Top

ಚೌತಿಗೆ ಮುನ್ನ ಜಗ ಸುತ್ತಿ ಬಂದ ಮೌಸಿಕ, ನೀ ಏನೇನು ಕಂಡಿ?


Asianet News Sunday 04 September 2016 06:18 pm IST Specials
ಚೌತಿಗೆ ಮುನ್ನ ಜಗ ಸುತ್ತಿ ಬಂದ ಮೌಸಿಕ, ನೀ ಏನೇನು ಕಂಡಿ?
04 Sep

ವಕ್ರಿಸಂ: ಬಿ ಕೆ ಗಣೇಶ್

ತಲೆತಲಾಂತರಗಳಿಂದ-ಬಹುಶಃ ತಲೆ ಎಕ್ಸ್ ಚೇಂಜಾದ ನಂತರದಿಂದಲೇ ಇರಬಹುದು- ತನ್ನನ್ನು ಹೊತ್ತುಕೊಂಡು ಜಗವೆಲ್ಲ ಸುತ್ತಾಡುತ್ತಿರುವ ಮೌಸಿಕ–ನಿಗೆ ಒಮ್ಮೆಯೂ ರಜೆ ಕೊಟ್ಟಿಲ್ಲ ಎನ್ನುವ ಪಾಪಪ್ರಜ್ಞೆ ಗಣಪನಿಗೆ ಕಾಡತೊಡಗಿತು. ಇಲಿಯಂತೂ ಇಲ್ಲಿ ತನಕ ಯಾವ ಆಫ್, ಸಿ ಆಫ್‌ಗಳನ್ನೂ ಕೇಳಿಲ್ಲ; ಸಿಎಲ್, ಪಿಎಲ್‌ಗಳ ಮುಖ ನೋಡಿಲ್ಲ. ಹೀಗಾಗಿಯೋ ಏನೋ, ಈ ಸಲ ಗಣೇಶ ಹಬ್ಬಕ್ಕೆ ಮೊದಲು ಒಂದೆರಡು ದಿನ ರಜೆ ಕೊಟ್ಟು ದೇಶಪರ‌್ಯಟನೆಗೆ ಕಳುಹಿಸಬೇಕೆಂದು ನಿರ್ಧರಿಸಿದ.

ಇಲಿಯೇನೂ ಗಣೇಶನಷ್ಟು ಪೆದ್ದನಲ್ಲ. ನಿಂತಲ್ಲಿಯೇ ತಿರುತಿರುಗಿ ಜಗ ಸುತ್ತಿದೆ ಎಂದು ಹೇಳಿ ರಜೆಯನ್ನು ವೇಸ್ಟ್ ಮಾಡುವವನಲ್ಲ. ವೀಸಾ ಹಿಡಿದುಕೊಂಡು, ಮೀಸೆ ತಿರುವಿಕೊಂಡು ಹೊರಟೇಬಿಟ್ಟ ಭುವಿಗೆ.

ಹಬ್ಬಕ್ಕೆ ಒಂದೆರಡು ದಿನ ಮುಂಚೆ ಧರೆಗಿಳಿದು ಬಂದು ನೋಡಿದರೆ, ಭಾರತ ಬಂದ್! ರ‌್ಯಾಟ್‌ಗೆ ಕ್ಯಾರೆಟ್ ಸಿಕ್ಕಷ್ಟೇ ಖುಷಿಯಾಯಿತು. ರಸ್ತೆಗಳೆಲ್ಲ ಖಾಲಿ, ಖಾಲಿ. ಒನ್‌ವೇನಲ್ಲಿ ಓಡಾಡಿದರೂ ಕೇಳೋರಿಲ್ಲ, ಸಿಗ್ನಲ್ ಜಂಪ್ ಮಾಡಿದರೂ ಯಾವ ಬೆಕ್ಕುಗಳೂ ಹಿಡಿಯೋ–ದಿಲ್ಲ. ಎಲ್ಲರ ಮುಖದಲ್ಲೂ ರಿಲ್ಯಾಕ್ಸ್. ಹಾಗೆ ನೋಡಿದರೆ, ದಿನವೂ ಹೊಟ್ಟೆ ಹೊರೆಯಲು ಚುರುಕಾಗಿ ‘ದುಡಿಯಬೇಕಾದ’ ರ‌್ಯಾಟಪ್ಪನಿಗೆ ಹೀಗೆ ಎಲ್ಲ ಕೆಲಸಗಳಿಗೆ ರಜೆ ಹಾಕಿ ಮಲಗಬಹುದು, ಅಂಥ–ದ್ದಕ್ಕೂ ಒಂದು ದಿನ ಇದೆ ಎಂಬ ಕಾನ್ಸೆಪ್ಟೇ ಗೊತ್ತಿರಲಿಲ್ಲ.

