Top

ಬೆಂಗಳೂರಲ್ಲಿ ಮನೆ ಒಡತಿಗೆ ಕಾರು ಚಾಲಕನಿಂದ ಹಲ್ಲೆ


Asianet News Saturday 03 September 2016 12:12 pm IST Karnataka
ಬೆಂಗಳೂರಲ್ಲಿ ಮನೆ ಒಡತಿಗೆ ಕಾರು ಚಾಲಕನಿಂದ ಹಲ್ಲೆ
03 Sep

ಬೆಂಗಳೂರು(ಸೆ.03): ಮನೆ ಒಡತಿಯನ್ನೇ  ಕಾರು ಚಾಲಕ ಹಲ್ಲೆ ನಡೆಸಿ ಪರಾರಿಯಾದ ಘಟನೆ  ಬೆಂಗಳೂರಿನ ಹುಳಿಮಾವಿನಲ್ಲಿ ನಡೆದಿದೆ.

ಕಾರು ಚಾಲಕ ನಾಗೇಶ್​ ಎಂಬಾತ  ಕಾರಿನ ಒಡತಿ ಸುನಂದಾ ಮೇಲೆ ಹಲ್ಲೆ ನಡೆಸಿ, ಚಿನ್ನಾಭರಣ, ನಗದು ದೋಚಿ ಕಾರಿನ ಜೊತೆ ಪರಾರಿಯಾಗಿದ್ದಾನೆ. ಆರೋಪಿ ಚಾಲಕ ರಾಜೇಶ್ ಎಂಬಾತ ​​ಸುನಂದಾರ ಮನೆಯ ಕಾರುಚಾಲಕನಾಗಿ ಕೆಲಸ ಮಾಡುತ್ತಿದ್ದ.  ರಾತ್ರಿ ಕೆಲಸ ಮುಗಿಸಿ ಅಪಾರ್ಟ್​ಮೆಂಟ್​ಗೆ ಬಂದಿದ್ದ ಮಹಿಳೆ, ಆ ನಂತರ ಬೇರೆಡೆ ಕಾರಿನಲ್ಲಿ ಹೊರಟಿದ್ದರು.

ಈ ವೇಳೆ ಚಾಕು ತೋರಿಸಿ ಚಿನ್ನ, ನಗದು ದೋಚಿ ಪರಾರಿಯಾಗಿದ್ದಾನೆ. ಘಟನೆ ಸಂಬಂಧ ಹುಳಿಮಾವು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



Follow us on Google Plus

Follow us on Facebook and twitter

Subscribe our youtube channel

Get Latest News in your e-mail Inbox!