Top

ಉತ್ತಮ ಆರೋಗ್ಯಕ್ಕೆ ಪೇರಳೆಹಣ್ಣು


Asianet News Sunday 10 April 2016 01:13 pm IST Health
ಉತ್ತಮ ಆರೋಗ್ಯಕ್ಕೆ ಪೇರಳೆಹಣ್ಣು
10 Apr

ಬೆಂಗಳೂರು (ಏ.10): ಇತ್ತೀಚಿನ ದಿನಗಳಲ್ಲಿ ನಮ್ಮ ಆಹಾರ ಪದ್ದತಿಯಿಂದಾಗಿ ನಾವು ಒಂದಲ್ಲಾ ಒಂದು ಖಾಯಿಲೆಗೆ ತುತ್ತಾಗುತ್ತಿದ್ದೇವೆ. ಅದರಲ್ಲಿಯೂ ಬಿಪಿ ಮತ್ತು ಹೃದಯ ಸಂಬಂಧೀ ಖಾಯಿಲೆಗಳು ಇಂದು ಬಹಳಷ್ಟು ಮಂದಿಯನ್ನು ಬಾಧಿಸುತ್ತಿವೆ. ಪೇರಳೆ ಹಣ್ಣು ಈ ಖಾಯಿಲೆಯನ್ನು ಹತೋಟಿಯಲ್ಲಿಡುವ ಗುಣವನ್ನು ಹೊಂದಿದೆ ಎಂದು ಸಂಶೋಧನೆಯೊಂದು ವರಧಿ ಮಾಡಿದೆ.

ದಿನನಿತ್ಯ ಪೇರಳೆ ಹಣ್ಣನ್ನು ತಿನ್ನುವುದರಿಂದ ಮಧ್ಯ ವಯಸ್ಸಿನವರಲ್ಲಿ ರಕ್ತದೊತ್ತಡವನ್ನು ನಿವಾರಿಸುತ್ತದೆ. ಹಾಗೂ ಹೃದಯ ಸಂಬಂಧೀ ರೋಗಗಳನ್ನು ಹತೋಟಿಗೆ ತರುವುದರೊಂದಿಗೆ ಮಧುಮೇಹ ರೋಗವನ್ನು ಕೂಡ ನಿಯಂತ್ರಿಸುತ್ತದೆ.

ವಿಶ್ವದ ಅತ್ಯಂತ ಜನಪ್ರಿಯ ಹಣ್ಣುಗಳ ನಡುವೆ ಪೇರಳೇ ಹಣ್ಣು ಆರೋಗ್ಯಕ್ಕೆ ಬಹಳ ಉತ್ತಮ ವಾಗಿದೆ. ನಮ್ಮ ದೇಹಕ್ಕೆ ಬೇಕಾದ ಫೈಬರ್ ಮತ್ತು ಸಿ ಜೀವಸತ್ವಗಳು ಈ ಹಣ್ಣಿನಲ್ಲಿ ಸಿಗುತ್ತವೆ. ನಮ್ಮ ದೇಹಕ್ಕ ಬೇಕಾದ ಶೇ.24 ರಷ್ಟು ಫೈಬರ್ ನ್ನು ಈ ಹಣ್ಣು ಒದಗಿಸುತ್ತದೆ. ಹಾಗೂ ಈ ಹಣ್ಣು ಮಾನಸಿಕ ಒತ್ತಡವನ್ನು ಕೂಡಾ ನಿವಾರಿಸುತ್ತದೆ



Follow us on Google Plus

Follow us on Facebook and twitter

Subscribe our youtube channel

Get Latest News in your e-mail Inbox!