Top

ಸುಖಿ ಕ್ಲಿನಿಕ್: ನಿಮ್ಮ ಖಾಸಗಿ ಪ್ರಶ್ನೆಗಳಿಗೆ ವೈದ್ಯರಿಂದ ಉತ್ತರಗಳು


Asianet News Tuesday 06 September 2016 05:17 pm IST Sex Tips
ಸುಖಿ ಕ್ಲಿನಿಕ್: ನಿಮ್ಮ ಖಾಸಗಿ ಪ್ರಶ್ನೆಗಳಿಗೆ ವೈದ್ಯರಿಂದ ಉತ್ತರಗಳು
06 Sep

ಸ್ಮೆಗ್ಮಾ ಸಂಗ್ರಹಗೊಂಡರೆ ಏನಾಗುತ್ತೆ?

1) ನನಗೆ 20 ವರ್ಷ. ನನ್ನ ಶಿಶ್ನದ ಮುಂದೊಗಲಿನೊಳಗೆ ಸ್ಮೆಗ್ಮಾ ಸಂಗ್ರಹವಾಗಿದೆ. ಮುಂದೊಗಲನ್ನು ನಾನು ಶುಚಿಗೊಳಿಸುತ್ತಿರಲಿಲ್ಲ. ಮುಟ್ಟಲು ಹೋದರೆ, ಆ ಜಾಗ ತುಂಬಾ ಮೃದುವಾಗಿಯೂ ಕೆಟ್ಟ ವಾಸನೆ ಭರಿತವಾಗಿಯೂ ಫೀಲ್ ಆಗುತ್ತೆ. ಯಾಕಾಗಿ ಸ್ಮೆಗ್ಮಾ ಸಂಗ್ರಹವಾಗುತ್ತದೆ? ಇದರಿಂದ ಆಗುವ ತೊಂದರೆಗಳೇನು?

-ಹೆಸರು ಬೇಡ, ಊರು ಬೇಡ

ಪ್ರತಿದಿನ ಇಲ್ಲವೇ ಎರಡು- ಮೂರು ದಿನಗಳಿಗೊಮ್ಮೆ ಶಿಶ್ನದ ಮುಂದೊಗಲು ಸರಿಸಿ, ಉಗುರು ಬೆಚ್ಚಗಿನ ನೀರಿನಿಂದ ಮೆಲ್ಲನೆ ಸ್ಮೆಗ್ಮಾ ತೆಗೆದು ಶುದ್ಧಗೊಳಿಸಿ. ಸ್ಮೆಗ್ಮಾವು ಶಿಶ್ನದ ‘ಪ್ರೆಪ್ಯೂಸ್’ ಎಂಬ ಹಳ್ಳದಂಥ ಭಾಗದ ಗ್ರಂಥಿಗಳಿಂದ ಉತ್ಪತ್ತಿಯಾಗುವ ದ್ರವ; ಇದು ನಮ್ಮ ಕಿವಿಯ ಗುಗ್ಗೆ, ಮೂಗಿನ ಗೊಣ್ಣೆ, ಚರ್ಮದ ತೈಲದ ಹಾಗೆ, ಆ ಸ್ಥಳವನ್ನು ಮೃದುವಾಗಿಡುತ್ತದೆ. ಇದರಿಂದೇನೂ ತೊಂದರೆಯಿಲ್ಲ. ಆದರೆ, ಬಹಳ ದಿನ ತೆಗೆಯದೇ ಶುದ್ಧೀಕರಿಸದಿದ್ದರೆ, ಅದು ಒಣಗಿ ಗಟ್ಟಿಯಾಗಿ ಸಣ್ಣನೋವು, ಕೆಟ್ಟ ವಾಸನೆ, ಸೋಂಕು ತಗುಲುವಿಕೆ ಮೊದಲಾದ ತೊಂದರೆಗಳಾಗಬಹುದು.

