Top

ಹುಡುಗಿಯರಿಗೆ ದ್ವಿಚಕ್ರ ವಾಹನ ಕೊಳ್ಳುವಾಗ ಗಮನಿಸಬೇಕಾದ ಪ್ರಮುಖ ಸಂಗತಿಗಳು


Asianet News Thursday 21 July 2016 11:11 am IST Automobile
ಹುಡುಗಿಯರಿಗೆ ದ್ವಿಚಕ್ರ ವಾಹನ ಕೊಳ್ಳುವಾಗ ಗಮನಿಸಬೇಕಾದ ಪ್ರಮುಖ ಸಂಗತಿಗಳು
21 Jul

ನಿಮಗೆ ಗೊತ್ತಾ?

ವಾಹನಗಳಿಲ್ಲದ ಬದುಕನ್ನು ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ. ಹಣವಿದೆ ಎಂದಾಕ್ಷಣ, ಕೊಡುಗೆ, ರಿಯಾಯಿತಿಗಳ ಆಕರ್ಷಣೆಗೆ ಒಳಗಾಗಿ ಯಾವುದಾದರೂ ಒಂದು ದ್ವಿಚಕ್ರ ವಾಹನ ಖರೀದಿ ಮಾಡಿಬಿಡುತ್ತೇವೆ. ಒಬ್ಬ ಜಾಗೃತ ಗ್ರಾಹಕನಾಗಿ ಕೆಲವು ವಿಷಯಗಳನ್ನು ತಿಳಿದಿರಬೇಕಾಗುತ್ತದೆ. ಮಹಿಳೆಯರಿಗಾಗಿ ದ್ವಿಚಕ್ರ ವಾಹನ ಖರೀದಿಸುವಾಗ ಯಾವ ವಿಷಯಗಳ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂಬ ಬಗ್ಗೆ ನಿಮಗೆ ಗೊತ್ತೆ?

* ನಿಮ್ಮ ಬಜೆಟ್ ಎಷ್ಟಿದೆಯೋ ಆ ಮೊತಕ್ಕೆ ಯಾವ ಬ್ರಾಂಡ್‌ನ ವಾಹನ ಸಿಗುತ್ತದೆ ಮೊದಲು ತಿಳಿಯಿರಿ.
* ಈಗಾಗಲೇ ಮಾರುಕಟ್ಟೆಯಲ್ಲಿರುವ ವಾಹನವಾಗಿದ್ದರೆ, ಬಳಕೆದಾರರ ಪ್ರತಿಕ್ರಿಯೆ ಹೇಗಿದೆ ಎಂಬುದನ್ನು ತಿಳಿಯಿರಿ.
* ಹೆಚ್ಚಿನ ತೂಕದ ವಾಹನ ಖರೀದಿಸಬೇಡಿ. ಹೆಲ್ಮೆಟ್ ಈಗ ಎಲ್ಲೆಡೆ ಕಡ್ಡಾಯವಾಗಿರುವುದರಿಂದ ಅದಕ್ಕೆ ಮತ್ತು ವ್ಯಾನಿಟಿ ಬ್ಯಾಗ್ ಇತ್ಯಾದಿ ಮಹಿಳೆಯರಿಗೆ ಸಂಬಂಧಿಸಿದ ವಸ್ತುಗಳನ್ನು ಇಟ್ಟುಕೊಳ್ಳುವುದಕ್ಕೆ ಸ್ಥಳವಿದೆಯಾ ನೋಡಿ.
* ಹೊಸ ಹೊಸ ಹೆಸರಿನ, ಕಂಪನಿಯ ವಾಹನಗಳು ಮಾರುಕಟ್ಟೆಗೆ ಬರುತ್ತಿವೆ. ಆಕರ್ಷಕವಾಗಿರಬಹುದು, ಕೆಟ್ಟಾಗ ದುರಸ್ತಿ ಮಾಡಿಸಲು ಬಿಡಿ ಭಾಗಗಳು ಸಿಗುತ್ತವೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ.

(ಕೃಪೆ: ಕನ್ನಡಪ್ರಭ)



Follow us on Google Plus

Follow us on Facebook and twitter

Subscribe our youtube channel

Get Latest News in your e-mail Inbox!