Top

ಹೊಸ ಅವತಾರದಲ್ಲಿ ಟೊರೆಂಟ್ಸ್


Asianet News Wednesday 10 August 2016 12:12 pm IST Gadgets
ಹೊಸ ಅವತಾರದಲ್ಲಿ ಟೊರೆಂಟ್ಸ್
10 Aug

ಕಳೆದ ವಾರ ತನ್ನ ಸೇವೆಯನ್ನು ಸ್ಥಗಿತಗೊಳಿಸಿರುವುದಾಗಿ ಪ್ರಕಟಿಸಿದ್ದ ಟೊರೆಂಟ್ಸ್ ಈಗ ಮರುಜನ್ಮ ಪಡೆದಿದೆ. ಹೊಸ ಅವತಾರದಲ್ಲಿ ಬಂದಿರುವ  ಟೊರೆಂಟ್ಸ್2.ಇಯು  ಹಳೆ ಟೊರೆಂಟ್ಸ್ ಅನ್ನೇ ಹೋಲುತ್ತದೆ.

ಗೋಪ್ಯತೆಗೆ ಸಂಬಂಧಿಸಿದ ಕಾನೂನುಗಳನ್ನು ಉಲ್ಲಂಘಿಸಿದ ಆರೋಪದಡಿಯಲ್ಲಿ ಜನಪ್ರಿಯ ಕಿಕ್ಯಾಸ್ ಟೊರೆಂಟ್ಸ್ ಸ್ಥಾಪಕನನ್ನು ಕೆಲವು ವಾರಗಳ ಹಿಂದೆ ಬಂಧಿಸಲಾಗಿತ್ತು.

ಆ ಬಳಿಕ ಟೊರೆಂಟ್ಸ್ ತನ್ನ ಹದಿಮೂರುವರ್ಷ ‘ಸೇವೆ’ಯನ್ನು ಅಂತ್ಯಗೊಳಿಸುವುದಾಗಿ ಪ್ರಕಟಿಸಿತ್ತು. (ಟೊರೆಂಟ್ಸ್ ಇನ್ನಿಲ್ಲ...!!!)

ಹೊಸ ಹೊಸ ಚಲನಚಿತ್ರಗಳನ್ನು ಇಂಟರ್ನೆಟ್’ನಲ್ಲಿ ಹುಡುಕಿ ಉಚಿತವಾಗಿ ವೀಕ್ಷಿಸುವ ಬಳಕೆದಾರರಿಗೆ ಅದೊಂದು ಅಘಾತಕಾರಿ ಸುದ್ದಿಯಾಗಿತ್ತು. 

ಹಕ್ಕುಸ್ವಾಮ್ಯ ವಿಚಾರಗಳಿಗೆ ಸಂಬಂಧಿಸಿ ಟೊರೆಂಟ್ಸ್ ವೆಬ್’ಸೈಟ್’ಗಳು ವಿಶ್ವಾದಾದ್ಯಂತ ಹಲವಾರು ಸರ್ಕಾರಗಳ ಕೆಂಗಣ್ಣಿಗೆ ಗುರಿಯಾಗಿತ್ತು.

Tags:


Follow us on Google Plus

Follow us on Facebook and twitter

Subscribe our youtube channel

Get Latest News in your e-mail Inbox!