ತಾನು ಹುಟ್ಟಿ ಬೆಳೆದ ಭೂಮಿಯಲ್ಲಿ ಎಷ್ಟೊಂದು ಬದಲಾವಣೆಗಳಾಗಿವೆ ಎನ್ನುವುದು ನಿಧಾನವಾಗಿ ತಿಳಿ–ಯುತ್ತಾ ಬಂತು. ಬಿಲಗಳ ಸಂಖ್ಯೆ ಹೆಚ್ಚಾಗಿದೆ, ದೊಡ್ಡ–ದಾಗಿದೆ. ಅರೆರೆ, ಇಲಿಗಳ ಸಂತತಿ ಅಷ್ಟೊಂದು ಹೆಚ್ಚಾ–ಗಿದೆಯೇ ಎಂದು ಯಾರನ್ನೋ ಕೇಳಿದರೆ, ‘‘ಇಲ್ಲ, ಇಲ್ಲ, ಮನು––ಷ್ಯರೂ ಇಲಿ ಹೆಗ್ಗಣಗಳ ಹಾಗೆ ಬದುಕುತ್ತಿದ್ದಾರೆ,’’ ಎಂಬ ಉತ್ತರ ಬರುತ್ತದೆ. ಹೆಚ್ಚು ತಲೆಕೆಡಿಸಿಕೊಳ್ಳದೆ ಇಲಿ ಮುಂದಕ್ಕೆ ನೆಗೆಯಿತು.

್ಝ     ಮನುಷ್ಯರು ್ಛಟ್ಟಡಿಚ್ಟ ಆಗಿದ್ದಾರೆ ಅನ್ನಿಸಿತು. ಎಲ್ಲರೂ ಮೊಬೈಲ್‌ನಲ್ಲಿ ಎಲ್ಲಿಂದಲೋ ಬಂದಿದ್ದನ್ನು ಓದುತ್ತಾರೆ, ನೋಡುತ್ತಾರೆ, ಪಕಪಕನೆ ನಗುತ್ತಾರೆ, ್ಛಟ್ಟಡಿಚ್ಟ ಮಾಡುತ್ತಾರೆ.

್ಝ     ಮನುಷ್ಯರು ಹೆಚ್ಚು ಅಂತರ್‌ಮುಖಿಗಳಾಗಿದ್ದಾರೆ ಅನ್ನಿಸಿತು. ಪಕ್ಕದಲ್ಲೇ ಅಣ್ಣ, ತಂಗಿ, ಅಪ್ಪ, ಅಮ್ಮ, ಗೆಳೆಯರು, ಸಂಬಂಧಿಕರು ಇದ್ದರೂ ತಾವು ಅಂಗೈನಲ್ಲಿ ಅಂತರ್‌ಜಾಲಕ್ಕೆ ಮುಖ ಮಾಡಿಕೊಂಡೇ ಇರುತ್ತಾರೆ.

