Top

ಕರ್ನಾಟಕ ಬಂದ್​ಗೆ ಸರ್ಕಾರದ ಬೆಂಬಲ


Asianet News Thursday 08 September 2016 08:20 pm IST Karnataka
ಕರ್ನಾಟಕ ಬಂದ್​ಗೆ ಸರ್ಕಾರದ ಬೆಂಬಲ
08 Sep

ಬೆಂಗಳೂರು (ಸೆ.08): ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ವಿರೋಧಿಸಿ ನಾಳೆ ನಡೆಯಲಿರುವ ಬಂದ್​ಗೆ ಸರ್ಕಾರ ಪರೋಕ್ಷ ಬೆಂಬಲ ನೀಡಿದೆ. ನಾಳೆ ಕರೆ ಕೊಟ್ಟಿರುವ ಕರ್ನಾಟಕ ಬಂದ್​ಗೆ ನಮ್ಮ ವಿರೋಧ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯಹೇಳಿದ್ದಾರೆ.

ನಾಳೆ ರಾಜ್ಯದ ಎಲ್ಲ ಶಾಲಾ ಕಾಲೇಜುಗಳಿಗೆ ರಜೆ ಇರುವುದು, ಕೆಎಸ್​ಆರ್​ಟಿಸಿ, ಬಿಎಂಟಿಸಿ ಬಸ್​ಗಳೂ  ಕೂಡಾ ಸಂಚರಿಸುವುದಿಲ್ಲ, ಸರ್ಕಾರಿ ನೌಕರರಿಗೂ ಹಾಜರಾತಿ ಇರುವುದಿಲ್ಲ ಎಂದು ಸಿಎಂ ಹೇಳಿದ್ದಾರೆ. ಆದರೆ ಬಂದ್​ ಹೆಸರಲ್ಲಿ ಶಾಂತಿ ಕದಡಬಾರದು ಎಂದಿದ್ದಾರೆ.

ಸೂಕ್ಷ್ಮ ಪ್ರದೇಶಗಳಲ್ಲಿ ಬಿಗಿ ಬಂದೋಬಸ್ತ್​ ಏರ್ಪಡಿಸಲು ಸೂಚಿಸಲಾಗಿದೆ. ಬೆಂಗಳೂರಿನಲ್ಲೇ ಸುಮಾರು 50 ಸಾವಿರ ಪೊಲೀಸರ ನಿಯೋಜಿಸಲಾಗುತವುದು, ಕೇಂದ್ರದಿಂದ 10 ಕಂಪನಿ ಪೊಲೀಸರನ್ನು ಕರೆಸಿಕೊಳ್ಳಲಾಗುತ್ತಿದೆ ಎಂದೂ ಸಿಎಂ ಮಾಹಿತಿ ನೀಡಿದ್ದಾರೆ.

ಪ್ರಚೋದನಾಕಾರಿ ಹೇಳಿಕೆ ನೀಡುವುದು, ಸಂದೇಶ ರವಾನಿಸುವುದು ಹಾಗೂ ಶಾಂತಿ ಕದಡುವ ಕೃತ್ಯ ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿಯೂ ಸಿಎಂ ಎಚ್ಚರಿಸಿದ್ದಾರೆ.



Follow us on Google Plus

Follow us on Facebook and twitter

Subscribe our youtube channel

Get Latest News in your e-mail Inbox!