Top

ಕಾವೇರಿ ಹೋರಾಟಗಾರರ ವಿರುದ್ದ ಎಫ್'ಐಅರ್ ದಾಖಲು


Asianet News Thursday 08 September 2016 09:09 am IST Karnataka
ಕಾವೇರಿ ಹೋರಾಟಗಾರರ ವಿರುದ್ದ ಎಫ್'ಐಅರ್ ದಾಖಲು
08 Sep

ಮಂಡ್ಯ(ಸೆ.8): ಕಾವೇರಿ ನೀರಿಗಾಗಿ ಪ್ರತಿಭಟನೆ ನಡೆಸುತ್ತಿರುವ 200ಕ್ಕೂ ಹೆಚ್ಚು ಹೋರಾಟಗಾರರ ವಿರುದ್ಧ ಮಂಡ್ಯ ಪಶ್ಚಿಮ ಪೊಲೀಸ್ ಠಾಣೆ ಹಾಗೂ ಮಂಡ್ಯ ಗ್ರಾ. ಠಾಣೆಯಲ್ಲಿ ಎಫ್'ಐಆರ್ ದಾಖಲಿಸಲಾಗಿದೆ. ಹೋರಾಟಗಾರರ ವಿರುದ್ಧ ಸರ್ಕಾರ, ಸುಪ್ರೀಂಕೋರ್ಟ್ ವಿರುದ್ಧ ಘೋಷಣೆ ಹಾಗೂ ಸಾರ್ವಜನಿಕ ಆಸ್ತಿ'ಪಾಸ್ತಿ ನಷ್ಟ ಆರೋಪದಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಪ್ರಕರಣದಲ್ಲಿ ಹೋರಾಟಗಾರರರ ಹೆಸರು ದಾಖಲಿಸದೇ ಇತರರು, ಅಪರಿಚಿತರು ಎಂದು ಉಲ್ಲೇಖಿಸಲಾಗಿದೆ.

ಪ್ರಕರಣಗಳು

ಕಾಂಗ್ರೆಸ್ ಕಚೇರಿ ಮೇಲೆ ದಾಳಿ( ಸ್ವಯಂ ಪ್ರೇರಿತ), ಬಸ್'ಗಳಿಗೆ ಕಲ್ಲು ತೂರಾಟ( ಬಸ್ ಚಾಲಕ ದೂರು) ಲೋಕೋಪಯೋಗಿ ಕಚೇರಿ ಮೇಲೆ ದಾಳಿ (ಇಲಾಖೆ ಸಿಬ್ಬಂದಿ ದೂರು), ಕಾವೇರಿ ನೀರಾವರಿ ನಿಗಮದ ಮೇಲೆ ಕಲ್ಲು ತೂರಾಟ( ಸ್ವಯಂ ಪ್ರೇರಿತ ) ಹಾಗೂ ಹಿಂಡವಾಳ'ದಲ್ಲಿ ರೈತಸಂಘದ ಕಾರ್ಯಕರ್ತರ ವಿರುದ್ಧ ಕೂಡಾ ದಾಖಲಾಗಿದೆ.Follow us on Google Plus

Follow us on Facebook and twitter

Subscribe our youtube channel

Get Latest News in your e-mail Inbox!