Top

50 ರೂಪಾಯಿಗೆ 1ಜಿಬಿ 4G ಡೇಟಾ: 2,999 ರೂ.ಗೆ 4ಜಿ ಜಿಯೋ ಸ್ಮಾರ್ಟ್'ಪೋನ್


Asianet News Thursday 01 September 2016 12:12 pm IST Mobile
50 ರೂಪಾಯಿಗೆ 1ಜಿಬಿ 4G ಡೇಟಾ: 2,999 ರೂ.ಗೆ 4ಜಿ ಜಿಯೋ ಸ್ಮಾರ್ಟ್'ಪೋನ್
01 Sep

ಮುಂಬೈ(ಸೆ.01): ದೇಶದ ಡಿಜಿಟಲ್ ಸೇವೆಯಲ್ಲಿ ಇಂದು ಹೊಸ ಕ್ರಾಂತಿಯೊಂದು ಸೃಷ್ಟಿಯಾಗಿದೆ. ಬಹುನಿರೀಕ್ಷಿತ ರಿಲಾಯನ್ಸ್ ಜಿಯೋ 4G ಇಂದು ಬಿಡುಗಡೆಗೊಂಡಿದ್ದು, ಮುಂಬೈನಲ್ಲಿ ಮುಖೇಶ್ ಅಂಬಾನಿ ನೇತೃತ್ವದಲ್ಲಿ ಸಮಾರಂಭ ನಡೆಯಿತು.

ಸಮಾರಂಭದಲ್ಲಿ ಷೇರುದಾರರನ್ನು ಉದ್ದೇಶಿಸಿ ಮಾತನಾಡಿದ, ರಿಲಾಯನ್ಸ್ ಮುಖ್ಯಸ್ಥ ಮುಖೇಶ್ ಅಂಬಾನಿ, ಡಿಜಿಟಲ್ ಸೇವೆಯಲ್ಲಿ ಇದೊಂದು ಹೊಸ ಕ್ರಾಂತಿಯಾಗಿದೆ. ಪ್ರತಿಯೊಬ್ಬರಿಗೂ ಈ ಮೊಬೈಲ್ ಸಿಗುವಂತೆ ಮಾಡುವುದು ನಮ್ಮ ಗುರಿಯಾಗಿದೆ ಎಂದಿದ್ದಾರೆ.

ಜಿಯೋ 4G ವಿಶೇಷಗಳು: 18 ಸಾವಿರ ನಗರಗಳಲ್ಲಿ ಜಿಯೋ 4G ಸಂಪರ್ಕ ದೊರೆಯಲಿದ್ದು, ಕೇವಲ 2,999 ರೂ.ಗೆ 4ಜಿ ಜಿಯೋ ಸ್ಮಾರ್ಟ್​ಫೋನ್ ಲಭ್ಯವಾಗುತ್ತಿದೆ. 90 ದಿನಗಳು ಫ್ರಿ ಇನ್​ಕಮಿಂಗ್, ಔಟ್​ಗೋಯಿಂಗ್ ಕರೆಗಳು ಕೊಡುಗೆಯಾಗಿ ನೀಡಲಿದ್ದು, ನಂತರ 50 ರೂಪಾಯಿಗೆ 1ಜಿಬಿ ಡೇಟಾ ಇಂಟರ್​ನೆಟ್ ಫ್ರಿ ನೀಡುವುದಾಗಿ ಕಂಪನಿ ತಿಳಿಸಿದೆ.

 

Tags:


Follow us on Google Plus

Follow us on Facebook and twitter

Subscribe our youtube channel

Get Latest News in your e-mail Inbox!