್ಝ     ಜನ ತುಂಬಾ ಹಸನ್ಮುಖಿಗಳಾಗಿದ್ದಾರೆ ಅನ್ನಿಸಿತು. ಎಂದೂ ನಗದವರು, ಮಾತನಾಡದವರು ಸುಮ್ ಸುಮ್ನೆ ನಗುತ್ತಾರೆ. ಎಲ್ಲೈಸಿ ಏಜೆಂಟರ ಹಾಗೆ ಒಂದು ವಾರ ಬಿಟ್ಟು ಏನೋ ಸ್ಕೆಚ್ ಹಾಕುತ್ತಾರೆ.

್ಝ     ಈ ಲೋಕದಲ್ಲಿ ನೆಮ್ಮದಿಯಿಂದ ಬದುಕಲು ಎಷ್ಟೊಂದು ದಾರಿ. ಸುಳ್ಳುಹೇಳಿಯೂ ಬದುಕಬಹುದು, ಮೋಸ ಮಾಡಿಯೂ ರಾಜನಂತೆ ಬದುಕಬಹುದು.ಹೇಳೋರಿದ್ದಾರೆ, ಕೇಳೋರಿಲ್ಲ.

್ಝ     ಇಲಿಗಳೂ ಹುಲಿಗಳ ಹಾಗೆ ಬದುಕಬಹುದು. ಕತ್ತರಿಸಿ ಕಟುಂ ಕುಟುಂ ತಿಂದರೂ ಎದೆಯುಬ್ಬಿಸಿ ನಡೆಯಬಹುದು.

್ಝ     ಮಕ್ಕಳಿಗೆ ಹಕ್ಕು ಪೂರ್ತಿ ಸಿಕ್ಕಿದೆ. ಪರೀಕ್ಷೆ ಬರೀಲಿಕ್ಕೆ ಓದಲೇಬೇಕೆಂದೇನಿಲ್ಲ. ವಾಟ್ಸ್ ಆಪ್‌ನಲ್ಲಿ ಕೊಶ್ಚನ್ ಪೇಪರ್‌ಗಳು ಸಿಗುತ್ತವೆ.

್ಝ     ಜನರಿಗೆ ಸಮಾಜದ ಬಗೆಗಿನ ಕಳಕಳಿ ಹೆಚ್ಚಾ–ಗಿದೆ. ಸಣ್ಣಪುಟ್ಟ ವಿಷಯಗಳಿಗೂ ಬೀದಿಗಿಳಿಯುತ್ತಿದ್ದಾರೆ.

್ಝ     ಜಗದ ಜನರೆಲ್ಲ ಪಕ್ಕಾ ಧರ್ಮಿಷ್ಠರಾಗಿದ್ದಾರೆ. ತಂತಮ್ಮ ಧರ್ಮಗಳ ರಕ್ಷಣೆಗೆ ಎಷ್ಟೆಲ್ಲಾ ಒದ್ದಾಡು–ತ್ತಿದ್ದಾರೆ ಪಾಪ!

್ಝ     ಭಾರತದಲ್ಲಿ ಜಾತಿ ಪೂರ್ಣ ನಿವಾರಣೆಯಾಗಿದೆ ಎಂದೆನಿಸಿತು. ಈಗ ಇರುವುದು ಎರಡೇ ಜಾತಿ- ಒಂದು ಪ್ರಧಾನಿ ಮೋದಿ ಅವರನ್ನು ತಾರಾಮಾರ ಹೊಗಳುವವರು, ಇನ್ನೊಂದು ಮಾತುಮಾತಿಗೆ ಮೋದಿಯನ್ನು ದೂರುವವರು. ಇನ್ನು, ದೂರ ನಿಂತು ನೋಡುವವರು ಶಿಖಂಡಿಗಳು- ಇನ್ನೂ ಇವರಿಗೆ ಸಾಂವಿಧಾನಿಕ ಸ್ಥಾನಮಾನ ಸಿಕ್ಕಿಲ್ಲ!

