Top

ಗಣೇಶನ ವಿಸರ್ಜನೆ ವೇಳೆ ತೆಪ್ಪ ಮುಳುಗಿ 12 ಮಂದಿ ಜಲಸಮಾಧಿ: 8 ಮೃತದೇಹಗಳು ಪತ್ತೆ, ಉಳಿದ ಶವಗಳಿಗೆ ಶೋಧ


Asianet News Thursday 08 September 2016 09:09 am IST Karnataka
ಗಣೇಶನ ವಿಸರ್ಜನೆ ವೇಳೆ ತೆಪ್ಪ ಮುಳುಗಿ 12 ಮಂದಿ ಜಲಸಮಾಧಿ: 8 ಮೃತದೇಹಗಳು ಪತ್ತೆ, ಉಳಿದ ಶವಗಳಿಗೆ ಶೋಧ
08 Sep

ಶಿವಮೊಗ್ಗ(ಸೆ.08): ಶಿವಮೊಗ್ಗದಲ್ಲಿ ವಿಘ್ನ ನಿವಾರಕನ ವಿಸರ್ಜನೆ ವೇಳೆಯೇ ನಿನ್ನೆ ದೊಡ್ಡ ದುರಂತ ಸಂಭವಿಸಿದೆ. ಗಣಪತಿ ವಿಸರ್ಜಿಸಲು ಹೋಗಿ 12 ಮಂದಿ ಜಲಸಮಾಧಿಯಾಗಿದ್ದು, 8 ಜನರ ಮೃತದೇಹ ಪತ್ತೆಯಾಗಿದ್ದು, ಉಳಿದ ಮೂವರ ಮೃತದೇಹಕ್ಕೆ ಹುಡುಕಾಟ ನಡೆದಿದೆ.

ಶಿವಮೊಗ್ಗ-ಹೊನ್ನಾಳಿ ಮಾರ್ಗದಲ್ಲಿರುವ ಹಾಡೋನಹಳ್ಳಿ ಗ್ರಾಮದಲ್ಲಿ ಈ ದುರಂತ ನಡೆದಿದೆ. 5 ಜನರ ಸಾಮರ್ಥ್ಯವಿರುವ ತೆಪ್ಪದಲ್ಲಿ 25ಕ್ಕೂ ಹೆಚ್ಚು ಜನರಿದ್ದ ಹಿನ್ನಲೆಯಲ್ಲಿ ನದಿಯ ಮಧ್ಯಭಾಗದಲ್ಲಿ ತೆಪ್ಪ ಮುಳುಗಿದೆ.  ವೀರಭದ್ರಪ್ಪ, ಶಿವಕುಮಾರ್, ವೀರೇಶ್, ಜೀವನ್ , ರಮೇಶ್ , ಎಂ.ಹೆಚ್. ಗಣೇಶ, ಮಂಜು, ಚಂದ್ರಪ್ಪ , ಶವ ಪತ್ತೆಯಾಗಿದ್ದು, ಉಳಿದವರ ಶವ ಪತ್ತೆಯಾಗಬೇಕಾಗಿದೆ.

ಇನ್ನು ಬೆಳಗ್ಗೆಯಿಂದಲೇ ರಬ್ಬರ್ ಬೋಟ್ ಮೂಲಕ ಕಾರ್ಯಾಚರಣೆ ಮುಂದುವರೆಯುತ್ತಿದೆ. ತಮ್ಮವರನ್ನು ಕಳೆದುಕೊಂಡು ಸಂಬಂಧಿಕರ ಆಕ್ರಂದನ ಮುಗಿಲುಮುಟ್ಟಿದ್ದು, ಗಣೇಶನ ಹಬ್ಬದ ಸಂಭ್ರಮದಲ್ಲಿರಬೇಕಾದ ಗ್ರಾಮದಲ್ಲಿ ಇದೀಗ ನಿರವ  ಮೌನ ಆವರಿಸಿದೆ.



Follow us on Google Plus

Follow us on Facebook and twitter

Subscribe our youtube channel

Get Latest News in your e-mail Inbox!