Top

ಆಪರೇಷನ್ ರೋಮಿಯೋ: 121 ಜನರ ಬಂಧನ


Asianet News Sunday 04 September 2016 06:18 pm IST India
ಆಪರೇಷನ್ ರೋಮಿಯೋ: 121 ಜನರ ಬಂಧನ
04 Sep

ಗುರುಗ್ರಾಮ (ಸೆ.04): ಹರಿಯಾಣದಲ್ಲಿ  ರೋಡ್ ರೋಮಿಯೋಗಳ ವಿರುದ್ಧ ಆಪರೇಷನ್ ಮುಂದುವರೆದಿದೆ.  ಇಲ್ಲಿನ ಗುರುಗ್ರಾಮದಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿ  121 ರೋಡಿಯೋ ರೋಮಿಯೋಗಳನ್ನು ಬಂಧಿಸಿದ್ದಾರೆ. ಇಲ್ಲಿನ ಎಂ.ಜಿ ರಸ್ತೆಯಲ್ಲಿ ರೋಡ್ ರೋಮಿಯೋಗಳ ಹಾವಳಿ ಹೆಚ್ಚಾಗಿದ್ದು, ಈ ಹಿನ್ನೆಲೆಯಲ್ಲಿ ಪೊಲೀಸರು 'ಆಪರೇಷನ್ ರೋಡ್ ರೋಮಿಯೋ'.

ಕಾರ್ಯಾಚರಣೆಯನ್ನು ಕಳೆದ ವಾರವಷ್ಟೇ ಆರಂಭಿಸಿದ್ದರು. ಇದರಂತೆ ನಿನ್ನೆ ಕೂಡ 'ಆಪರೇಷನ್ ರೋಮಿಯೋ ರಿಟರ್ನ್ಸ್' ಎಂದು ಕಾರ್ಯಾಚರಣೆಯನ್ನು ಮುಂದುವರೆಸಿ ಕೇವಲ 2 ಗಂಟೆಗಳಲ್ಲೇ 121 ರೋಡ್ ರೋಮಿಯೋಗಳನ್ನು ಬಂಧಿಸಿದ್ದಾರೆ. ನಗರದಲ್ಲಿ ಯುವತಿಯರನ್ನು ಚುಡಾಯಿಸುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕಾರ್ಯಾಚರಣೆಯನ್ನು ಆರಂಭ ಮಾಡಲಾಗಿತ್ತು.

(ಸಾಂದರ್ಭಿಕ ಚಿತ್ರ)

Tags:


Follow us on Google Plus

Follow us on Facebook and twitter

Subscribe our youtube channel

Get Latest News in your e-mail Inbox!