img

Navigation

Technology

ಜಿಯೋಗೆ ಟಾಂಗ್ ಕೊಟ್ಟ ಬಿಎಸ್'ಎನ್'ಎಲ್: 1 ರೂಪಾಯಿಗೆ 1 GB ಡೇಟಾ....!

Suvarnanews: 1 year ago
ಜಿಯೋಗೆ ಟಾಂಗ್ ಕೊಟ್ಟ ಬಿಎಸ್'ಎನ್'ಎಲ್: 1 ರೂಪಾಯಿಗೆ 1 GB ಡೇಟಾ....!

ಮುಂಬೈ(ಸೆ.03): ಭಾರತೀಯ ಟೆಲಿಕಾಮ್ ಲೋಕದಲ್ಲಿ ಕ್ರಾಂತಿಕಾರಕ ಅಲೆಯೊಂದು ಎದ್ದಿದ್ದು, ಮೊನ್ನೆ ತಾನೆ 50 ರೂಪಾಯಿಗೆ ಒಂದು ಜಿಬಿ 4G ಡೇಟಾ ನೀಡುವುದಾಗಿ ರಿಲಾಯನ್ಸ್ ಒಡೆತನದ ಜಿಯೋ ಘೋಷಣೆ ಮಾಡಿದ ಹಿನ್ನಲೆಯಲ್ಲಿ ಸರಕಾರಿ ಸ್ವಾಮ್ಯದ ಭಾರತ ಸಂಚಾರ ನಿಗಮ ನಿಯಮಿತ ಒಂದು ರೂಪಾಯಿಗೆ ಒಂದು ಜಿಬಿ ಡೇಟಾ ನೀಡುವಾಗಿ ಹೇಳಿದೆ.

ಜಿಯೋ ಡಿಸೆಂಬರ್ ಅಂತ್ಯದ ವರೆಗೆ ತನ್ನ ಬಳಕೆದಾರರಿಗೆ ಉಚಿತ ಕರೆಗಳು ಮತ್ತು ಉಚಿತ ಇಂಟರ್ ನೆಟ್ ಒದಗಿಸುವುದಾಗಿ ತಿಳಿಸಿದ ಬೆನ್ನಲೇ ಬೇರೆ ಟೆಲಿಕಾಮ್ ಸಂಸ್ಥೆಗಳು ದರ ಸಮರಕ್ಕೆ ಸಿದ್ಧತೆ ನಡೆಸಿದ್ದವು, ಆದರೆ ಸರಕಾರಿ ಸ್ವಾಮ್ಯದ ಬಿಎಸ್'ಎನ್'ಎಲ್ ಆಗಲೇ ತನ್ನ ಹೊಸ ಕೊಡುಗೆಯನ್ನು ಘೋಷಣೆ ಮಾಡಿದೆ.

ಬಿಎಸ್ಎನ್ಎಲ್ ತನ್ನ ಬ್ರಾಡ್ ಬ್ಯಾಂಡ ಬಳಕೆಯ ಮೇಲೆ ಭಾರಿ ಆಫರ್ ನೀಡಿದ್ದು, ಕೇವಲ 249 ರೂಪಾಯಿಗಳಿಗೆ ಅನ್'ಲಿಮಿಟೆಡ್ ಡೇಟಾ ಬಳಸಲು ಗ್ರಾಹಕರಿಗೆ ಅವಕಾಶ ನೀಡಿದೆ.
‘Experience Unlimited BB 249’ ಎಂಬ ಹೊಸ ಟ್ಯಾರಿಫ್ ಘೋಷಣೆ ಮಾಡಿದ್ದು, ಸೆಪ್ಟೆಂಬರ್ 9 ರಿಂದ ಜಾರಿಗೆ ಬರುವ ಈ ಪ್ಲಾನ್ ನಲ್ಲಿ ಗ್ರಾಹಕರು 300 ಜಿಬಿ ವರೆಗೆ ಡೇಟಾ ಬಳಸಬಹುದು. ಗ್ರಾಹಕರಿಗೆ ಈ ಕೊಡುಗೆಯಿಂದಾಗಿ ಪ್ರತಿ ಜಿಬಿ ಡೇಟಾಗೆ 1 ರೂ.ಗಿಂತಲೂ ಕಡಿಮೆ ವೆಚ್ಚವಾಗಲಿದೆ.