img

Navigation

Crime

ಗಣೇಶ ವಿಸರ್ಜನೆ ವೇಳೆ ಪೊಲೀಸ್ ಅಧಿಕಾರಿಯ ಹತ್ಯೆ ಯತ್ನ : ವೈರಲ್ ಆದ ವಿಡಿಯೋ

Suvarnanews: 1 year ago

ಮುಂಬೈ(ಸೆ.8): ಗಣೇಶ ವಿಸರ್ಜನೆ ವೇಳೆ ನಾಲ್ಕು ಮಂದಿ ಯುವಕರು ಪೊಲೀಸ್ ಅಧಿಕಾರಿಯೊಬ್ಬರನ್ನು ಕೆರೆಯಲ್ಲಿ ಮುಳುಗಿಸಿ, ಹತ್ಯೆಗೆ ಯತ್ನಿಸಿದ ಘಟನೆ ಮಹಾರಾಷ್ಟ್ರದ ಕಲ್ಯಾಣ್‌ನಲ್ಲಿ ನಡೆದಿದೆ. ಈ ಘಟನೆಯ ವಿಡಿಯೋ ಈಗ ವೈರಲ್ ಆಗಿದೆ.

ಯುವಕರನ್ನು ಶಿಸ್ತಿನಿಂದ ವರ್ತಿಸುವಂತೆ ಸೂಚಿಸಿದ್ದಕ್ಕೆ ಈ ಕೃತ್ಯ ಎಸಗಲಾಗಿದೆ. ಸಬ್‌ಇನ್‌ಸ್ಪೆಕ್ಟರ್ ನಿತಿನ್ ದಾಗಲೆ ವಿರುದ್ಧ ಆಕ್ರೋಶಗೊಂಡ ಯುವಕರು, ಕೆರೆಯಲ್ಲಿ ಗಣೇಶ ವಿಸರ್ಜನೆ ಮಾಡುತ್ತಿರುವಾಗ ನಿತಿನ್‌ರನ್ನೂ ಕೆರೆಗೆ ನೂಕಿದ್ದಾರೆ. ಅವರು ಮೇಲೇಳಲು ಪ್ರಯತ್ನಿಸಿದಾಗ, ಅವರನ್ನು ಮತ್ತೆ ಮತ್ತೆ ಮುಳುಗಿಸಿ ಕೊಲ್ಲಲು ಯತ್ನಿಸಿದ್ದಾರೆ. ಕೊನೆಗೆ ಅವರು ಕೆರೆಯಲ್ಲಿ ಈಜಿಕೊಂಡು ಹೋಗಿ ದಡ ಸೇರಿದ್ದಾರೆ. ಪ್ರಕರಣ ಸಂಬಂಧ ನಾಲ್ಕು ಮಂದಿಯ ಮೇಲೆ ಕೇಸು ದಾಖಲಾಗಿದೆ. ಆರೋಪಿಗಳಿಗಾಗಿ ಪೊಲೀಸರು ಬಲೆಬೀಸಿದ್ದಾರೆ. ಆರೋಪಿಗಳು ಸ್ಥಳೀಯ ರಾಜಕಾರಣಿಯೊಬ್ಬರ ಬೆಂಬಲಿಗರೆಂದು ತಿಳಿದುಬಂದಿದೆ.

ಇದೇ ವೇಳೆ, ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರು ಮಂಗಳವಾರ ಮುಖ್ಯಮಂತ್ರಿ ಫಡ್ನವಿಸ್‌ರನ್ನು ಭೇಟಿಯಾಗಿ, ಪೊಲೀಸರ ಮೇಲೆ ನಡೆಯುತ್ತಿರುವ ಹಲ್ಲೆ ಪ್ರಕರಣಗಳ ಬಗ್ಗೆ ಚರ್ಚಿಸಿದ್ದಾರೆ.

(ವಿಡಿಯೋ ಕೃಪೆ: ಟೈಮ್ಸ್ ನೌ)