Top

'ಸರಸ್ವತಿ'ಯನ್ನು ಸೇಲ್ ಮಾಡುವ ಪಾಕಡಾ ಜ್ಯೋತಿಷಿಯ ಬಣ್ಣ ಬಯಲು!


Asianet News Saturday 27 August 2016 10:10 am IST Sting Operation
27 Aug

ಬೆಂಗಳೂರು(ಆ.27): ಆತ ಸಕಲ ಕಲಾವಲ್ಲಭ. ಕಾಯಕ ಜ್ಯೋತಿಷಿ. ಆದ್ರೆ ಮಾಡೋದು ಮನೆ ಹಾಳು ಕೆಲಸ. ಇವನು ಮಾಡೋ ಕೆಲಸಕ್ಕೆ ಪೊಲೀಸ್ ಅಧಿಕಾರಿಗಳ ಬೆಂಬಲವೂ ಇದೆಯಂತೆ. ಒಂದು ವೇಳೆ ಈತನ ಕೆಲಸಕ್ಕೆ ಯಾರಾದ್ರೂ ಪ್ರಾಬ್ಲಂ ಮಾಡಿದ್ರೆ, ಇವನ ಬೆನ್ನಿಗೆ ಹಲವು ಸಂಘಟನೆಗಳು ನಿಲ್ತವಂತೆ. ಅಷ್ಟಕ್ಕೂ ಅವನು ಮಾಡೋ ಕೆಲಸ ಕೇಳಿದರೆ ನೀವು ನಿಜಕ್ಕೂ ಬೆಚ್ಚಿಬೀಳ್ತೀರಾ? ಹಾಗಾದ್ರೆ ಈ ಸಕಲ ಕಲಾವಲ್ಲಭ ಮಾಡುವ ಕೆಲಸವಾದರೂ ಏನು? ಆತನ ಬಂಡವಾಳ ಬಯಲಾಗಿದ್ದು ಹೇಗೆ ಇಲ್ಲಿದೆ ಸ್ಟೋರಿ

ಬೆಂಗಳೂರಿನಲ್ಲಿ ಜೋತಿಷ್ಯ ಕೇಂದ್ರಗಳಿಗೆ ಬರವಿಲ್ಲ. ಹಾಗೆಯೇ ಜೋತಿಷ್ಯ ಕೇಂದ್ರಗಳಿಗೆ ಬರುವ ಜನ್ರನ್ನೇ ಬಂಡವಾಳವನ್ನಾಗಿಸಿ ಕೊಂಡಿರುವ ಇಲ್ಲೊಬ್ಬ ಜೋತಿಷಿ ಇದ್ದಾನೆ. ಇವನೇ ಸಕಲ ಕಲಾವಲ್ಲಭ ಪಂಡಿತ್ ಕೆ.ಸಿ.ಚೈತನ್ಯ ಶರ್ಮಾ.

ಈತನ ಹಿನ್ನೆಲೆ ಏನು?

ಆಂಧ್ರ ಪ್ರದೇಶ ಮೂಲ: ಬೆಂಗಳೂರಲ್ಲೇ ಈತನ ಬಂಡವಾಳ

ಇವನು ಮೂಲತಃ ಆಂಧ್ರದವನು. ಹಲವು ವರ್ಷಗಳಿಂದ ಬೆಂಗಳೂರಿನ ಯಲಹಂಕ ಉಪನಗರದ ಅಟ್ಟೂರ್ ಲೇಔಟ್ ನಲ್ಲಿ ವಾಸ ಇದ್ದಾನೆ. ಮನೆ ಕಚೇರಿ ಎರಡೂ ಒಂದೇ. ಮನೆ ಮುಂದೆ ಜ್ಯೋತಿಷಿಯ ಫಲಕ ಬೇರೆ ಇದೆ.

ಇಷ್ಟೇ ಸಾಕಿತ್ತು ನೋಡಿ. ಹೊರಗೆ ಬೋರ್ಡ್​​​​​ ಹಾಕಿಕೊಂಡ ಈತ ಒಳಗೆ ಮಾಡ್ತಿದ್ದ ಕೆಲಸವೇ ಬೇರೆ. ಈತ ಒಂದು ರೀತಿ ಸಕಲ ಕಲಾ ವಲ್ಲಭವೆಂದರೆ ತಪ್ಪಲ್ಲ. ಈ ಮಾತನ್ನು ನಾವು ನಿಮಗೆ ಯಾಕೆ ಹೇಳುತ್ತಾ ಇದ್ದೇವೆ, ಇವನು ಮಾಡುವ ಕೆಲಸ ಒಂದಾ ಎರಡಾ?