2)ನನ್ನ ವಯಸ್ಸು 28. ಇನ್ನೂ ಮದುವೆ ಆಗಿಲ್ಲ. ನನ್ನ ಶಿಶ್ನವು ತುಂಬಾ ಚಿಕ್ಕ ಮತ್ತು ತೆಳ್ಳಗಿದೆ. ವಾರಕ್ಕೆ 3 ಸಲ ಹಸ್ತಮೈಥುನ ಮಾಡಿಕೊಳ್ಳುತ್ತೇನೆ. ಆದರೆ ಹೆಚ್ಚಿಗೆ ವೀರ್ಯ ಉತ್ಪತ್ತಿ ಆಗುತ್ತಿಲ್ಲ. ಇದರಿಂದ ಏನಾದರೂ ತೊಂದರೆ ಆಗುತ್ತದೆಯೇ? ನನ್ನ ವೀರ್ಯ ಗುಣಮಟ್ಟ ಕಳಪೆ ಆಗಿದೆಯೇ?

-ವಡ್ಡತ್ತಿ ಮಂಜುನಾಥ್

ಬಹುತೇಕ ಹುಡುಗರಲ್ಲಿ ಶಿಶ್ಣ ಸಣ್ಣಗಿದೆ ಎಂಬ ಭ್ರಮೆಯಿದೆ. ಉದ್ರೇಕಗೊಂಡಾಗ ಅದು ಎರಡು ಇಂಚಿಗಿಂತ ದೊಡ್ಡದಾದರೆ ಸಾಕು. ಅನುದ್ರಿಕ್ತ ಸ್ಥಿತಿಯಲ್ಲಿ ಅದು ಮುದುಡುವುದರಿಂದ ಹಾಗೂ ಇದು ಚಳಿಗೆ ಇನ್ನೂ ಮುದುಡುವುದರಿಂದ ಚಿಕ್ಕದಿರುವಂತೆ ಭಾಸವಾಗುತ್ತದೆ. ಆದರೆ ಬಾಲ್ಯದ ಗಾತ್ರಕ್ಕಿಂತ ಎರಡರಷ್ಟು ದೊಡ್ಡದಾಗಿದ್ದೇ ಇರುತ್ತದೆ. ಆದ್ದರಿಂದ ಇದರ ಬಗ್ಗೆ ಯೋಚನೆ ಬೇಡ. ಒಬ್ಬೊಬ್ಬರಲ್ಲೂ ಇದರ ಉದ್ದ, ಗಾತ್ರ ಸ್ವಲ್ಪ ಬೇರೆಯಿರುತ್ತದೆ. ವೀರ್ಯವು ಒಮ್ಮೆಗೆ 3-5 ಮಿ.ಲೀ.ಯಷ್ಟು ಬರುತ್ತದೆಯಷ್ಟೇ. ಆದ್ದರಿಂದ ತೊಂದರೆಯಿದ್ದಂತಿಲ್ಲ. ವೀರ್ಯದ ಗುಣಮಟ್ಟ, ವೀರ್ಯ ಪರೀಕ್ಷೆಯಿಂದಲ್ಲದೇ ಹಾಗೆಯೇ ತಿಳಿಯುವುದಿಲ್ಲ. ದೇಹದ ಇತರ ಕಾರ್ಯಗಳ ಬಗ್ಗೆ ಅಷ್ಟು ಯೋಚಿಸದ ನೀವು ಇದರ ಬಗ್ಗೆ ಏಕೆ ಇಷ್ಟು ಯೋಚಿಸುತ್ತೀರಿ? ಮೊದಲು ಮದುವೆಯಾಗಿ. ಎಲ್ಲರಂತೆ ನಿಮಗೂ ಮಕ್ಕಳಾಗುತ್ತವೆ. ಆಗದಿದ್ದರೆ ಆಗ ವೀರ್ಯಪರೀಕ್ಷೆ ಇದ್ದಿದ್ದೇ.



Follow us on Google Plus

Follow us on Facebook and twitter

Subscribe our youtube channel

Get Latest News in your e-mail Inbox!