Top

ಇಂದು ಕಾಂಗ್ರೆಸ್ ಸಮನ್ವಯ ಸಮಿತಿ ಸಭೆ: ನಿಗಮ ಮಂಡಳಿ ನೇಮಕ ಕುರಿತು ದಿಗ್ವಿಜಯ್ ಸಿಂಗ್ ಜೊತೆ ಚರ್ಚೆ


Asianet News Thursday 08 September 2016 08:08 am IST Karnataka
ಇಂದು ಕಾಂಗ್ರೆಸ್ ಸಮನ್ವಯ ಸಮಿತಿ ಸಭೆ: ನಿಗಮ ಮಂಡಳಿ ನೇಮಕ ಕುರಿತು ದಿಗ್ವಿಜಯ್ ಸಿಂಗ್ ಜೊತೆ ಚರ್ಚೆ
08 Sep

ಬೆಂಗಳೂರು(ಸೆ.08): ಇಂದು ರಾಜ್ಯ ಕಾಂಗ್ರೆಸ್ ಸಮನ್ವಯ ಸಮಿತಿ ಸಭೆ ನಡೆಯಲಿದೆ. ಹೊಸ ಸಮಿತಿ ರಚನೆಯಾದ ನಂತರ ನಡೆಯುತ್ತಿರುವ ಸಭೆ ಇದಾಗಿದ್ದು, ನಿಗಮ ಮಂಡಳಿ ನೇಮಕ, ಪಕ್ಷದಲ್ಲಿನ ಇತ್ತೀಚಿನ ಬೆಳವಣಿಗೆಗಳ ಕುರಿತು ಚರ್ಚೆ, ಮುಂದಿನ ಚುನಾವಣೆಗೆ ತಳ ಮಟ್ಟದಲ್ಲಿ ಪಕ್ಷ ಸಂಘಟನೆಗೆ ತಾಲೂಕು ಹಾಗೂ ಜಿಲ್ಲಾ ಮಟ್ಟದ ಪದಾಧಿಕಾರಿಗಳ ನೇಮಕ ಕುರಿತು ಚರ್ಚೆ ನಡೆಯಲಿದೆ.

28 ಸದಸ್ಯರ ಸಮಿತಿಯ ಮೊದಲ ಸಭೆ

ಬಹಳ ದಿನಗಳ ನಂತರ ಕಾಂಗ್ರೆಸ್ ಪಕ್ಷದ ರಾಜ್ಯ ಸಮನ್ವಯ ಸಮಿತಿ ಸಭೆ ಇಂದು ನಡೆಯಲಿದೆ. ರಾಜ್ಯ ಕಾಂಗ್ರೆಸ್ ಉಸ್ತುವಾರಿ ದಿಗ್ವಿಜಯ್ ಸಿಂಗ್ ಅಧ್ಯಕ್ಷತೆಯ 28 ಜನ ಸದಸ್ಯರ ಸಮಿತಿ ರಚನೆಯಾದ ನಂತರ ನಡೆಯುವತ್ತಿರುವ ಮೊದಲ ಸಭೆ ಇದಾಗಿದೆ. ಈಗಾಗಲೇ ದಿಗ್ವಿಜಯ್ ಸಿಂಗ್ ಬೆಂಗಳೂರಿಗೆ ಆಗಮಿಸಿದ್ದು, ಇಂದಿನ ಸಭೆಯಲ್ಲಿ ನಿಗಮ ಮಂಡಳಿ ನೇಮಕ, ಪಕ್ಷದ ಪದಾಧಿಕಾರಿಗಳ ನೇಮಕ ಹಾಗೂ ಮುಂಬರುವ ಚುನಾವಣೆಯ ಕುರಿತು ಚರ್ಚೆ ನಡೆಸಲಿದ್ದಾರೆ.

ನಿಗಮ ಮಂಡಳಿ ನೇಮಕ ಕುರಿತು ಈಗಾಗಲೇ ರಾಹುಲ್ ಗಾಂಧಿ ಜೊತೆ ಒಂದು ಸುತ್ತಿನ ಮಾತುಕತೆಯಾಗಿದೆ. ಇನ್ನೊಂದು ಸುತ್ತಿನ ಮಾತುಕತೆ ನಂತರ ಪಟ್ಟಿ ಪ್ರಕಟಿಸಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ಡಾ. ಜಿ ಪರಮೇಶ್ವರ್ ಹೇಳಿದರು.

ಸಮನ್ವಯ ಸಮಿತಿಯಲ್ಲಿ ಮಾಜಿ ಸಿಎಂಗಳಾದ ಎಸ್. ಎಂ. ಕೃಷ್ಣ, ಧರಂಸಿಂಗ್, ವೀರಪ್ಪ ಮೋಯಿಸಿ ಸೇರಿದಂತೆ 28 ಜನರ ದೊಡ್ಡ ಸಮಿತಿ ರಚನೆಯಾದ ಮೇಲೆ ಮೊದಲ ಸಭೆ ನಡೆಯುತ್ತಿದ್ದು, ಸಭೆಗೆ ಎಲ್ಲರೂ ಹಾಜರಿಯಾಗುತ್ತಾರಾ ಎನ್ನುವುದು ಕುತೂಹಲ ಮೂಡಿಸಿದೆ.



Follow us on Google Plus

Follow us on Facebook and twitter

Subscribe our youtube channel

Get Latest News in your e-mail Inbox!