Top

ರಾಜ್ಯದ್ಯಂತ ತೀವ್ರಗೊಂಡ ಕಾವೇರಿ ಕಿಚ್ಚು: ನಾಳೆ ಕರ್ನಾಟಕ ಬಂದ್


Asianet News Thursday 08 September 2016 10:10 am IST Karnataka
ರಾಜ್ಯದ್ಯಂತ ತೀವ್ರಗೊಂಡ ಕಾವೇರಿ ಕಿಚ್ಚು: ನಾಳೆ ಕರ್ನಾಟಕ ಬಂದ್
08 Sep

ಬೆಂಗಳೂರು(ಸೆ.08): ರಾಜ್ಯದ್ಯಂತ ಕಾವೇರಿ ಕಿಚ್ಚು ಜೋರಾಗಿದೆ. ಮಂಡ್ಯದಲ್ಲಂತೂ ಹೋರಾಟ ತೀವ್ರಗೊಂಡಿದ್ದು, ಹಳ್ಳಿ ಹಳ್ಳಿಯಲ್ಲೂ ಪ್ರತಿಭಟನೆ ಕಾವು ತೀವ್ರಗೊಂಡಿದೆ. ಇನ್ನು ನಾಳೆ ಕರ್ನಾಟಕ ಬಂದ್ ಕರೆ ನೀಡಿದ್ದು, ಇಂದೂ ಕೂಡ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಇನ್ನೂ ಇಂದು ಹೇಮಾವತಿ ಜಲಾಶಯಕ್ಕೆ ಜೆಡಿಎಸ್ ಕಾರ್ಯಕರ್ತರು ಮುತ್ತಿಗೆ ಹಾಕಲಿದ್ದಾರೆ.

ರಾಜ್ಯದ್ಯಂತ ತೀವ್ರಗೊಂಡ ಕಾವೇರಿ ಕಿಚ್ಚು: ಗೊರೂರು ಜಲಾಶಯಕ್ಕೆ ದೇವೇಗೌಡರು ಭೇಟಿ

ಹೇಮಾವತಿ ಜಲಾಶಯಿಂದ ತಮಿಳುನಾಡಿಗೆ ನೀರು ಹರಿಸಿರುವ ಹಿನ್ನೆಲೆಯಲ್ಲಿ ಕಳೆದ ರಾತ್ರಿ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರು  ಗೊರೂರು ಜಲಾಶಯಕ್ಕೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ರು. ಬಳಿಕ ಮಾತನಾಡಿದ ಅವ್ರು, ಸೆಪ್ಟೆಂಬರ್  9 ರಂದು ಪ್ರಧಾನಿ ಮೋದಿ ಅವ್ರನ್ನು ಭೇಟಿ ಮಾಡಿ ರಾಜ್ಯದ ನೀರಿನ ಸ್ಥಿತಿಗತಿ ಕುರಿತು ಮನವರಿಕೆ ಮಾಡಿಕೊಡುವೆ ಅಂತಾ ಹೇಳಿದ್ರು.

ಆಹೋರಾತ್ರಿ ಜೆಡಿಎಸ್ ಧರಣಿ

ಹೇಮಾವತಿ ಡ್ಯಾಂ ನಿಂದ ತಮಿಳುನಾಡಿಗೆ ನೀರು ಹರಿಸಿರೋದಕ್ಕೆ ಆಕ್ರೋಶ ವ್ಯಕ್ತಪಡಿಸಿ, ಹೆಚ್.ಡಿ  ರೇವಣ್ಣ ನೇತೃತ್ವದಲ್ಲಿ ಜೆಡಿಎಸ್ ಮುಖಂಡರು ಜಿಲ್ಲಾಧಿಕಾರಿ ಕಚೇರಿ ಎದುರು ಆಹೋರಾತ್ರಿ ಧರಣಿ ನಡೆಸಿದ್ರು. ಶಾಸಕರಾದ ಹೆಚ್.ಕೆ ಕುಮಾರಸ್ವಾಮಿ, ಹೆಚ್.ಎಸ್ ಪ್ರಕಾಶ್, ಸಿಎನ್ ಬಾಲಕೃಷ್ಣ ಸೇರಿದಂತೆ ನೂರಾರು ಕಾರ್ಯಕರ್ತರು, ಧರಣಿಯಲ್ಲಿ ಪಾಲ್ಗೊಂಡಿದ್ರು. ಹಾಡು ಹೇಳಿ ಹರಟೆ ಹೊಡೆಯವ ಮೂಲಕ ರಾತ್ರಿ ಕಾಲ ಕಳೆದ್ರು.

ಈ ವೇಳೆ ಮಾತನಾಡಿದ  ಹೆಚ್.ಡಿ ರೇವಣ್ಣ, ಇಂದು ಹೇಮಾವತಿ ಜಲಾಶಯಕ್ಕೆ ಮುತ್ತಿಗೆ ಹಾಕಲಿದ್ದೇವೆ ಅಂತಾ ಹೇಳಿದ್ರು.

ನಾಳೆ ಕರ್ನಾಟಕ ಬಂದ್: ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

ಕಾವೇರಿ ಕೊಳ್ಳದಲ್ಲಿ ಆಕ್ರೋಶದ ಕಟ್ಟೆ ಹೊಡೆದಿದೆ. ಹಳ್ಳಿ ಹಳ್ಳಿಯಲ್ಲಿ ಪ್ರತಿಭಟನೆಯ ಕಾವು ಜೊರಾಗಿದೆ. ರಾತ್ರೋರಾತ್ರಿ ತಮಿಳುನಾಡಿಗೆ ಕಾವೇರಿ ನೀರುಬಿಡುತ್ತಿರುವುದನ್ನು ವಿರೋಧಿಸಿ, ರೈತರು ಸಿಡಿದೆದ್ದಿದ್ದಾರೆ.  ನಾಳೆ ಕನ್ನಡಪರ ಸಂಘಟನೆಗಳ ಒಕ್ಕೂಟ, ಕರ್ನಾಟಕ ಬಂದ್‌ಗೆ ಕರೆ ನೀಡಿರುವುದರಿಂದ ಪ್ರತಿಭಟನೆ ಮತ್ತಷ್ಟು ತೀವ್ರಗೊಳ್ಳಲಿದೆ. ಇಂದು ಕೂಡ ಮಂಡ್ಯ ಜಿಲ್ಲೆಯ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಅಲ್ದೇ ಇಂದು ಕೂಡ ಪ್ರತಿಭಟನೆ ಕಾವು ಜೋರಾಗಲಿದೆ.



Follow us on Google Plus

Follow us on Facebook and twitter

Subscribe our youtube channel

Get Latest News in your e-mail Inbox!