್ಝ     ಕರ್ನಾಟಕದಲ್ಲೋ ಪೂರ್ಣ ಸ್ವ-ರಾಜ್ಯ. ಏನು ನಡೆ–ದರೂ ಒಂದೆರಡು ದಿನ ಗದ್ದಲ. ಮರುದಿನ ಮತ್ತೊಂ–ದೇನೋ ಅವಾಂತರ... ಎಲ್ಲರೂ ಕೂಲ್ ಕೂಲ್.

ಎಲ್ಲವೂ ಬದಲಾಗಿದೆ. ಜಿಯೋ ಎಂದರೆ ಈಗ ಬದುಕು ಅಲ್ಲ. ಅದು ಫ್ರೀ ಮಾತಾಗಿದೆ. ಮಾತೇ ಬದುಕಾಗಿದೆ. ಪತಂಜಲಿ ಎಂದರೆ ಈಗ ಮುನಿಯಲ್ಲ. ಫಾಸ್ಟ್ ಮೂವಿಂಗ್ ಕನ್ಸೂಮರ್ ಗೂಡ್ಸ್ ಕಂಪನಿಯಾಗಿದೆ. ಬದುಕೇ ಫಾಸ್ಟ್ ಮೂವಿಂಗ್ ಆಗಿಬಿಟ್ಟಿದೆ. ಲೈಫ್ ಎಂದರೆ ಜೀವನವಲ್ಲ, ಅದು ಮೊಬೈಲ್ ಆಗಿದೆ. ಗಾಂಧಿ ಎಂದರೆ ಮಹಾತ್ಮನ ನೆನಪಾಗೋದಿಲ್ಲ, ರಾಹುಲ್ ಅಡ್ಡ ಬಂದುಬಿಡುತ್ತಾರೆ. ಎಲ್ಲವೂ ಬದಲಾಗಿದೆ. ಇದೆಲ್ಲವನ್ನೂ ನೋಡು ನೋಡುತ್ತಲೇ ಮೂಷಿಕರಾಯ ಮುಂದೆ ಸಾಗುತ್ತಾನೆ.

***

ಅಲ್ಲೆಲ್ಲೋ ಬಲಭಾಗದಲ್ಲಿ ಒಂದಷ್ಟು ಜನ ಹುಡುಗರು, ಹುಡುಗಿಯರು ಘೋಷಣೆ ಕೂಗುತ್ತಾ ನಿಂತಿದ್ದರು. ಎಲ್ಲರ ರಕ್ತ ಕುದಿಯುತ್ತಿತ್ತು, ಆಕ್ರೋಶ ನೆತ್ತಿ ಹತ್ತಿತ್ತು. ಯಾರು ನೀವು ಕೇಳಿದರೆ, ‘ದೇಶಪ್ರೇಮಿಗಳು’ ಎಂದು ಎದೆತಟ್ಟಿ ಹೇಳಿದರು.

ಮೂಷಿಕನಿಗೆ ಅರ್ಥವಾಗಲಿಲ್ಲ, ‘‘ದೇಶ ಅಂದರೆ ಏನು?’ ಎಂದು ಕೇಳಿಬಿಟ್ಟ. ದೇಶ ಎಂದರೆ ಅಷ್ಟೂ ಗೊತ್ತಿಲ್ವೇ? ಭಾರತ್ ಮಾತಾ ಕೀ ಜೈ ಎಂದು ಜೋರಾಗಿ ಹುಡುಗಿಯೊಬ್ಬಳು ಕಿರುಚಿದಳು. ಎಲ್ಲರೂ ಒಕ್ಕೊರಲಿನಿಂದ ಪ್ರತಿಧ್ವನಿಸಿದರು. ನೀವೂ ಕೂಗಿ ಎಂದರೂ ಎಲ್ಲರೂ ಸುತ್ತುವರೆದರು. ಇಲಿ ಮೂಗಿಗೆ ಯಾಕೋ ಅಪಾಯದ ವಾಸನೆ ಬಡಿಯಿತು. ಅಲ್ಲಿಂದ ತಪ್ಪಿಸಿಕೊಂಡು ಮುನ್ನೆಗೆಯಿತು.

