img

Navigation

News

ಮಿಸ್ ವರ್ಲ್ಡ್ ಜಪಾನ್‌ಗೆ ಭಾರತದ ನಂಟು

Suvarnanews: 1 year ago
ಮಿಸ್ ವರ್ಲ್ಡ್ ಜಪಾನ್‌ಗೆ ಭಾರತದ ನಂಟು

ಟೋಕಿಯೋ(ಸೆ.07): ಮಿಸ್ ವರ್ಲ್ಡ್ ಜಪಾನ್ ಆಗಿ ಆಯ್ಕೆಗೊಂಡಿರುವ ಪ್ರಿಯಾಂಕ ಯೊಶಿಕವಾರ ಅವರು ಭಾರತೀಯರಿಗೆ ಧನ್ಯವಾದ ಸಲ್ಲಿಸಿದ್ದಾರೆ. ಅವರ ತಂದೆ ಭಾರತೀಯ ಮೂಲದವರಾಗಿದ್ದು, ಪ್ರಿಯಾಂಕ ಮಿಸ್ ಜಪಾನ್ ಎಂದು ಘೋಷನೆಯಾದ ನಂತರ ಭಾರತೀಯರಿಂದ ಅವರಿಗೆ ಶುಭಾಶಯದ ಮಹಾಪೂರವೇ ಹರಿದುಬರುತ್ತಿವೆ.

‘‘ನಾನು ಭಾರತೀಯಳಲ್ಲ ಎಂದು ಹೇಳಿದ್ದರೂ, ಭಾರತೀಯರು ಶುಭಾಶಯ ಕಳಿಸುತ್ತಿದ್ದಾರೆ. ನಾನು ಈ ಸಂದೇಶಗಳಲ್ಲಿ ಮುಳುಗಿ ಹೋಗಿದ್ದೇನೆ. ಭಾರತೀಯರಿಗೆ ಥ್ಯಾಂಕ್ಸ್’’ ಎಂದು ೨೨ರ ಪ್ರಿಯಾಂಕ ಎನ್‌ಡಿಟಿವಿಗೆ ತಿಳಿಸಿದ್ದಾರೆ. ಡಿಸೆಂಬರ್‌ನಲ್ಲಿ ನಡೆಯಲಿರುವ ವಾಷಿಂಗ್ಟನ್ ಮಿಸ್ ವರ್ಲ್ಡ್ ಸ್ಪರ್ಧೆಯಲ್ಲೂ ಅವರು ಪಾಲ್ಗೊಳ್ಳಲಿದ್ದಾರೆ. ಜನಾಂಗೀಯ ಪೂರ್ವಗ್ರಹದ ವಿರುದ್ಧದ ತಮ್ಮ ಹೋರಾಟ ಜಾರಿಯಲ್ಲಿರುತ್ತದೆ ಎಂದಿದ್ದಾರೆ ಪ್ರಿಯಾಂಕಾ.