ಸಾಮಾಜಿಕ ಜಾಲತಾಣಗಳಲ್ಲೇ ಅತ್ಯಂತ ಜನಪ್ರಿಯವಾದ ವಾಟ್ಸ್ ಆ್ಯಪ್ ತಮ್ಮ ಬಳಕೆದಾರರ ಖಾತೆಯ ವಿವರಗಳನ್ನು ತನ್ನ ಮಾತೃ ಸಂಸ್ಥೆಯಾದ ಫೇಸ್'ಬುಕ್'ನೊಂದಿಗೆ ಹಂಚಿಕೊಳ್ಳಲು ಮುಂದಾಗಿದೆ.
ಗೌಪ್ಯತೆಗೆ ಸಂಬಂಧಿಸಿದಂತೆ ಜಗತ್ತಿನಾದ್ಯಂತ ಸಾಕಷ್ಟು ಚರ್ಚೆಯಾಗುತ್ತಿರುವ ಬೆನ್ನಲ್ಲೇ ವಾಟ್ಸ್ ಆ್ಯಪ್ ಫೇಸ್'ಬುಕ್'ನೊಂದಿಗೆ ಮಾಹಿತಿ ಹಂಚಿಕೊಳ್ಳಲು ಮುಂದಾಗಿರುವುದು ಬಳಕೆದಾರರಲ್ಲಿ ಸಾಕಷ್ಟು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಗೌಪ್ಯತೆಯ ದೃಷ್ಠಿಯಿಂದ ಸಾಕಷ್ಟು ಸುರಕ್ಷಿತವೆನಿಸಿರುವ ವಾಟ್ಸ್ ಆ್ಯಪ್ ಸಾಕಷ್ಟು ಜನಪ್ರಿಯತೆಯನ್ನು ಮನಗಂಡ ಫೇಸ್'ಬುಕ್ 2014ರಲ್ಲಿ ಅದನ್ನು ಖರೀದಿಸಿತ್ತು. ಇದೀಗ ವಾಟ್ಸ್ ಆ್ಯಪ್ ಪ್ರೈವಸಿಗೆ ಸಂಬಂಧಿಸಿದ ತನ್ನ ನೀತಿಯನ್ನು ಪರಿಷ್ಕೃತಗೊಳಿಸಲು ಮುಂದಾಗಿದೆ.
ಆದರೆ ಫೇಸ್'ಬುಕ್'ನೊಂದಿಗೆ ಮಾಹಿತಿ ಹಂಚಿಕೆ ಮಾಡಲು ಮುಂದಾಗಿರುವುದು ಬಳಕೆದಾರರ ಆತಂಕಕ್ಕೆ ಕಾರಣವಾಗಿದೆ.
ನಿಮ್ಮ ಮಾಹಿತಿಯನ್ನು ಫೇಸ್'ಬುಕ್ ಜತೆ ಹಂಚಿಕೊಳ್ಳಬಾರದೆಂದರೆ ಹೀಗೆ ಮಾಡಿ:
ವಾಟ್ಸ್ ಆ್ಯಪ್ ಬಳಕೆದಾರರು ತಮ್ಮ ಖಾತೆಯ ಮಾಹಿತಿಯನ್ನು ಹಂಚಿಕೊಳ್ಳದಿರಲು ಕೂಡ ವಾಟ್ಸ್ ಆ್ಯಪ್ ಅವಕಾಶ ನೀಡಿದೆ. ಇದಕ್ಕಾಗಿ ವಾಟ್ಸ್ ಆ್ಯಪ್ ಸೆಟ್ಟಿಂಗ್'ನಲ್ಲಿ 'ಷೇರ್ ಮೈ ಅಕೌಂಟ್ ಇನನ್ಫೋ' ವಿಭಾಗದಲ್ಲಿ 'ಡೋಂಟ್ ಶೇರ್'ಗೆ ಕ್ಲಿಕ್ ಮಾಡುವ ಮೂಲಕ ಗೌಪ್ಯತೆ ಕಾಪಾಡಿಕೊಳ್ಳಬಹುದು.