img

Navigation

News

ಪಾಕಿಸ್ತಾನ ಹೈ ಕಮಿಷನರ್'ಗೆ ಸಮನ್ಸ್ ಜಾರಿಗೊಳಿಸಿದ ಭಾರತ!

Suvarnanews: 1 year ago
ಪಾಕಿಸ್ತಾನ ಹೈ ಕಮಿಷನರ್'ಗೆ ಸಮನ್ಸ್ ಜಾರಿಗೊಳಿಸಿದ ಭಾರತ!

ನವದೆಹಲಿ(ಸೆ.08): ಪಾಕಿಸ್ತಾನದಲ್ಲಿರುವ ಭಾರತೀಯ ರಾಯಭಾರಿಗೆ ಅಗೌರವ ತೋರಿರುವ ಪ್ರಕರಣವನ್ನು ಭಾರತ ಗಂಭೀರವಾಗಿ ಪರಿಗಣಿಸಿದೆ. ಭಾರತದಲ್ಲಿರುವ ಪಾಕಿಸ್ತಾನ ಹೈ ಕಮಿಷನರ್ ಗೆ ಸಮನ್ಸ್ ನೀಡಿದೆ.

ಪಾಕ್ ಹೈಕಮಿಷನರ್ ಅಬ್ದುಲ್ ಬಸಿತ್ ಅವರನ್ನು ವಿದೇಶಾಂಗ ಇಲಾಖೆಗೆ ಬರುವಂತೆ ಸಮನ್ಸ್ ನೀಡಲಾಗಿತ್ತು. ಭಾರತದ ವಿದೇಶಾಂಗ ಇಲಾಖೆಯ ಪಶ್ಚಿಮ ಕಾರ್ಯದರ್ಶಿ ಸುಜಾತಾ ಮೆಹ್ತಾ, ಅಬ್ದುಲ್ ಬಸಿತ್ ಅವರೊಂದಿಗೆ ಪಾಕಿಸ್ತಾನದಲ್ಲಿ ಭಾರತೀಯ ರಾಯಭಾರಿಗೆ ಅಗೌರವ ತೋರಿರುವ ಪ್ರಕರಣವನ್ನು ಚರ್ಚಿಸಿದ್ದು ಘಟನೆ ಬಗ್ಗೆ ಪ್ರತಿಭಟಿಸಿದ್ದಾರೆ ಎಂದು ವಿದೇಶಾಂಗ ಇಲಾಖೆ ವಕ್ತಾರ ವಿಕಾಸ್ ಸ್ವರೂಪ್ ತಿಳಿಸಿದ್ದಾರೆ