Top

ಎರಡೆರಡು ಹುದ್ದೆ ಅನುಭವಿಸುತ್ತಿರುವ ಕಾಂಗ್ರೆಸ್ ಸಚಿವರ ಪಟ್ಟಿ


Asianet News Monday 02 June 2014 09:09 am IST Karnataka
ಎರಡೆರಡು ಹುದ್ದೆ ಅನುಭವಿಸುತ್ತಿರುವ ಕಾಂಗ್ರೆಸ್ ಸಚಿವರ ಪಟ್ಟಿ
02 Jun

ಬೆಂಗಳೂರು(ಜೂ. 02): ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ವರ್ಷ ಕಳೆದಿದೆ... ಒಬ್ಬರಿಗೆ ಒಂದೇ ಹುದ್ದೆ ಎಂಬ ಪಕ್ಷದ ಕಾನೂನಿದ್ದರೂ ಮಂತ್ರಿಯಾದೋರು ಎರಡೆರಡು ಹುದ್ದೆಯಲ್ಲಿ ಮುಂದುವರೆದಿದ್ದಾರೆ... ಇನ್ನು ಪಕ್ಷಕ್ಕೆ ದುಡಿದ ಕಾರ್ಯಕರ್ತರಿಗೆ ಮಾತ್ರ ಅಧಿಕಾರ ಗಗನ ಕುಸುಮವಾಗಿದೆ ಎಂಬ ಆರೋಪ ಕೇಳಿಬರುತ್ತಿದೆ...

ಎರಡು ಹುದ್ದೆ ಹೊಂದಿರುವ ಸಚಿವರು

1) ಅಂಬರೀಶ್:

ವಸತಿ ಸಚಿವ ಮತ್ತು ಕೆಪಿಸಿಸಿ ಉಪಾಧ್ಯಕ್ಷ

2) ಶಾಮನೂರು ಶಿವಶಂಕರಪ್ಪ:
ತೋಟಗಾರಿಕಾ ಸಚಿವ ಮತ್ತು ಕೆಪಿಸಿಸಿ ಖಜಾಂಚಿ

3) ಎಚ್.ಸಿ.ಮಹದೇವಪ್ಪ:
ಲೋಕೋಪಯೋಗಿ ಸಚಿವ ಮತ್ತು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ

4) ಉಮಾಶ್ರೀ:
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಮತ್ತು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ

5) ರಾಮಲಿಂಗಾ ರೆಡ್ಡಿ:
ಸಾರಿಗೆ ಸಚಿವ ಮತ್ತು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ

6) ಸತೀಶ್​ ಜಾರಕಿಹೊಳಿ:
ಅಬಕಾರಿ ಸಚಿವ ಮತ್ತು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ

7) ಎಚ್. ಆಂಜನೇಯ:
ಸಮಾಜಕಲ್ಯಾಣ ಸಚಿವ ಮತ್ತು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ

8) ಕೃಷ್ಣ ಭೈರೇಗೌಡ:
ಕೃಷಿ ಸಚಿವ ಮತ್ತು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ

9) ಯು.ಟಿ. ಖಾದರ್​:
ಆರೋಗ್ಯ ಸಚಿವ ಮತ್ತು ಕೆಪಿಸಿಸಿ ಕಾರ್ಯದರ್ಶಿ

10) ದಿನೇಶ್​ ಗುಂಡೂರಾವ್​:
ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಮತ್ತು ಬೆಂಗಳೂರು ನಗರ ಕಾಂಗ್ರೆಸ್​ ಅಧ್ಯಕ್ಷ

11) ಎಚ್.ಎಸ್​.ಮಹದೇವ ಪ್ರಸಾದ್​:
ಸಹಕಾರ ಸಚಿವ ಮತ್ತು ಚಾಮರಾಜನಗರ ಜಿಲ್ಲಾ ಕಾಂಗ್ರೆಸ್​ ಅಧ್ಯಕ್ಷ

ಚುನಾವಣೆಯಲ್ಲಿ ಗೆದ್ದು ಮಂತ್ರಿಯಾದವರು ಪಕ್ಷದ ಪದಾಧಿಕಾರಿಗಳ ಹುದ್ದೆಗೆ ರಾಜೀನಾಮೆ ನೀಡುವಂತೆ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್​ ಸೂಚಿಸಿದ್ದರು... ಪರಮೇಶ್ವರ್​ ಆದೇಶವನ್ನೂ ಲೆಕ್ಕಿಸದೇ ಅನೇಕರು ಎರಡು ಹುದ್ದೆಗಳಲ್ಲಿ ಮುಂದುವರೆದಿದ್ದಾರೆ... ಆದರೂ ಕೆಲವರು ಪಕ್ಷದ ಹುದ್ದೆಗೆ ರಾಜೀನಾಮೆ ನೀಡಿದ್ದೇವೆ ಎಂದು ಹೇಳುತ್ತಾರೆ.

ಆದರೆ, ಕೆಪಿಸಿಸಿ ಪದಾಧಿಕಾರಿಗಳ ಪಟ್ಟಿಯಲ್ಲಿ ಮಾತ್ರ ಸಚಿವರುಗಳ ಹೆಸರಿದೆ... ಸಚಿವರುಗಳು ಪಕ್ಷದ ಹುದ್ದೆಗೆ ರಾಜೀನಾಮೆ ನೀಡುವಂತೆ ಪರಮೇಶ್ವರ್ ಮೇಲಿಂದ ಮೇಲೆ ಹೇಳುತ್ತಲೇ ಇದ್ದಾರೆ... ಒಟ್ಟಾರೆ, ಆ ಹುದ್ದೆಗಳು ಖಾಲಿಯೂ ಆಗಿಲ್ಲ. ಬೇರೆಯವರಿಗೆ ಅವಕಾಶವೂ ದೊರೆತಿಲ್ಲ... ಹೀಗಾಗಿ ಪಕ್ಷದ ಹುದ್ದೆಗಳ ನಿರೀಕ್ಷೆಯಲ್ಲಿರುವ ಕಾರ್ಯಕರ್ತರು ಮಾತ್ರ ಬಾಯಿಬಿಟ್ಟುಕೊಂಡು ಕೂತುಕೊಳ್ಳುವಂತಾಗಿದೆ.

- ಶಂಕರ ಪಾಗೋಜಿ



Follow us on Google Plus

Follow us on Facebook and twitter

Subscribe our youtube channel

Get Latest News in your e-mail Inbox!