ಯಲಹಂಕ ಉಪನಗರದಲ್ಲಿರುವ ಅಟ್ಟೂರ್ ಲೇಔಟ್ ನಲ್ಲಿ ಸಂಹಿತ್ ಆಸ್ಟ್ರೋಲೋಜಿಕಲ್ ಮತ್ತು ಎಜುಕೇಷನಲ್ ಸೆಂಟರ್ ಅನ್ನೋ ಹೆಸರಿನಲ್ಲಿ ಕಚೇರಿ ಓಪನ್ ಮಾಡಿದ್ದಾನೆ. ಆದರೆ, ಹೆಸರಿಗೆ ಮಾತ್ರ ಜೋತಿಷ್ಯ ಕೇಂದ್ರ. ಆದರೆ ಇಲ್ಲಿ ಅಂದರ್​​ ಕೀ ಬಾತ್​​ ಬೇರೆಯೇ ಇದೆ.

ಫೇಲ್​ ಆದರೂ ಸಿಗುತ್ತೆ ಸಿರ್ಟಿಫಿಕೇಟ್​​

ಇಲ್ಲೇ ಬಯಲಾಗಿದ್ದು ನೋಡಿ ಈ ಚೈತನ್ಯನ ಅಸಲಿಯತ್ತು. ಈ ಕಾಲದಲ್ಲಿ ಕರೆಕ್ಟಾಗಿ ಓದಿ, ಮಾರ್ಕ್ಸ್​​​ ಪಡೆದ್ರೆ ಸರ್ಟಿಫಿಕೆಟ್​​ ಪಡೆಯುವುದು ಕಷ್ಟ. ಅಂತದರಲ್ಲಿ ಈ ಪುಣ್ಯಾತ್ಮ, SSLC ಫೇಲ್ ಆದರೂ ಪರವಾಗಿಲ್ಲ, ಜಸ್ಟ್ ಪಾಸಾಗಿದ್ದರೂ ಪರವಾಗಿಲ್ಲ. ಆದರೂ ನಿಮಗೆ ನಗರದ ಫೇಮಸ್ ಕಾಲೇಜುಗಳಲ್ಲಿ ಸೀಟು ಸಿಗುತ್ತೆ.

ಓಟರ್ ಐಡಿ ಒಂದು ಪೋಟೋ ಕೊಟ್ರೆ ಸಿಗುತ್ತೆ ಡಿಗ್ರಿ: ಒಂದೊಂದು ಕೋರ್ಸ್ ಗೆ ಒಂದೊಂದು ರೇಟ್

ಇನ್ನು ಬಿಎ, ಬಿಕಾಂ,ಬಿಸಿಎ, ಎಂಎಸ್ಸಿ, ಎಂಬಿಎ, ಎಂಸಿಎ, ಡಿಫಾರ್ಮ್, ಎಂ.ಫಿಲ್,  ಸಾಕಲ್ವಾ. ಈತ ಕೇಳಿದಷ್ಟು ನೀವು ಹಣಕೊಟ್ರೆ ಸಾಕು, ನಿಮಗೆ ಯಾವ ಡಿಗ್ರಿ ಸರ್ಟಿಫಿಕೇಟ್ ಬೇಕು ಅದು ನಿಮ್ಮ ಕೈಯಲ್ಲಿರುತ್ತೆ. ಆದ್ರೆ ನೀವು ಪರೀಕ್ಷೆ ಬರೆದರೆ ಒಂದು ರೇಟ್. ಪರೀಕ್ಷೆ ಬರೆಯುವುದಿಲ್ಲ ಸರ್ಟಿಫಿಕೇಟ್ ಬೇಕು ಎನ್ನುವವರಿಗೆ ಮತ್ತೊಂದು ರೇಟ್.

ಒಟ್ಟಾರೆಯಾಗಿ ಹೇಳಬೇಕೆಂದರೆ ಇಂತಹವರಿದಂಲೇ ನಮ್ಮ ಶಿಕ್ಷಣದ ಗುಣಮಟ್ಟ ಪಾತಾಳಕ್ಕೆ ಇಳಿದಿರುವುದು. ಈ ನಕಲಿ ಜ್ಯೋತಿಷಿಯ ಜಾತಕ ಬದಲು ಮಾಡುವ ಜವಾಬ್ದಾರಿ ಪೊಲೀಸರ ಮೇಲಿದೆ.



Follow us on Google Plus

Follow us on Facebook and twitter

Subscribe our youtube channel

Get Latest News in your e-mail Inbox!