Top

ಜಿಯೋ ಬೊಂಬಾಟ್ ಆಫರ್ ...! ಫ್ರೀ ವಾಯ್ಸ್ ಕಾಲ್, ಕಮ್ಮಿ ಬೆಲೆಗೆ ಡೇಟಾ ಇಷ್ಟೆ ಅಲ್ಲ....


Asianet News Thursday 01 September 2016 02:14 pm IST Mobile
ಜಿಯೋ ಬೊಂಬಾಟ್ ಆಫರ್ ...! ಫ್ರೀ ವಾಯ್ಸ್ ಕಾಲ್, ಕಮ್ಮಿ ಬೆಲೆಗೆ ಡೇಟಾ ಇಷ್ಟೆ ಅಲ್ಲ....
01 Sep

ದೆಹಲಿ(ಸೆ.01): ಬಹುನಿರೀಕ್ಷಿತ ರಿಲಿಯನ್ಸ್‌ ಜಿಯೋ ಟಾರಿಫ್‌ ದರವನ್ನು ರಿಲಿಯನ್ಸ್‌ ಇಂಡಸ್ಟ್ರೀಸ್‌ ಚೇರ್ಮನ್‌ ಮುಖೇಶ್‌ ಅಂಬಾನಿ ಗುರುವಾರ ಘೋಷಿಸಿದ್ದಾರೆ. ರಿಲಯನ್ಸ್‌ ಇಂಡಸ್ಟ್ರೀಸ್‌ ಲಿಮಿಟೆಡ್‌ ನ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅಂಬಾನಿ, ಜಿಯೋ ಬಳಕೆದಾರರಿಗೆ ಫ್ರೀ ವಾಯ್ಸ್‌ ಕಾಲಿಂಗ್‌ ನೀಡುವುದಾಗಿ ತಿಳಿಸಿದ್ದಾರೆ.

ಭಾರತದ ಯಾವುದೇ ಸ್ಥಳದಿಂದಾರೂ ಉಚಿತವಾಗಿ ಜಿಯೋ ಬಳಕೆದಾರರು ವಾಯ್ಸ್‌ ಕಾಲ್‌ ಮಾಡಬಹುದು. ಇದರ ಜೊತೆಗೆ ರೊಮಿಂಗ್‌ ಕಾಲ್‌ ರೇಟ್‌ ಕೂಡಾ ಜಿರೋ ಆಗಿರಲಿದೆ. ಅಲ್ಲದೇ ಗ್ರಾಹಕರು ವಾಯ್ಸ್‌ ಅಥವಾ ಡಾಟಾ ಇವರೆಡರಲ್ಲಿ ಒಂದಕ್ಕೆ ಮಾತ್ರ ದುಡ್ಡು ನೀಡಬೇಕೆಂದು ಅಂಬಾನಿ ವಿವರಿಸಿದ್ದಾರೆ.

ಭಾರತದಲ್ಲಿರುವ ಡಾಟಾ ಕೊರತೆಯನ್ನು ನೀಗಿಸುವತ್ತ ರಿಲಿಯನ್ಸ್‌ ಜಿಯೋ ಹೆಜ್ಜೆ ಇಟ್ಟಿದೆ. ಡಾಟಾ ಎನ್ನುವುದು ಡಿಜಿಟಲ್‌ ಜೀವನದ ಆಮ್ಲಜನಕವಿದ್ದಂತೆ. ಅದರಂತೆ ಗ್ರಾಹಕರಿಗೆ ಯಾವುದೇ ಕಾರಣಕ್ಕೂ ಡಾಟಾ ಕೊರತೆ ಕಾಡದಂತೆ ನೋಡಿಕೊಳ್ಳುವುದು ಜಿಯೋನ ಉದ್ದೇಶ ಎಂದು ಹೇಳಿದ್ದಾರೆ.

ಜಿಯೋ ಸೌಲಭ್ಯಗಳ ವಿವರ
1. ಜಿಯೋದ ಮುಖ್ಯ ಟ್ಯಾರಿಫ್‌ ನಲ್ಲಿ ವಿದ್ಯಾರ್ಥಿಗಳು ಶೇ. 25 ರಷ್ಟು ಹೆಚ್ಚಿನ ಡಾಟಾ ಪಡೆಯಲಿದ್ದಾರೆ.

2. ಇನ್ನು ರಿಲಯನ್ಸ್‌ಜಿಯೋ ಕೇವಲ ಅತೀ ಕಡಿಮೆ ದರದಲ್ಲಿ ಡಾಟಾ ಪ್ಯಾಕೇಜ್‌ ನೀಡುತ್ತಿದೆ. ಕೇವಲ 50 ರೂಪಾಯಿಗೆ ಒಂದು ಜಿಬಿ ಡಾಟಾವನ್ನು ರಿಲಿಯನ್ಸ್‌ನೀಡಲಿದೆ.

3. ರಿಲಯನ್ಸ್‌ ಜಿಯೋ ಗ್ರಾಹಕರು ಭಾರತದ ಯಾವುದೇ ಸ್ಥಳದಿಂದ ಫ್ರೀ ವಾಯ್ಸ್‌ ಕಾಲಿಂಗ್‌ ಮಾಡಬಹುದು. ಜೊತೆಗೆ ಯಾವುದೇ ರೋಮಿಂಗ್‌ ಕೂಡಾ ಇಲ್ಲ. ಡಾಟಾ ಅಥವಾ ವಾಯ್ಸ್‌ ಈ ಎರಡರಲ್ಲಿ ಒಂದಕ್ಕೆ ಮಾತ್ರ ಗ್ರಾಹಕರು ಹಣ ನೀಡಬೇಕು.

4. ಸೋಮವಾರದವರೆಗೆ ಜಿಯೋ ರಿಲಯನ್ಸ್‌ ಜಿಯೋ ಸೇವೆ ಪಡೆಯಲು ಅವಕಾಶವಿದೆ. ಮತ್ತು ಜಿಯೋ ಹೊಂದಿದ ಗ್ರಾಹಕರಿಗೆ ಈ ವರ್ಷಾಂತ್ಯದವರೆಗೆ ಯಾವುದೇ ದರವಿಲ್ಲ.

5. ಜಿಯೋ ಗ್ರಂಥಾಲಯದಲ್ಲಿ ಸುಮಾರು 6 ಸಾವಿರ ಸಿನಿಮಾಗಳಿರಲಿವೆ. ಅಲ್ಲದೆ 10 ದಶಲಕ್ಷ ಹಾಡುಗಳನ್ನು ಜಿಯೋ ಹೊಂದಿರಲಿದೆ.

6. ದೀಪಾವಳಿ ಸೇರಿದಂತೆ ವಿಶೇಷ ದಿನಗಳಲ್ಲಿ ಬೇರೆ ಕಂಪನಿಗಳು ಗ್ರಾಹಕರಿಗೆ ಎಸ್‌ ಎಂ ಎಸ್‌ ಸೇರಿದಂತೆ ಕಾಲಿಂಗ್‌ನಲ್ಲಿ ವಿಧಿಸುವ ಹೆಚ್ಚುವರಿ ದರವನ್ನು ರಿಲಿಯನ್ಸ್‌ ಜಿಯೋ ತನ್ನ ಗ್ರಾಹಕರಿಗೆ ವಿಧಿಸುವುದಿಲ್ಲ.

 Follow us on Google Plus

Follow us on Facebook and twitter

Subscribe our youtube channel

Get Latest News in your e-mail Inbox!