Top

ರಾಗಿ ಚಾಕೋಲೇಟ್


Asianet News Monday 29 August 2016 01:13 pm IST Kitchen
ರಾಗಿ ಚಾಕೋಲೇಟ್
29 Aug

ರಾಗಿ ಹಿಟ್ಟು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ರಾಗಿ ಹಿಟ್ಟಿನಿಂದ ವಿವಿಧ ಖಾದ್ಯಗಳನ್ನು ತಯಾರಿಸಬಹುದು. ಅದರಿಂದ ಚಾಕೋಲೇಟ್ ಕೂಡಾ ತಯಾರಿಸಬಹುದು. ಅದು ಹೇಗೆ ಎಂದು ಇಲ್ಲಿದೆ ನೋಡಿ.

ರಾಗಿ ಚಾಕೋಲೇಟ್ ಮಾಡಲು ಬೇಕಾಗುವ ಪದಾರ್ಥಗಳು: ಚಾಕಲೇಟ್ ಪ್ಲೇವರ್ 100 ಗ್ರಾಂ, ಮೊಟ್ಟೆ 2, 1/2 ಕಪ್ ಸಕ್ಕರೆ, 1/2 ಕರಗಿಸಿದ ಬೆಣ್ಣೆ, 1/2 ಕಪ್ ರಾಗಿ ಹಿಟ್ಟು, 1/2 ಚಮಚ ಬೇಕಿಂಗ್ ಪೌಡರ್

ರಾಗಿ ಚಾಕೋಲೇಟ್ ಮಾಡುವ ವಿಧಾನ: ಮೊದಲಿಗೆ ಚಾಕಲೇಟ್ ಪ್ಲೇವರ್ ನ್ನು ಕರಗಿಸಿಕೊಳ್ಳಿ. ನಂತರ ಅದನ್ನು ತಂಪುಗೊಳಿಸಿಕೊಳ್ಳಿ. ನಂತರ ಮತ್ತೊಂದು ಪಾತ್ರೆಯಲ್ಲಿ ಸಕ್ಕರೆ ಮತ್ತು ಮೊಟ್ಟೆಯನ್ನು ಸೇರಿಸಿ ಮಿಶ್ರ ಮಾಡಿ. ನಂತರ ಕರಗಿಸಿದ ಬೆಣ್ಣೆಯೊಂದಿಗೆ ಚಾಕೋಲೇಟ್ ಸೇರಿಸಿ ಕಲಸಿ. ನಂತರ ಅದಕ್ಕೆ ಮೊಟ್ಟೆ ಮತ್ತು ಸಕ್ಕರೆಯ ಮಿಶ್ರಣವನ್ನು ಸೇರಿಸಿ.

ಸ್ವಲ್ಪ ಸಮಯದ ನಂತರ ಅದಕ್ಕೆ ರಾಗಿಹಿಟ್ಟು ಮತ್ತು ಬೇಕಿಂಗ್ ಪೌಡರ್ ಸೇರಿಸಿ ಗಂಟುಗಳಿರದಂತೆ ಚನ್ನಾಗಿ ಮಿಶ್ರ ಮಾಡಿ. ಅದನ್ನು 150 ಡಿಗ್ರ ತಾಪದಲ್ಲಿ 15 ನಿಮಿಷ ಇಡಿ. ನಂತರ ತೆಗೆದು ತಂಪುಗೊಳಿಸಿದರೆ ರಾಗಿ ಚಾಕೋಲೇಟ್ ಸವಿಯಲು ಸಿದ್ಧ.



Follow us on Google Plus

Follow us on Facebook and twitter

Subscribe our youtube channel

Get Latest News in your e-mail Inbox!