img

Navigation

Sports

ಇನ್ಮುಂದೆ ಆಯ್ಕೆಗಾರರಿಗೆ ಸಂದರ್ಶನ: ಠಾಕೂರ್‌

Suvarnanews: 1 year ago
ಇನ್ಮುಂದೆ ಆಯ್ಕೆಗಾರರಿಗೆ ಸಂದರ್ಶನ: ಠಾಕೂರ್‌

ಮುಂಬೈ(ಸೆ.08): ಭಾರತೀಯ ಕ್ರಿಕೆಟ್‌ ತಂಡದ ಆಯ್ಕೆಸಮಿತಿಯನ್ನು ಇನ್ನು ಮುಂದೆ ಸಂದರ್ಶನ ಮೇರೆಗೆ ಆಯ್ಕೆಮಾಡಲಾಗುವುದು ಎಂದು ಬಿಸಿಸಿಐ ಅಧ್ಯಕ್ಷ ಅನುರಾಗ್‌ ಠಾಕೂರ್‌ ಹೇಳಿದ್ದಾರೆ.

ಈ ಮೊದಲು ವಲಯಾಧಾರಿತ ಶಿಫಾರಸಿನ ಮೇಲೆ ನಡೆಯುತ್ತಿದ್ದ ಆಯ್ಕೆಗಾರರನ್ನು ಇನ್ನು ಸಂದರ್ಶನದ ಮೇರೆಗೆ ಆರಿಸಲಾಗುವುದು. ಇದರಲ್ಲಿ ಬಿಸಿಸಿಐ ಸಲಹಾ ಸಮಿತಿಯ ಪಾತ್ರವೇನೂ ಇರದು ಎಂದಿರುವ ಠಾಕೂರ್‌, ಇದರಲ್ಲಿ ತಾನು ಹಾಗೂ ಕಾರ‍್ಯದರ್ಶಿ ಅಜಯ್‌ ಶಿರ್ಕೆ ಅಂತಿಮ ನಿರ್ಧಾರ ತಳೆಯುವುದಾಗಿ ಹೇಳಿದ್ದಾರೆ.

ಪ್ರಸ್ತುತ ಆಯ್ಕೆಸಮಿತಿ ಅಧ್ಯಕ್ಷ ಸಂದೀಪ್‌ ಪಾಟೀಲ್‌, ವಿಕ್ರಮ್‌ ರಾಠೋಡ್‌ ಮತ್ತು ಸಾಬಾ ಕರೀಂ ಅಧಿಕಾರಾವಧಿ ಮುಗಿಯುತ್ತಾ ಬರುತ್ತಿದ್ದು, ಗಗನ್‌ ಖೋಡಾ ಮತ್ತು ಎಂಎಸ್‌ಕೆ ಪ್ರಸಾದ್‌ ಅವಧಿ ಇನ್ನು ಮೂರು ವರ್ಷಗಳಿವೆ. ಆದರೆ, ನ್ಯಾ. ಲೋಧಾ ಸಮಿತಿ ಆಯ್ಕೆಸಮಿತಿ ಸದಸ್ಯರ ಮಿತಿಯನ್ನು ಮೂವರು ಮಾಜಿ ಟೆಸ್ಟ್‌ ಕ್ರಿಕೆಟಿಗರಿಗೆ ಸೀಮಿತಗೊಳಿಸಿದೆ.