Top

'ಬನಾಯೆಂಗೆ ಮಂದಿರ್' ಹಾಡು ಹಾಕಿದ್ದಕ್ಕೆ ಮುಸ್ಲಿಂ ಯುವಕನಿಂದ ಗಲಾಟೆ


Asianet News Thursday 08 September 2016 08:08 am IST Karnataka
'ಬನಾಯೆಂಗೆ ಮಂದಿರ್' ಹಾಡು ಹಾಕಿದ್ದಕ್ಕೆ ಮುಸ್ಲಿಂ ಯುವಕನಿಂದ ಗಲಾಟೆ
08 Sep

ಕೊಪ್ಪಳ(ಸೆ.08): ಬನಾಯೆಂಗೆ ಮಂದಿರ್ ಹಾಡು ಹಾಕಿದ್ದಕ್ಕೆ ಮುಸ್ಲಿಂ ಕೋಮಿನ ಯುವಕನೊಬ್ಬ ಡಿಜೆ ಕಿತ್ತು ಹಾಕಲು ಯತ್ನಿಸಿದ ಘಟನೆ ಕೊಪ್ಪಳದಲ್ಲಿ ನಡೆದಿದೆ.

ನಗರದ ದಿವಟರ್​ ಕ್ರಾಸ್​ ಬಳಿ ಈ ಗಲಾಟೆ ನಡೆದಿದೆ. ನಗರದಲ್ಲಿಂದು ಮೂರು ದಿನದ ಗಣೇಶ ಮೂರ್ತಿಗಳ ವಿಸರ್ಜನೆ ನಡೀತಿತ್ತು. ಈ ವೇಳೆ ವಿದ್ಯಾನಗರದ ಬಳಿ ಡಿಜೆ ಆಪರೇಟರ್​ ಬನಾಯೆಂಗೆ ಮಂದಿರ್ ಹಾಡು ಹಾಕಿದ್ದಾನೆ. ಅಲ್ಲಿಯೇ ಇದ್ದ ಮುಸ್ಲಿಂ ಕೋಮಿನ ಯುವಕನೊಬ್ಬ ಕೂಡಲೇ ಟ್ರ್ಯಾಕ್ಟರ್​ ಏರಿ ಡಿಜೆ ಕಿತ್ತೊಗೆಯಲು ಯತ್ನಿಸಿದ್ದಾನೆ. ಕೂಡಲೇ ಮಾತಿನ ಚಕಾಮಕಿ ನಡೆದು, ಹಲ್ಲೆಗೆ ಯತ್ನ ನಡೆದಿದೆ.

ಕೂಡಲೇ ಸ್ಥಳದಲ್ಲಿದ್ದ ಪೊಲೀಸರು ಮದ್ಯಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ. ಇನ್ನು ಇದೇ ವೇಳೆ ಯುವಕರು ಪೊಲೀಸರ ಜೊತೆಯೂ ಸಹ ಮಾತಿನ ಚಕಮಕಿ ನಡೆಸಿದ್ದಾರೆ.

ಇನ್ನು ಇದೇ ವೇಳೆ ಗಣೇಶನ ಮೂರ್ತಿಗಳ ವಿಸರ್ಜನೆ ವೇಳೆ ಯಾರೂ ಸಹ ಬನಾಯೆಂಗೆ ಮಂದಿರ್ ಹಾಡನ್ನು ಹಾಕಬಾರದು ಎಂದು ಜಿಲ್ಲಾಧಿಕಾರಿ ಎಂ ಕನಗವಲ್ಲಿ ಹಾಡನ್ನು ನಿಷೇಧಿಸಿ ಆದೇಶ ಹೊರಡಿಸಿದ್ದಾರೆ.

 



Follow us on Google Plus

Follow us on Facebook and twitter

Subscribe our youtube channel

Get Latest News in your e-mail Inbox!