Top

ಕರ್ನಾಟಕ ಬಂದ್: ಏನಿರುತ್ತೆ..? ಏನಿರೋದಿಲ್ಲ..? ಇಲ್ಲಿದೆ ಡೀಟೇಲ್ಸ್


Asianet News Thursday 08 September 2016 03:15 pm IST Karnataka
ಕರ್ನಾಟಕ ಬಂದ್: ಏನಿರುತ್ತೆ..? ಏನಿರೋದಿಲ್ಲ..? ಇಲ್ಲಿದೆ ಡೀಟೇಲ್ಸ್
08 Sep

ಬೆಂಗಳೂರು(ಸೆ.09): ಕಾವೇರಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ರಾಜ್ಯಕ್ಕೆ ಆಗಿರುವ ಅನ್ಯಾಯ ಖಂಡಿಸಿ ಸೆ.9 ರಂದು ವಿವಿಧ ಕನ್ನಡಪರ ಸಂಘಟನೆಗಳು ಕರ್ನಾಟಕ ಬಂದ್’ಗೆ ಕರೆ ನೀಡಿವೆ.ಈ ಬಂದ್'ಗೆ ಬಹುತೇಕ ಎಲ್ಲಾ ಸಂಘಟನೆಗಳು ಬೆಂಬಲ ಸೂಚಿಸಿವೆ.

ಪೆಟ್ರೋಲ್ ಬಂಕ್'ಗಳು ಬಾಗಿಲು ತೆರೆಯುವುದಿಲ್ಲ. ಬೆಳಿಗ್ಗೆ 6 ಗಂಟೆಯಿಂದಲೇ ಕೆಎಸ್'ಆರ್'ಟಿಸಿ ಬಸ್ ಸಂಚಾರ ಸ್ಥಗಿತಗೊಳ್ಳುವುದರೊಂದಿಗೆ, ಬ್ಯಾಂಕ್ ಸೇವೆಯೂ ಲಭ್ಯವಿರುವುದಿಲ್ಲ. ಆಸ್ಪತ್ರೆ, ಮೆಡಿಕಲ್ ಶಾಪ್, ಆ್ಯಂಬ್ಯುಲೆನ್ಸ್ ಕಾರ್ಯ ನಿರ್ವಹಿಸಲಿವೆ, ಹಾಲು, ಪೇಪರ್, ತರಕಾರಿ, ಅಗತ್ಯವಸ್ತುಗಳು ಸಿಗಲಿದ್ದು, ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

ನಾಳೆ ಏನೇನಿರುತ್ತೆ..? ಏನೇನಿರುವುದಿಲ್ಲ..?

ಬಂದ್'ಗೆ ಬೆಂಬಲ ನೀಡಿದ ಸಂಘಟನೆಗಳು

- ರೈತಪರ ಸಂಘಟನೆಗಳು

- ಬಿಬಿಎಂಪಿಯ 198 ಸದಸ್ಯರು ಬಾಹ್ಯ ಬೆಂಬಲ

- ಖಾಸಗಿ ಶಾಲಾ-ಕಾಲೇಜುಗಳ ಮಂಡಳಿಗಳು

- ಸರ್ಕಾರೀ ಶಾಲಾ-ಕಾಲೇಜುಗಳು ಬಂದ್

- ರಾಜ್ಯ ಒಕ್ಕಲಿಗರ ಸಂಘದಿಂದ ಬೆಂಬಲ

- ಹೊಟೇಲ್ ಮಾಲೀಕರ ಸಂಘದಿಂದ ಬಂಬಲ

- ಇಡೀ ಕನ್ನಡ ಚಿತ್ರೋದ್ಯಮ

- ವಿವಿಧ ಕಾರ್ಮಿಕ ಸಂಘಟನೆಗಳು

- ವಿವಿಧ ಕನ್ನಡ ಪರ ಸಂಘಟನೆ,

- ಲಾರಿ ಮಾಲೀಕರ ಸಂಘ,

- ಟ್ಯಾಕ್ಸಿ, ಕ್ಯಾಬ್ ಸಂಘಟನೆಗಳು,

- ಕನ್ನಡ ಸಾಹಿತ್ಯ ಪರಿಷತ್​,

- ಕಲಾವಿದರು ಸಂಘಟನೆ

- ಐಟಿ-ಬಿಟಿ ಕಂಪೆನಿಗಳು

- ಕೇಬಲ್ ಆಪರೇಟರ್ಸ್ ಅಸೋಸಿಯೇಷನ್

- ವರ್ತಕರ ಸಂಘಟನೆಗಳು

- ಬ್ಯಾಂಕ್​ ನೌಕರರ ಸಂಘಟನೆಗಳು

ಏನೇನು ಇರೋದಿಲ್ಲ :

