Top

ಶೀಘ್ರವೇ ಸೆಟ್ಟೇರಲಿದೆ ರಾಜ್ಯದ ಮತ್ತೊಬ್ಬ ರಾಜಕಾರಣಿಯ ಪುತ್ರನ ಸಿನಿಮಾ.. ಯಾರು ಆ ರಾಜಕಾರಣಿ??


Asianet News Saturday 11 April 2015 02:14 pm IST Karnataka
ಶೀಘ್ರವೇ ಸೆಟ್ಟೇರಲಿದೆ ರಾಜ್ಯದ ಮತ್ತೊಬ್ಬ ರಾಜಕಾರಣಿಯ ಪುತ್ರನ ಸಿನಿಮಾ.. ಯಾರು ಆ ರಾಜಕಾರಣಿ??
11 Apr

ಬೆಂಗಳೂರು (ಏಪ್ರಿಲ್ 11) : ರಾಜಕಾರಣಿಗಳ ಮಕ್ಕಳು ಸಿನಿಮಾಗೆ ಬರೋದೇನು ಹೊಸದಲ್ಲ, ಈಗಾಗಲೇ ಮಾಜಿ ಪ್ರಧಾನಿ ಎಚ್​.ಡಿ ದೇವೇಗೌಡರ ಪುತ್ರ ಕುಮಾರಸ್ವಾಮಿ ನಿರ್ಮಾಪಕರಾಗಿಯೂ, ಅವರ ಪುತ್ರ ನಿಖಿಲ್​ ಹೊಸದಾಗಿ ಚಿತ್ರರಂಗಕ್ಕೆ ಎಂಟ್ರಿ ನೀಡಿ ಸುದ್ದಿಯಲ್ಲಿದ್ದಾರೆ. ಇನ್ನು ಈ ಹಿಂದೆ ಮಾಜಿ ಮುಖ್ಯಮಂತ್ರಿ ದಿವಂಗತ ಬಂಗಾರಪ್ಪರ ಪುತ್ರರು ಕೂಡ ಸಿನಿಮಾ ನಟನೆ, ಚಿತ್ರ ನಿರ್ಮಾಣದಲ್ಲಿ ತೊಡಗಿದ್ದನ್ನ ಇಲ್ಲಿ ನೆನಪಿಸ್ಕೋಬಹುದು.

ಅದರಂತೆ ಇದೀಗ ಎಚ್​.ಎಮ್​ ರೇವಣ್ಣರ ಪುತ್ರ ಅನೂಪ್​ ವಾದಲ್​ ಕೂಡ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಡ್ತಿದ್ದಾರೆ.  ಈಗಾಗಲೇ  ಸಿನಿಮಾ ನಟನೆಗಾಗಿ ಹಾಡು, ಡ್ಯಾನ್ಸ್​ ಹಾಗೂ ಫೈಟ್’​ಗಳ ಟ್ರೈನಿಂಗ್​ ಅನ್ನು ಮುಂಬೈನಲ್ಲಿ ಪಡೆದಿದ್ದಾರೆ. ಇನ್ನು ಅನೂಪ್​ ವಾದಲ್​ ಅಭಿನಯದ ಇನ್ನೂ ಹೆಸರಿಡದ ಚಿತ್ರಕ್ಕೆ ಕನ್ನಡದ ಸ್ಟಾರ್​ ನಿರ್ದೇಶಕರೊಬ್ಬರು ನಿರ್ದೇಶನ ಮಾಡಲಿದ್ದಾರೆ. ಈಗಾಗಲೇ ಚಿತ್ರದ ಸ್ಟೋರಿ ಕೂಡ ರೆಡಿಯಾಗಿದೆ ಎನ್ನಲಾಗಿದೆ.Follow us on Google Plus

Follow us on Facebook and twitter

Subscribe our youtube channel

Get Latest News in your e-mail Inbox!