುಗಳು ಇನ್ನು ಮುಂದೆ ಆಕಾಶದಲ್ಲಿ ಹಾರಾಡಲಿವೆ: ಗೂಗಲ್'ನಿಂದ ವಿನೂತನ ಸಾಹಸ, ಶೀಘ್ರದಲ್ಲಿಯೇ ಮಾರುಕಟ್ಟೆಗೆ
10 Jun

ಕ್ಯಾಲಿಫೋರ್ನಿಯಾ(ಜೂ.10): ರಸ್ತೆಯಲ್ಲಿ ಓಡುವ ಕಾರುಗಳು ಇನ್ನು ಮುಂದೆ ಆಕಾಶದಲ್ಲಿ ಹಾರಾಡಲಿವೆ.ಮಾಹಿತಿ ತಂತ್ರಜ್ಞಾನದಲ್ಲಿ ವಿಶ್ವದಲ್ಲೇ ಹೊಸ ಇತಿಹಾಸ ಬರೆದಿರುವ ಸರ್ಚ್ ಇಂಜಿನ್ ಸಂಸ್ಥೆ 'ಗೂಗಲ್' ವಿನೂತನ ಸಾಹಕ್ಕೆ ಕೈ ಹಾಕಿದ್ದು, ಹೆಲಿಕಾಪ್ಟರ್, ವಿಮಾನಗಳಂತೆ ಹಾರುವ ಕಾರುಗಳನ್ನು ತಯಾರಿಸಲು ಮುಂದಾಗಿದೆ.

ಗೂಗಲ್ ಸಂಸ್ಥಾಪಕ 'ಲಾರಿ ಪೇಜ್' ಈಗಾಗಲೇ ಹಾರುವ ಕಾರುಗಳನ್ನು ತಯಾರಿಸಲು 100 ಕೋಟಿ ಡಾಲರ್( 667 ಕೋಟಿ ರೂ.) ಹೂಡಿಕೆ ಮಾಡಿದ್ದಾರೆ. 2010 ರಲ್ಲಿಯೇ  ಗೂಗಲ್'ನ 'ಝೀಎರೋ' ಕೇಂದ್ರದಿಂದ ತಯಾರಿಕಾ ಪ್ರಕ್ರಿಯೆ ಪ್ರಾರಂಭವಾಗಿದ್ದು, ಕ್ಯಾಲಿಫೋರ್ನಿಯಾದ ಹೊಲ್ಲಿಸ್ಟೇರ್ ವಿಮಾನ ನಿಲ್ದಾಣದಲ್ಲಿ ಪರೀಕ್ಷೆಯನ್ನು ಸಹ ಕೈಗೊಳ್ಳಲಾಗಿದೆ ಎಂದು ಬ್ಲೂಮ್'ಬೆರ್ಗ್ ವರದಿ ಮಾಡಿದೆ.

ತಂತ್ರಜ್ಞಾನ ತಯಾರಿಕೆಗೆ 'ನಾಸಾ'ದ ಸಂಶೋಧನಾ ಕೇಂದ್ರದಿಂದ ಮಾಹಿತಿ ಹಾಗೂ ಸೌಲಭ್ಯವನ್ನು ತರಿಸಿಕೊಳ್ಳಲಾಗುತ್ತದೆ. ಕಳೆದ ವರ್ಷದಿಂದ 'ಕಿಟ್ಟಿ ಹ್ವಾಕ್' ಎಂಬ ನಗರದಿಂದ ಕೂಡ ಮತ್ತೊಂದು ಹಾರುವ ಕಾರುಗಳ ತಯಾರಿಕಾ ಕಂಪನಿಯನ್ನು ಆರಂಭಿಸಲಾಗಿದೆ.

ಝೀ.ಎರೋದ ಉತ್ಪಾದನಾ ಸಂಸ್ಥೆಯಲ್ಲಿ ಈಗ ತಯಾರಿಸಿರುವ ಮಾದರಿ ಹಾರುವ ಕಾರು ಡ್ರೋನ್'ಅನ್ನು ಹೋಲುತ್ತದೆ ಎಂಬ ಮಾಹಿತಿ ಲಭ್ಯವಾಗಿದೆ. ತಯಾರಿಕೆಯ ಮಾಹಿತಿಯನ್ನು ಗೌಪ್ಯವಾಗಿಡಲಾಗಿದ್ದು, ಝೀ.ಎರೋ ಪ್ರದೇಶದಲ್ಲಿ ನೂರಾರು ಇಂಜಿನಿಯರ್'ಗಳು ಬಿಗಿ ಬಂದೂಬಸ್ತ್'ನಲ್ಲಿ ಹಾರುವ ಕಾರುಗಳನ್ನು ತಯಾರಿಸುತ್ತಿದ್ದಾರೆ.

ಹಾರುವ ಕಾರುಗಳು 2026 ರ ಇಸವಿಯ ವೇಳೆಗೆ ಮಾರುಕಟ್ಟೆಗೆ ಬರಲಿದ್ದು, 4 ಸೀಟು ಸಾಮರ್ಥ್ಯವಿರುವ ಇದು 500 ಕಿ.ಮೀ ವೇಗವನ್ನು ಹೊಂದಿದ್ದು, ಕೊಂಡುಕೊಳ್ಳುವ ಬೆಲೆ ಬಾರತೀಯ ರೂ.ಗಳಲ್ಲಿ ಕನಿಷ್ಠ 80 ಲಕ್ಷ ರೂ.ಗಳಿರುತ್ತದೆ.Follow us on Google Plus

Follow us on Facebook and twitter

Subscribe our youtube channel

Get Latest News in your e-mail Inbox!