img

Navigation

News

ಜಯಾ ವಿರುದ್ಧ ತಮಿಳುಗರ ಆಕ್ರೋಶ

Suvarnanews: 1 year ago
ಜಯಾ ವಿರುದ್ಧ ತಮಿಳುಗರ ಆಕ್ರೋಶ

ಮಂಡ್ಯ (ಸೆ.08):  ಕಾವೇರಿ ಹೋರಾಟಕ್ಕೆ ಕೇವಲ ಕನ್ನಡಿಗರಿಗಲ್ಲ.  ತಮಿಳು ಭಾಷಿಕರೂ ಈಗ ಅಡಿಯಿಟ್ಟಿದ್ದಾರೆ. ಮಂಡ್ಯದಲ್ಲಿ ಕಾವೇರಿ ಹೋರಾಟಕ್ಕೆ ಬೆಂಬಲ ಸೂಚಿಸಿರುವ ತಮಿಳು ಕಾಲೊನಿ, ನೆಹರು ನಗರ, ಮಂಡ್ಯ ನಗರ ತಮಿಳು ಭಾಷಿಕರು ತಮಿಳುನಾಡು ಸರ್ಕಾರ ಮತ್ತು ಜಯಲಲಿತಾ ವಿರುದ್ದ ಪ್ರತಿಭಟನೆ ನಡೆಸಿದ್ದಾರೆ.

ಖಾಲಿ ಕೊಡಗಳನ್ನು ಹೊತ್ತು ಜಯಲಲಿತಾ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು, ಇಷ್ಟು ದಿನ ಎಸಿ ರೂಂನಲ್ಲಿ ಆರಾಮಾಗಿದ್ದ ಟೆಕ್ಕಿಗಳಿಗೂ ಕೂಡಾ ಕಾವೇರಿ ಹೋರಾಟದ ಬಿಸಿ ತಟ್ಟಿದೆ. ಇವತ್ತು ಟೆಕ್ಕಿಗಳೆಲ್ಲಾ ರಸ್ತೆಗಿಳಿದು ಕಾವೇರಿ ಹೋರಾಟದಲ್ಲಿ ಭಾಗಿಯಾಗಿದ್ದಾರೆ.

(ಸಾಂದರ್ಭಿಕ ಚಿತ್ರ)