Top

ಸುವರ್ಣ ಸ್ನೇಹ: ಆತ್ಮೀಯ ಸ್ನೇಹಿತರೊಂದಿಗಿನ ಮಧುರ ಕ್ಷಣಗಳು...!


Asianet News Sunday 07 August 2016 02:14 pm IST Suvarna Sneha
ಸುವರ್ಣ ಸ್ನೇಹ: ಆತ್ಮೀಯ ಸ್ನೇಹಿತರೊಂದಿಗಿನ ಮಧುರ ಕ್ಷಣಗಳು...!
07 Aug

ಯುವ ಮನಸ್ಸುಗಳಿಗೆ ಇಂದು ಹಬ್ಬ. ಸುಮಧುರ ಸಂಬಂಧವಾದ 'ಸ್ನೇಹ'ಕ್ಕೆ ಗೌರವ ನೀಡುವ ದಿನ ಇವತ್ತು. ಜೀವನದಲ್ಲಿ ಅತೀ ಮುಖ್ಯ ಪಾತ್ರವಹಿಸೋ ಗೆಳೆಯರನ್ನು ನೆನಪಿಸಿಕೊಂಡು, ಪರಸ್ಪರ ಶುಭಾಷಯಗಳನ್ನು ವಿನಿಮಯ ಮಾಡಿಕೊಂಡು.. ಗೆಳೆತನದ ಆನಂದವನ್ನು ಅನುಭವಿಸುವ ದಿನವೇ 'ವಿಶ್ವ ಗೆಳೆಯರ ದಿನ'...

ಗೆಳೆಯರ ದಿನದ ಅಂಗವಾಗಿ ನಿಮ್ಮ ಬದುಕಿನ ಪಯಣದಲ್ಲಿ ಜೊತೆಯಾದ ಗೆಳೆಯರನ್ನು ನೆನಪಿಸಿ ಅವರಿಗೆ ಶುಭಾಷಯ ಕೋರಲು 'ಸುವರ್ಣ ಸ್ನೇಹ' ಎಂಬ ವೇದಿಕೆಯನ್ನು ಕಲ್ಪಿಸಿ, ನಿಮ್ಮ ಆತ್ಮೀಯ ಗೆಳೆಯರೊಂದಿಗೆ ಕ್ಲಿಕ್ಕಿಸಿದ ಫೋಟೋ ಹಾಗೂ ಪುಟ್ಟ ಸಂದೇಶವನ್ನು ಆಹ್ವಾನಿಸಿದ್ದೆವು.

ನಿಮ್ಮ ಸ್ನೇಹಕ್ಕೆ ಸುವರ್ಣ ಸೇತುವೆಯಾಗಬಲ್ಲ ಈ ಅವಕಾಶಕ್ಕೆ ಸಾಕಷ್ಟು ಸ್ನೇಹಿತರು ಪ್ರತಿಕ್ರಿಯಿಸಿ ತಮ್ಮ ಸ್ನೇಹಿತರೊಂದಿಗಿನ ಫೋಟೋಗಳನ್ನು ಕಳುಹಿಸಿದ್ದಾರೆ. ಅವುಗಳಲ್ಲಿ ಉತ್ತಮವೆನಿಸಿದ ಫೋಟೋಗಳು ಈ ಕೆಳಗಿನಂತಿವೆ.

ಸ್ನೇಹಿತ ಅಶೋಕ್‌ ಮದುವೆಗೆ ಸ್ನೇಹಿತರೊಂದಿಗೆ ಬೈಕ್‌ನಲ್ಲಿ ಹೆಚ್ಚಾಳದಿಂದ ಹೊರಡುವ ಮೊದಲು ಸ್ನೇಹಿತರಾದ ರವಿಚಂದ್ರ, ವಿಶ್ವನಾಥ ಹಾಗೂ ನಂದೀಶ್‌ ಜೊತೆ ತೆಗೆದು ಸೆಲ್ಫಿ. ನನ್ನೆಲ್ಲ ಅಪ್ತಮಿತ್ರರರಿಗೆ ಸ್ನೇಹಿತರ ದಿನಾಚರಣೆಯ ಶುಭಾಷಯಗಳು. ಸ್ನೇಹಿತರೆಲ್ಲ ಎಂದೆಂದಿಗೂ ಹೀಗೆ ಜೊತೆಯಾಗಿರೋಣ.

-ಸುನೀಲ್ ಕುಮಾರ್, ಬೆಂಗಳೂರು

 

ನೆನಪುಗಳಿಗೆ ಮರಣವಿಲ್ಲ, ಅವು ಶಾಶ್ವತ... ಹಾಗೆಯೇ ನಿಜವಾದ ಗೆಳೆಯರೂ ನಮ್ಮಿಂದ ಯಾವತ್ತೂ ದೂರ ಹೋಗುವುದಿಲ್ಲ

-ಗೌತಮ್ ಗೌಡ

 Suvarna Sneha: Selfie With Bestie_Gowtham Gowda

 

 

