Top

ಕೋಲ್ಕತಾದಲ್ಲಿ ಬಾಲಕಿಯ ಮೇಲೆ ಇಬ್ಬರು ಕ್ಯಾಬ್ ಡ್ರೈವರ್'ಗಳಿಂದ ಗ್ಯಾಂಗ್ ರೇಪ್, ಕೊಲೆ


Asianet News Wednesday 31 August 2016 08:20 pm IST India
ಕೋಲ್ಕತಾದಲ್ಲಿ ಬಾಲಕಿಯ ಮೇಲೆ ಇಬ್ಬರು ಕ್ಯಾಬ್ ಡ್ರೈವರ್'ಗಳಿಂದ ಗ್ಯಾಂಗ್ ರೇಪ್, ಕೊಲೆ
31 Aug

ಕೋಲ್ಕತಾ(ಆಗಸ್ಟ್ 31): ಇಬ್ಬರು ಓಲಾ ಕಂಪನಿಯ ಕ್ಯಾಬ್ ಡ್ರೈವರ್'ಗಳು 12 ವರ್ಷದ ಬಾಲಕಿಯನ್ನು ಅಪಹರಿಸಿ, ಸಾಮೂಹಿಕರವಾಗಿ ಅತ್ಯಾಚಾರ ಎಸಗಿ ಕೊಲೆಗೈದಿರುವ ಘೋರ ಘಟನೆ ನಡೆದಿರುವುದು ವರದಿಯಾಗಿದೆ. ಪೊಲೀಸರು ಈ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. 2012ರ ನಿರ್ಭಯಾ ರೇಪ್ ಪ್ರಕರಣವನ್ನು ನೆನಪಿಸುವ ಈ ಘಟನೆ ಕೋಲ್ಕತಾ ಜನರನ್ನು ಬೆಚ್ಚಿಬೀಳಿಸಿದೆ.

ಕಾಮುಕರ ಅಟ್ಟಹಾಸಕ್ಕೆ ತುತ್ತಾದ ಹುಡುಗಿ ಬೀದಿಬದಿಯಲ್ಲಿ ಬದುಕುತ್ತಿರುವ ಬಡ ಕುಟುಂಬದವಳಾಗಿದ್ದಾಳೆ. ಕುಡಿತದ ಮೋಜಿನಲ್ಲಿದ್ದ ಕ್ಯಾಬ್ ಚಾಲಕರ ಕಣ್ಣಿಗೆ ಈ ದುರ್ದೈವಿ ಹುಡುಗಿ ಬೀಳುತ್ತಾಳೆ. ಈಕೆಯನ್ನು ಕ್ಯಾಬ್'ಗೆ ಎಳೆದೊಯ್ಯುತ್ತಾರೆ. ನಗರದ ದಕ್ಷಿಣ ಭಾಗದಲ್ಲಿರುವ ಪಾರ್ಕ್ ಸರ್ಕಸ್ ಫ್ಲೈಓವರ್ ಬಳಿ ಕ್ಯಾಬನ್ನು ನಿಲ್ಲಿಸಿ ಸರದಿಯಂತೆ ಆಕೆಯ ಮೇಲೆ ಅತ್ಯಾಚಾರ ಎಸಗುತ್ತಾರೆ. ರಾತ್ರಿಯಿಡೀ ಆಕೆಯನ್ನು ರೇಪ್ ಮಾಡಿದ ಬಳಿ ಕತ್ತು ಹಿಸುಕಿ ಕೊಲ್ಲುತ್ತಾರೆ. ನಂತರ ಬೆಳಗ್ಗೆ 5ಗಂಟೆ ಸುಮಾರಿನಲ್ಲಿ ಆಕೆಯ ದೇಹವನ್ನು ಸಮೀಪದ ಕಾಲುವೆಗೆ ಎಸೆದುಹೋಗುತ್ತಾರೆ.

ತನ್ನ ಮಗಳು ಅಪಹರಣವಾಗುವುದನ್ನು ಕಂಡಿದ್ದ ಬಾಲಕಿಯ ತಾಯಿ ನೀಡಿದ ವಿವರದ ಆಧಾರದ ಮೇಲೆ ಪೊಲೀಸರು ಇಬ್ಬರು ಆರೋಪಿಗಳನ್ನು ಹಿಡಿಯುವಲ್ಲಿ ಯಶಸ್ವಿಯಾಗುತ್ತಾರೆ.Follow us on Google Plus

Follow us on Facebook and twitter

Subscribe our youtube channel

Get Latest News in your e-mail Inbox!