img

Navigation

Sports

ರೋಹಿತ್ ಶರ್ಮಾಗೆ ಈ ದಾಖಲೆ ನಿರ್ಮಿಸಲು ಚಾಲೆಂಜ್ ಹಾಕಿದ ಗೇಲ್

Suvarnanews: 1 year ago
ರೋಹಿತ್ ಶರ್ಮಾಗೆ ಈ ದಾಖಲೆ ನಿರ್ಮಿಸಲು ಚಾಲೆಂಜ್ ಹಾಕಿದ ಗೇಲ್

ನವದೆಹಲಿ(ಸೆ.07): ಇತ್ತೀಚೆಗಷ್ಟೇ ಭಾರತದ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಟ್ವಿಟ್ಟರ್'ನಲ್ಲಿ ಯೂನಿವರ್ಸೆಲ್ ಬಾಸ್ ಕ್ರಿಸ್ ಗೇಲ್ ಹಾಗೂ ಮಿ. ಟ್ಯಾಲೆಂಟ್ ರೋಹಿತ್ ಶರ್ಮಾ ಅವರೊಂದಿಗಿರುವ ಭಾವಚಿತ್ರ ಹಾಕಿದ್ದರು. ಈ ಭಾವಚಿತ್ರದೊಂದಿಗೆ ಒನ್ ಡೇಯಲ್ಲಿ ನಾಲ್ಕು ದ್ವಿಶತಕ ಬಾರಿಸಿದವರು ಒಂದೇ ಚಿತ್ರದಲ್ಲಿದ್ದೇವೆ ಎಂದು ಟ್ವೀಟ್ ಮಾಡಿದ್ದು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸದ್ದು ಮಾಡಿತ್ತು.

ಈಗ ಕೆರಿಬಿಯನ್ ಆಟಗಾರ ಕ್ರಿಸ್ ಗೇಲ್ ಅದೇ ಭಾವಚಿತ್ರವನ್ನು ಟ್ವಿಟ್ಟರ್'ನಲ್ಲಿ ಹಾಕಿ ಟೆಸ್ಟ್ ಕ್ರಿಕೆಟ್'ನಲ್ಲಿ ತ್ರಿಶತಕ ಬಾರಿಸಿ ತ್ರಿಶತಕ ಬಾರಿಸಿದವರ ಕ್ಲಬ್ಬಿಗೆ ಸೇರಿಕೊಳ್ಳಿ ಎಂದು ಸವಾಲು ಹಾಕಿದ್ದಾರೆ.

ರೋಹಿತ್ ಶರ್ಮಾ ಏಕದಿನ ಕ್ರಿಕೆಟ್'ನಲ್ಲಿ ಎರಡು ಬಾರಿ ದ್ವಿಶತಕ ಬಾರಿಸಿದ ಏಕೈಕ ಕ್ರಿಕೆಟಿಗ ಹಾಗೂ ವೈಯಕ್ತಿಕ ಗರಿಷ್ಟ ರನ್ ಬಾರಿಸಿದ (264) ಆಟಗಾರ ಎಂಬ ಅಪರೂಪದ ದಾಖಲೆ ಹೊಂದಿದ್ದಾರೆ. ಆದರೆ ರೋಹಿತ್ ಟೆಸ್ಟ್ ಕ್ರಿಕೆಟ್'ನಲ್ಲಿ ವೈಯುಕ್ತಿಕ ಮೊತ್ತ 177 ರನ್ ಗಳಿಸಲಷ್ಟೇ ಸಾಧ್ಯವಾಗಿದೆ.