-ಬಿಎಂಟಿಸಿ-ಕೆಎಸ್​ಆರ್​ಟಿಸಿ ಬಸ್ ಸೌಲಭ್ಯ ಸ್ಥಗಿತ

-ನಮ್ಮ ಮೆಟ್ರೋ ಸ್ಥಗಿತ

-ಆಟೋ, ಟ್ಯಾಕ್ಸಿ, ಕ್ಯಾಬ್ ಸ್ಥಗಿತ

-ಹೊಟೇಲ್'ಗಳು ಬಂದ್

-ಚಲನಚಿತ್ರ ಪ್ರದರ್ಶನ ಇರುವುದಿಲ್ಲ

-ಶಾಲಾ ಕಾಲೇಜುಗಳು ಬಂದ್

-ಮಾಲ್, ಮಾರುಕಟ್ಟೆ, ಸಂಪೂರ್ಣ ಬಂದ್

-ಪೆಟ್ರೋಲ್ ಬಂಕ್'ಗಳು ಕಾರ್ಯ ನಿರ್ವಹಿಸುವುದಿಲ್ಲ

-ಬ್ಯಾಂಕ್, ಅಂಚೆ ಕಚೇರಿ, ವಿಮೆ ಸೇವೆಗಳು ಸ್ಥಗಿತ

-ಕಾಮೆಡ್ ಕೆ ಕೌನ್ಸೆಲಿಂಗ್ ಇರುವುದಿಲ್ಲ

ಬಂದ್​ನಿಂದ ವಿನಾಯ್ತಿ :

-ರೈಲು ಸಂಚಾರ

-ಆಸ್ಪತ್ರೆಗಳು, ಆಂಬುಲೆನ್ಸ್

-ಮೆಡಿಕಲ್ ಷಾಪ್​ಗಳು ಕಾರ್ಯ ನಿರ್ವಹಿಸಲಿವೆ

-ಹಾಲು, ದಿನಪತ್ರಿಕೆಗಳು ಲಭ್ಯ

ಜನಸಾಮಾನ್ಯರು ಏನು ಮಾಡಬೇಕು

-ಇದು ನಮಗೆ, ನಮ್ಮ ರೈತರಿಗೆ ಆಗಿರುವ ಅನ್ಯಾಯ. ಶಾಂತಿಯುತವಾಗಿ ಖಂಡನೆ ವ್ಯಕ್ತಪಡಿಸೋಣ. ಅನ್ಯಾಯಕ್ಕೆ ಸಾತ್ವಿಕ ಪ್ರತಿಭಟನೆ ತೋರೋಣ. ಬೆಂಗಳೂರಿನ ಜನ ಆಚೆ ಬಂದು ತಮ್ಮ ಖಂಡನೆ ವ್ಯಕ್ತಪಡಿಸಬೇಕು.

-ಸಾರ್ವಜನಿಕರ ಆಸ್ತಪಾಸ್ತಿಗಳಿ ಹಾನಿ ಮಾಡಬೇಡಿ.

-ಇನ್ನು ಮಕ್ಕಳು, ವೃದ್ಧರು, ರೋಗಿಗಳು ಮನೆಯಿಂದ ಹೊರಗೆ ಬರಬೇಡಿ.

-ಪ್ರಯಾಣ ಮುಂದೂಡಿಕೊಳ್ಳುವುದು ಉತ್ತಮ.

-ಆಸ್ಪತ್ರೆಗಳಿಂದ ಡಿಸ್​ಚಾರ್ಜ್ ಆಗುವುದನ್ನು ಮುಂದೂಡಿಕೊಳ್ಳಿ.

-ಎಟಿಎಂನಲ್ಲಿ ಹಣ ತೆಗೆಯೋದು ಅಥವಾ ಬ್ಯಾಂಕ್ ವಹಿವಾಟು ಇಂದೇ ಮುಗಿಸಿಕೊಳ್ಳಿ

 



Follow us on Google Plus

Follow us on Facebook and twitter

Subscribe our youtube channel

Get Latest News in your e-mail Inbox!