Top

ಅಬ್ಬಾ...! ಮನೆ ಕಿಟಕಿ ತೆರೆದಾಗ ಜಗಳವಾಡುತ್ತಿರುವ ಹೆಬ್ಬಾವುಗಳನ್ನು ಕಂಡಿದ್ದೀರಾ?


Asianet News Tuesday 06 September 2016 01:13 pm IST Specials
06 Sep

ನೀವು ನಿಮ್ಮದೇ ಯೋಚನೆಯಲ್ಲಿದ್ದು, ಮನೆ ಕಿಟಕಿಯ ಬಾಗಿಲು ತೆರೆದಾಗ ಎರಡು ಬಹುದೊಡ್ಡ ಹೆಬ್ಬಾವುಗಳು ಅದೇ ಕಿಟಕಿಯ ಬಳಿ ಜಗಳವಾಡುತ್ತಿದ್ದರೆ  ನಿಮಗೆ ಹೇಗಾಗಬೇಡ? ಭಯದಲ್ಲಿ ದಿಕ್ಕು ತೋಚದಂತಾಗುವುದರಲ್ಲಿ ಯಾವುದೇ ಸಂಶಯವಿಲ್ಲ.

ಇದೀಗ ಸಾಮಾಜಿಕ ಜಾಲಾತಾಣದಲ್ಲಿ ಇಂತಹುದೇ ಬೆಚ್ಚಿ ಬೀಳಿಸುವ ವಿಡಿಯೋವೊಂದು ವೈರಲ್ ಆಗುತ್ತಿದೆ. 'ಹಾವುಗಳ ಗರ್ಭಧಾರಣೆಯ ಸೀಜನ್ ಬರುತ್ತಿದ್ದು, ಈ ಪ್ರದೇಶದಲ್ಲಿ ಇಂತಹ ದೃಶ್ಯಗಳು ಕಂಡು ಬರುವುದು ಸಾಮಾನ್ಯ' ಎಂಬ ಸಂದೇಶದೊಂದಿಗೆ ಪೋಸ್ಟ್ ಮಾಡಿರುವ ಈ ವಿಡಿಯೋದಲ್ಲಿ ಎರಡು ಬಹುದೊಡ್ಡ ಹೆಬ್ಬಾವುಗಳು ಮನೆಯೊಂದರ ಮಹಡಿಯಲ್ಲಿ ಜಗಳವಾಡುತ್ತಿದ್ದು, ಮನೆ ಮಂದಿ ಕಿಟಕಿ ತೆರೆದರೆ ಗಾಬರಿಯಾಗುವುದರಲ್ಲಿ ಎರಡು ಮಾತಿಲ್ಲ.

ಸದ್ಯ ಈ ವಿಡಿಯೋ ನೋಡುಗರಲ್ಲಿ ಗಾಬರಿ ಹುಟ್ಟಿಸಿರುವುದರೊಂದಿಗೆ ಸಾಮಾಜಿಕ ಜಾಲಾತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದೆ.   



Follow us on Google Plus

Follow us on Facebook and twitter

Subscribe our youtube channel

Get Latest News in your e-mail Inbox!