ಸ್ನೇಹ ಎನ್ನುವುದು ಪ್ರತಿಯೊಬ್ಬರ ಜೀವನದಲ್ಲೂ ಎಂದೂ ಮರೆಯಲಾರದ ಅನುಭವ ನೀಡುವ ಸಂಬಂಧ. ಸ್ನೇಹಕ್ಕೆ ಯಾವುದೇ ಜಾತಿ ಧರ್ಮದ ಹಂಗಿಲ್ಲ. ನಮ್ಮ ತಂದೆ ತಾಯಿಗಳ ಹತ್ತಿರವೂ ಹೇಳಿಕೊಳ್ಳಲಾಗದ ನಮ್ಮ ಭಾವನೆಗಳನ್ನು ಆಪ್ತ ಸ್ನೇಹಿತರ ಬಳಿ ಯಾವುದೇ ಹಿಂಜರಿಕೆಯಿಲ್ಲದೇ ಹೇಳಿಕೊಂಡು ಬಿಡುತ್ತೇವೆ. ನನ್ನ ಸಾಕಷ್ಟು ಸಂತಸದ ಕ್ಷಣಗಳಿಗೆ, ನೋವುಗಳಿಗೆ ಸದಾ ಸ್ಪಂದಿಸುವ ಸ್ನೇಹಿತರಿರವರು... ಹ್ಯಾಪಿ ಫ್ರೆಂಡ್'ಶಿಪ್ ಡೇ ಸಚ್ಚಿ, ದಿಲಿ, ಸಂತೂ, ಶಶಿ.....  

-ನವೀನ್ ಕೊಡಸೆ

 Suvarna Sneha: Selfie With Besties_Naveen Kodase

 

ಸ್ನೇಹ- ವ್ಯಾಖ್ಯಾನಕ್ಕೆ ನಿಲುಕದ್ದು...

-ವೇಣುಗೋಪಾಲ

Suvarna Sneha: Selfie With Bestie_Venugopala

 

 

ಈ ದೋಸ್ತೀನೆ ನಮ್ಗೆ ಆಸ್ತಿ,ಇಲ್ಲಿಲ್ಲ ಯಾವ ಕುಸ್ತಿ. ನಾವ್ ಮಾಡೋದೇ ಮಸ್ತಿ, ನಮ್ಮೀ ಬಾಳಲ್ಲಿ ಮಜವೇ ಜಾಸ್ತಿ 

-ಶಿವ ಎಸ್.

Suvarna Sneha-Selfie With Bestie_Shiva S

 

 

ಪೋಟೋದಲ್ಲಿರುವವರು ಪ್ರಶಾಂತ ಅಸುಂಡಿ, ಗಣೇಶ ರಾಯ್ಕರ. ಸದಾ ಯಾವುದಾದರೂ ಒಂದು ರೀತಿಯಲ್ಲಿ ನೋಯಿಸುತ್ತಾ ಇರುತ್ತೀನಿ. ಆದರೆ ಯಾವತ್ತೂ  ನನ್ನಿಂದ ದೂರ ಸರಿದಿಲ್ಲ ನನಗೆ ಅನಿಸುತ್ತೆ ಕ್ಷಮೆಗೆ ಅರ್ಹನಲ್ಲ, ಯೋಗ್ಯನಲ್ಲ  ಈ ಫ್ರೆಂಡ್ ಶಿಪ್ ಡೇ ಮೂಲಕ ಅನಂತ ಅನಂತ ಧನ್ಯವಾದಗಳನ್ನು ಅರ್ಪಿಸುತ್ತೇನೆ.

-ಸಂತೋಷ್

Suvarna Sneha:Selfie With Bestie_Santhosh

 

 

ಗೆಳೆಯ ಸಮೀರ್‌ ಬಹುದಿನಗಳ ಬೇಡಿಕೆ ಮೇರೆಗೆ ರಂಜಾನ್‌ ಬೋಜನ ಕೂಟಕ್ಕೆ ತೆರಳಿದ್ದೆವು. ಎಲ್ಲಾ ಗೆಳೆಯರು ಕಾಲೇಜು ದಿನಗಳ ನಂತರ ಭೇಟಿಯಾದಾಗ, ಕೋಲಾರ ಬೆಟ್ಟದ ಮೇಲೇರಿ ಜಿನುಗುವ ಮಳೆಯಲ್ಲಿ ಹರಟಿದ ಕ್ಷಣಗಳು .

-ನವೀನ್

Suvarna Sneha:Selfie With Bestie_Naveen

 

 

ಸ್ನೇಹ ಎಂದಾಕ್ಷಣ ನೆನಪಾಗುವ, ಹೃದಯಕ್ಕೆ ಹತ್ತಿರವಾಗುವ ಆತ್ಮೀಯ ತರ‌್ಲೆಗಳಿವರು. 12 ವರ್ಷಗಳ ಹಿಂದೆ ಭರತನಾಟ್ಯ ಕಲಿಯುವಾಗ ನಮ್ಮ ಪರಿಚಯವಾಗಿದ್ದು. ಅಕ್ಕರೆ, ಪ್ರೀತಿ, ಆರೈಕೆ, ಕಾಳಜಿ, ಮಧುರ ಬಾಂದವ್ಯ, ಸ್ವಲ್ಪ ಮುನಿಸು, ಕೋಪ, ಗೇಲಿ ಎಲ್ಲದರ ಮಿಶ್ರಣ ಇವರು. ಯಾರು ಎಷ್ಟೇ ಎತ್ತರಕ್ಕೆ ಬೆಳೆದರೂ ನಮ್ಮ ಸ್ನೇಹ ಅಷ್ಟೇ ನಿಷ್ಕಲ್ಮಷವಾಗಿದೆ. ನಾವು ನೃತ್ಯಗಾರರಾದರಿಂದ ನಮ್ಮ ಪೋಸ್ ಹೀಗಿದೆ!!!

Suvarna Sneha:Selfie With Bestie_Meghashree

-ಮೇಘಶ್ರೀ



Follow us on Google Plus

Follow us on Facebook and twitter

Subscribe our youtube channel

Get Latest News in your e-mail Inbox!