img

Navigation

Magazine

ಸೇತುವೆ ಮೇಲಿನಿಂದ ನದಿಗೆ ಹಾರಿ ಪ್ರಾಣದ ಜೊತೆ ಚೆಲ್ಲಾಟವಾಡಿದ ಅಪ್ರಾಪ್ತರು!

Suvarnanews: 1 year ago

ಆಗ್ರ(ಸೆ.08): ಯಮುನಾ ನದಿ ಹಾದು ಹೋಗುವ ಸೇತುವೆ ಮೇಲಿಂದ ನಾಲ್ವರು ಅಪ್ರಾಪ್ತ ಬಾಲಕರು ಕೆಳಗೆ ಹಾರಿ ತಮ್ಮ ಪ್ರಾಣದ ಜೊತೆಗೆ ಈಜಾಡಿರುವ ಘಟನೆ ಆಗ್ರಾದಲ್ಲಿ ನಡೆದಿದೆ.

ನಾಲ್ವರು ಅಪ್ರಾಪ್ತರು ರಸ್ತೆಯ ಮೇಲೆ ವಾಹನಗಳು ಚಲಿಸುತ್ತಿರುವ ವೇಳೆಯಲ್ಲಿ ಬ್ರಿಡ್ಜ್‍ನ ಮೇಲಿಂದ ಒಬ್ಬೊಬ್ಬರಾಗಿ ಹಾರಿದ್ದಾರೆ. ಕೆಳಗೆ ಬಿದ್ದವರು ಅಲ್ಲಿಂದ ಈಜಿಕೊಂಡು ದಡ ಸೇರಿದ್ದಾರೆ. ಆದರೆ ಅಷ್ಟು ಎತ್ತರದಿಂದ ಬೀಳುವಾಗ ಸ್ವಲ್ಪ ನಿಯಂತ್ರಣ ತಪ್ಪಿದರೂ ಅವರ ಸಾವು ತಪ್ಪಿರಲಿಲ್ಲ.

ಹೀಗೆ ಈ ನಾಲ್ವರು ಯುವಕರು ಅಪಾಯಕಾರಿ ಸಾಹಸಕ್ಕೆ ಕೈ ಹಾಕಿದ ವಿಡಿಯೋ ಸಾಮಾಜಿಕ ಜಾಲಾತಾಣಗಳಲ್ಲಿ ಹರಿದಾಡುತ್ತಿದ್ದು, ಇಂತಹ ದುಸ್ಸಾಹಸಕ್ಕೆ ಕೈ ಹಾಕಿದ ಈ ಅಪ್ರಾಪ್ತ ಯುವಕರ ಪತ್ತೆಗಾಗಿ ಪೊಲೀಸರು ತನಿಖೆ ಆರಂಭಿಸಿದ್ದಾರೆ.