Top

ಗೋಡಂಬಿ ಕೇಕ್


Asianet News Wednesday 31 August 2016 03:15 pm IST Kitchen
ಗೋಡಂಬಿ ಕೇಕ್
31 Aug

ಸಿಹಿ ತಿನಿಸು ಎಂದರೆ ಬಾಯಲ್ಲಿ ನೀರೂರುತ್ತದೆ. ಈ ಬಾರಿಯ ಗಣೇಶನ ಹಬ್ಬಕ್ಕೆ ನಿಮಗಾಗಿ ಬಾಯಲ್ಲಿ ನೀರೂರಿಸುವ ಗೋಡಂಬಿ ಕೇಕ್ ಮಾಡುವ ವಿಧಾನವನ್ನು ಇಲ್ಲಿ ತಿಳಿಸಿದ್ದೇವೆ ನೋಡಿ.

ಗೋಡಂಬಿ ಕೇಕ್ ಮಾಡಲು ಬೇಕಾಗುವ ಸಾಮಗ್ರಿಗಳು: 1 ಕಪ್ ತಾಜಾ ಗೋಡಂಬಿ, 1/2 ಕಪ್ ತುಪ್ಪ, 2 ಕಪ್ ಸಕ್ಕರೆ, 1 ಚಿಟಕೆ ಕೇಸರಿ, 1 ಟೀ ಚಮಚ ಹಾಲು,

ಗೋಡಂಬಿ ಕೇಕ್ ಮಾಡುವ ವಿಧಾನ: ಮೊದಲಿಗೆ ಬಿಸಿ ನೀರಿನಲ್ಲಿ ಗೋಡಂಬಿಯನ್ನು ನೆನೆಸಿ, ನಂತರ ಅದಕ್ಕೆ 1 ಟೀ ಚಮಚ ಹಾಲು ಸೇರಿಸಿ. ಅದನ್ನು ಸ್ವಲ್ಪ ತರಿ ತರಿಯಾಗಿ ರುಬ್ಬಿಕೊಳ್ಳಿ, ಮತ್ತೊಂದು ಪಾತ್ರೆಗೆ ಸಕ್ಕರೆ ಮತ್ತು ತುಪ್ಪ ಸೇರಿಸಿ ಚನ್ನಾಗಿ ಮಿಶ್ರ ಮಾಡಿ. ನಂತರ ಅದನ್ನು ಸಣ್ಣ ಉರಿಯಲ್ಲಿ ಚನ್ನಾಗಿ ಬೇಯಿಸಿ. ಈ ಮದ್ಯದಲ್ಲಿ ಕೇಸರಿಯನ್ನು ಇದಕ್ಕೆ ಸೇರಿಸಿ ಮಿಶ್ರ ಮಾಡಿ. ಈ ಮಿಶ್ರಣವು ತಳ ಬಿಡುವವರೆಗೆ ಅದನ್ನು ಬೇಯಿಸಿ ನಂತರ ಅದನ್ನು ತುಪ್ಪ ಸವರಿದ ಪ್ಲೇಟಿಗೆ ಅದನ್ನು ಹಾಕಿ. ತಣ್ಣಗಾದ ನಂತರ ಅದನ್ನು ಚೌಕಾಕಾರವಾಗಿ ಕತ್ತರಿಸಿ ಗೋಡಂಬಿ ಚೂರುಗಳಿಂದ ಅಲಂಕರಿಸಿದರೆ ರುಚಿಯಾದ ಗೋಡಂಬಿ ಕೇಕ್ ಸವಿಯಲು ಸಿದ್ಧ.



Follow us on Google Plus

Follow us on Facebook and twitter

Subscribe our youtube channel

Get Latest News in your e-mail Inbox!