ಅಲ್ಲಿ ಎಡಭಾಗದಲ್ಲಿ ಒಂದಷ್ಟು ಹುಡುಗರು ಪಿಸುಪಿಸು ಮಾತನಾಡುತ್ತಿದ್ದರು. ನೀವೆಲ್ಲ ಯಾರು ಎಂದು ಕೇಳಿದರೆ, ‘ನಾವು ದೇಶದ್ರೋಹಿಗಳು’ ಎಂದು ಎದೆಯುಬ್ಬಿಸಿ ಹೇಳಿದರು. ಕಣ್ಣಲ್ಲಿ ಕೆಂಡ ಇತ್ತು, ಕೈಯಲ್ಲಿ ಶಕ್ತಿ ಇತ್ತು. ‘‘ಅರೆರೆ, ನಿಮ್ದೂ ಅದೇ ತರಾನ? ಹಾಗಿದ್ರೆ ದೇಶ ಅಂದರೆ ಏನು?’’ ಎಂದು ಕೇಳಿದರೆ, ‘‘ಅವ–ರೇನು ಹೇಳ್ತಾರೋ, ಅದಲ್ಲ ದೇಶ...’’ ಎಂದು ಏನೋ ಹೇಳಿದರು. ಇಲಿಗೆ ಅರ್ಥವಾಗಲಿಲ್ಲ.

ಹಾಗೆಯೇ ಮುಂದೆ ಹೋದಾಗ ಗೃಹಿಣಿಯೊಬ್ಬಳು ಸಿಕ್ಕಳು- ಅವಳನ್ನು ಇಲಿ ಕೇಳಿತು- ದೇಶ ಎಂದರೆ ಏನು? ಅವಳು ‘‘ದೇಶ ಅಂದರೆ ನಾನು’’ ಎಂದು ಹೇಳಿ ತನ್ನ ಪಾಡಿಗೆ ಕೆಲಸ ಮಾಡತೊಡಗಿದಳು. ಮುಂದೊಬ್ಬ ವಿಜ್ಞಾನಿ, ವೈದ್ಯ, ಶಿಕ್ಷಕ, ವಾಗ್ಮಿ, ಚಿಂತಕ, ಕಾರ್ಪೆಂಟರ್, ಆಟೋ ಡ್ರೈವರ್.. ಹೀಗೆ ತಮ್ಮ ಪಾಡಿಗೆ ಕೆಲಸ ಮಾಡುತ್ತಿದ್ದವರನ್ನೆಲ್ಲ ಇಲಿ ಕೇಳಿತು - ದೇಶ ಎಂದರೆ ಏನು ಎಂದು. ಅವರೆಲ್ಲ ‘ದೇಶ ಎಂದರೆ ನಾನು’ ಎಂದು ಹೇಳಿ, ಹೆಚ್ಚು ಮಾತಾಡಲಿಲ್ಲ. ತಮ್ಮ ಕೆಲಸವನ್ನು ಮುಂದುವರೆಸಿದರು.

ಇಲಿಗೆ ಈಗ ಅರ್ಥವಾಯಿತು-ದೇಶ ಎಂದರೆ ಏನು ಎಂದು.

***

ಇತ್ತ ಗಣೇಶನಿಗೆ ಚಡಪಡಿಕೆ ಆರಂಭವಾಯಿತು. ಎರಡು ದಿನಗಳ ರಜೆ ಮೇಲೆ ಹೋದವ ಇನ್ನೂ ಬಂದಿಲ್ಲ. ಭೂಮಿಯ ಬದುಕಿಗೆ ಮಾರು ಹೋಗಿ ಅಲ್ಲಿಯೇ ಕೂತುಬಿಟ್ಟರೆ ಹೇಗೆ ಎಂದು ಮನದಲ್ಲೇ ಗೊಣಗಿಕೊಂಡು ಶತಪಥ ಹಾಕತೊಡಗಿದ.

