img

Navigation

News

2018ರ ಚುನಾವಣೆಗೆ ಕಾಂಗ್ರೆಸ್ ಸಿದ್ಧತೆ ಆರಂಭ

Suvarnanews: 1 year ago
2018ರ ಚುನಾವಣೆಗೆ ಕಾಂಗ್ರೆಸ್ ಸಿದ್ಧತೆ ಆರಂಭ

ಬೆಂಗಳೂರು (ಸೆ.08):  ಕಾವೇರಿ ನೀರಿಗಾಗಿ ಇಡಿ ರಾಜ್ಯವೇ ಹೋರಾಟ ನಡೆಸುತ್ತಿರುವಾಗ ಆಡಳಿತ ಪಕ್ಷ ಕಾಂಗ್ರೆಸ್ ನಾಯಕರು ಮಾತ್ರ ಮುಂದಿನ ಚುನಾವಣೆಯಲ್ಲಿ ಗೆಲ್ಲುವುದು ಹೇಗೆ ಅಂತ ಲೆಕ್ಕಾಚಾರ ಹಾಕಿದ್ದಾರೆ.

ಪಕ್ಷದ ರಾಜ್ಯ ಉಸ್ತುವಾರಿ ದಿಗ್ವಿಜಯ್ ಸಿಂಗ್ ನೇತೃತ್ವದಲ್ಲಿ ನಡೆದ ಪ್ರಥಮ ಸಮನ್ವಯ ಸಮಿತಿ ಸಭೆಯಲ್ಲಿ 2018 ಚುನಾವಣೆ ಗೆಲ್ಲಲು ಅನುಸರಿಸಬೇಕಾದ ತಂತ್ರಗಳ ಕುರಿತು ಸುದೀರ್ಘ ಚರ್ಚೆ ನಡೆಸಿದ್ದಾರೆ. ಅಲ್ಲದೇ, ಸರ್ಕಾರದ ಸಾಧನೆ ಪ್ರಚಾರ ಮಾಡಲು 600 ಕೋಟಿ ರೂಪಾಯಿ ವೆಚ್ಚ ಮಾಡಲು ನಿರ್ಧರಿಸಿದ್ದಾರೆ.

ನಿಗಮ ಮಂಡಳಿ ಅಧ್ಯಕ್ಷರ ನೇಮಕವನ್ನು ಈ ತಿಂಗಳಾಂತ್ಯದಲ್ಲಿ ಪೂರ್ಣಗೊಳಿಸಲು ಅಧ್ಯಕ್ಷರು ಮತ್ತು ಸಿಎಂ ಸೂಚನೆ ನೀಡಲಾಗಿದೆ ಎಂದು ದಿಗ್ವಿಜಯ್​ ಸಿಂಗ್​ ಹೇಳಿದ್ದಾರೆ.