Top

ತನ್ನ ಮೇಲೆ 'ಟೇಜರ್ ಗನ್' ಪ್ರಯೋಗಿಸಿದ ಡಿಜಿಪಿ


Asianet News Monday 05 September 2016 02:14 pm IST Specials
05 Sep

ಲಕ್ನೋ(ಸೆ.05): ಜಮ್ಮು ಕಾಶ್ಮೀರದಲ್ಲಿ ಪೆಲೆಟ್ ಗನ್ ಬಳಕೆಯ ಕುರಿತಾಗಿ ಹುಟ್ಟಿಕೊಂಡಿರುವ ವಿವಾದಗಳ ನಡುವೆ ಉತ್ತರ ಪ್ರದೇಶದ ಪೊಲೀಸ್ ಮಹಾನಿರ್ದೇಶಕ ಜಾವೇದ್ ಅಹ್ಮದ್'ರವರು ಜನಜಂಗುಳಿಯನ್ನು ಕಡಿಮೆ ಮಾಡಲು ಉಪಯೋಗಿಸುವ 'ಟೇಜರ್ ಗನ್'ನನ್ನು ತನ್ನ ಮೇಲೆ ಪ್ರಯೋಗಿಸಿ ತನ್ನ ಸಹೋದ್ಯೋಗಿಗಳನ್ನು ಚಕಿತಗೊಳಿಸಿದ್ದಾರೆ.

ಟೇಜರ್ ಗನ್ ಪ್ರದರ್ಶನದ ಬಳಿಕ ಈ ಗನ್'ನ ಪರಿಣಾಮವನ್ನು ತಿಳಿದುಕೊಳ್ಳಲು ಇದನ್ನು ತನ್ನ ಮೇಲೇ ಪ್ರಯೋಗಿಸಿದ್ದಾರೆ. ಇದಕ್ಕಾಗಿ ಗನ್'ನನ್ನು ತನ್ನ ಮೇಲೇ ಪ್ರಯೋಗಿಸಲು ಆದೇಶಿಸಿದ್ದು, ಇದನ್ನು ಕೇಳಿದ ಸಹೋದ್ಯೋಗಿಗಳು ದಂಗಾಗಿದ್ದಾರೆ. ಆದರೆ ಆದೇಶವನ್ನು ಪಾಲಿಸುವುದು ಅನಿವಾರ್ಯ. ವಿದ್ಯುತ್ ಶಾಕ್ ನೀಡುವ ಟೇಜರ್ ಗನ್ ಆಗಿದ್ದು, ಇದರ ಹೊಡೆತಕ್ಕೆ ಕೆಲ ಕ್ಷಣಗಳ ಕಾಲ ದೇಹ ಸ್ತಬ್ಧವಾಗುತ್ತದೆ. ಆದರೆ ಯಾವುದೇ ಹಾನಿಯಾಗುವುದಿಲ್ಲ.

ಜಮ್ಮು ಕಾಶ್ಮೀರದಲ್ಲಿ ಪೆಲೆಟ್ ಗನ್ ಬಳಕೆಯ ವಿಚಾರವಾಗಿ ವಿವಾದಗಳು ಹುಟ್ಟಿಕೊಂಡ ಬೆನ್ನಲ್ಲೇ ಪೊಲೀಸ್ ಅಧಿಕಾರಿಯೊಬ್ಬರು ಟೇಜರ್ ಗನ್'ನ ಆಘಾತ ತಿಳಿದುಕೊಳ್ಳವ ಧೈರ್ಯ ತೋರಿದ್ದು ಸಾಮಾಜಿಕ ಜಾಲಾತಾಣಗಳಲ್ಲಿ ಸಾಕಷ್ಟು ಚರ್ಚೆಯಾಗಿದೆ.



Follow us on Google Plus

Follow us on Facebook and twitter

Subscribe our youtube channel

Get Latest News in your e-mail Inbox!