ಇಲಿ ಬರದೆ ಇದ್ದರೆ ಈ ವರ್ಷದ ಹಬ್ಬದ ಪ್ಲಾನ್ ಫ್ಲಾಪ್ ಆಗಿಬಿಡುತ್ತದೆ ಎನ್ನುವ ಭಯ ಗಣಪನಿಗೆ. ರಜೆ ಕೊಟ್ಟು ತಪ್ಪು ಮಾಡಿದೆನೋ ಎನ್ನುವ ಆತಂಕ ಅವನೊಳಗೆ ಕಾಡಿತು. ಯಾರ ಬಳಿ ಹೇಳುವ ಹಾಗೂ ಇಲ್ಲ. ಪ್ರತಿಕ್ಷಣ ಗಣೇಶನ ಕಣ್ಣು ಬಾಗಿಲಿನತ್ತ ಇತ್ತು...

ಅಷ್ಟರಲ್ಲಿ... ಪುಟ್ಟ ದೇಹದ ದೊಡ್ಡ ಮುಖದ ಹುಲಿಯೊಂದು ಗಣೇಶನತ್ತ ಓಡೋಡಿ ಬರುತಿತ್ತು. ವಿನಾಯಕನಿಗೆ ಅಚ್ಚರಿ, ಹುಲಿಯೇಕೆ ಬರುತ್ತಿದೆ ಎಂದು.

ಬಂದ ತಕ್ಷಣ ಗಣೇಶನ ಕಾಲಿಗೆರಗಿದ ಹುಲಿ, ‘‘ಬಾಸ್, ಕ್ಷಮಿಸಿಬಿಡಿ. ನಾನು ನಿಮ್ಮ ಪ್ರೀತಿಯ ಮೂಷಿಕ. ಈಗ ಭೂಮಿಯಲ್ಲಿ ತಲೆ ಕಸಿ ಶಸ್ತ್ರಚಿಕಿತ್ಸೆ ಮಾಡುತ್ತಿದ್ದಾರೆ. ಹಾಗಾಗಿ, ನಾನು ಹುಲಿಯ ತಲೆ ಇಟ್ಟುಕೊಂಡು ಬಂದಿದ್ದೇನೆ,’’ ಎಂದು ಹೇಳಿತು.

ಗಣಪನಿಗೆ ಇಲಿ ಅಲ್ಲಲ್ಲ, ಹುಲಿಯನ್ನು ನೋಡಿ ಬೆಕ್ಕಸ ಬೆರಗು! ಇದೇಕೆ ಈ ಅವತಾರ ಎಂದು ಕೇಳಿದಾಗ - ‘‘ಭೂಮಿಯಲ್ಲಿ ಮುಖವಾಡ ಇಲ್ಲದೆ ಬದುಕಲು ಸಾಧ್ಯವಿಲ್ಲ. ನಾವು ನಾವಾಗಿದ್ದರೆ ಕಷ್ಟ. ಇನ್ನೊಬ್ಬರನ್ನು ಹೆದರಿಸಲು, ಮಣಿಸಲು, ವಂಚಿಸಲು ಮುಖವಾಡ ಬೇಕೇ ಬೇಕು...’’ ಎಂದು ಹೇಳುತ್ತಲೇ ಇತ್ತು.

ಇದಾವುದಕ್ಕೂ ಗಣಪತಿ ಆಕ್ಷೇಪ ಎತ್ತಲಂತೂ ಸಾಧ್ಯವಿಲ್ಲ. ಏಕೆಂದರೆ, ಅವನ ಮುಖವೂ ಸ್ವಂತದ್ದಲ್ಲ...!Follow us on Google Plus

Follow us on Facebook and twitter

Subscribe our youtube channel

Get Latest News in your e-mail Inbox!