img

Navigation

News

ಸೋಮವಾರವೇ ಕಾವೇರಿ ತೀರ್ಪಿಗೆ ಮೇಲ್ಮನವಿ

Suvarnanews: 1 year ago
ಸೋಮವಾರವೇ ಕಾವೇರಿ ತೀರ್ಪಿಗೆ ಮೇಲ್ಮನವಿ

ಬೆಂಗಳೂರು (ಸೆ.08): ಕಾವೇರಿ ತೀರ್ಪಿನ ಮಾರ್ಪಾಡಿಗೆ ಮನವಿ ಮಾಡಿ ಇದೇ ಸೋಮವಾರ ಅರ್ಜಿ ಸಲ್ಲಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಬೆಂಗಳೂರಿನಲ್ಲಿಂದು ಸುದ್ದಿಗೋಷ್ಠಿ ನಡೆಸಿದ ಅವರು, ತಮಿಳುನಾಡಿಗೆ 10 ದಿನಗಳ ಕಾಲ 15 ಸಾವಿರ ಕ್ಯೂಸೆಕ್ಸ್ ನೀರು ಬಿಡುವಂತೆ ಸುಪ್ರೀಂ ಕೋರ್ಟ್​ ನೀಡಿರುವ ತೀರ್ಪನ್ನು ಮಾರ್ಪಾಡು ಮಾಡುವಂತೆ ಮನವಿ ಮಾಡಿ ಇದೇ ಸೋಮವಾರ ಅರ್ಜಿ ಸಲ್ಲಿಸುವುದಾಗಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಸುಪ್ರೀಂ ಕೋರ್ಟ್​  ನೀಡಿರುವ ತೀರ್ಪನ್ನು ಯಾವ ರೀತಿ ಮಾರ್ಪಾಡು ಮಾಡಬೇಕೆಂದು ರಾಜ್ಯದ ಪರ ವಕೀಲರ ತಂಡ ನಿರ್ಧರಿಸಲಿದೆ ಎಂದೂ ಸಿಎಂ ಹೇಳಿದ್ದಾರೆ.