Top

ನೀರಿನ ವಿಚಾರದಲ್ಲಿ ರಾಜಕೀಯ ಬೇಡ, ರೈತರ ಮೇಲೆ ಹಲ್ಲೆ ಖಂಡನೀಯ: ದೇವೆಗೌಡ


Asianet News Saturday 30 July 2016 01:13 pm IST Karnataka
ನೀರಿನ ವಿಚಾರದಲ್ಲಿ ರಾಜಕೀಯ ಬೇಡ, ರೈತರ ಮೇಲೆ ಹಲ್ಲೆ ಖಂಡನೀಯ: ದೇವೆಗೌಡ
30 Jul

ಬೆಂಗಳೂರು(ಜು.30): ಮಹದಾಯಿ ನ್ಯಾಯಾಧಿಕರಣ ತೀರ್ಪು ವಿಚಾರದಲ್ಲಿ ಕೇಂದ್ರ ಸರ್ಕಾರ ಗಮನಿಸದೇ ಇರುವುದು ದುರಂತ. ಮಧ್ಯಪ್ರವೇಶಿಸುವಂತೆ ಪ್ರಧಾನಿಗೆ ಮನವಿ ಮಾಡಿದ್ದೆ, ಈಗ ಮತ್ತೊಮ್ಮೆ ಪ್ರಧಾನಿಯನ್ನು ಭೇಟಿ ಮಾಡುತ್ತೇನೆ ಮಹದಾಯಿ ವಿಚಾರದಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವೇ ಎಂದು ಮಾಜಿ ಪ್ರಧಾನಿ ದೇವೇಗೌಡ ಹೇಳಿದ್ದಾರೆ.

ಪ್ರಧಾನಿಯನ್ನು ಭೇಟಿಯಾಗಿದ್ದ ಸಂದರ್ಭದಲ್ಲಿ ಅವರು ಮೂರು ರಾಜ್ಯಗಳು ಚರ್ಚಿಸಲಿ ಎಂದು ಹೇಳಿದ್ದರು. ಇದು ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳುವ ಮಾತು. ಮತ್ತೊಮ್ಮೆ ಪ್ರಧಾನಿ ಭೇಟಿ ಮಾಡುತ್ತೇನೆ. ಟ್ರಿಬ್ಯೂನಲ್ ಪ್ರಕರಣ ಇದ್ದಾಗ ನಾನು ಪ್ರಧಾನಿಯಾಗಿದ್ದ ವೇಳೆ ಮಧ್ಯಪ್ರವೇಶಿಸಿದ್ದೇನೆ, ವಿವಾದ ನ್ಯಾಯಾಧಿಕರಣದಲ್ಲಿ ಇರುವಾಗ ಪಿಎಂ ಮಧ್ಯಪ್ರವೇಶ ಮಾಡೋಕಾಗಲ್ಲ ಎಂಎಂಬ ಬಿಜೆಪಿ ಆರೋಪ ಸರಿಯಲ್ಲ ಕುಡಿಯುವ ನೀರಿನಲ್ಲಿ ರಾಜಕಾರಣ ಬೇಡ ಎಂದಿದ್ದಾರೆ.

ರೈತರ ಮೇಲೆ ಪೊಲೀಸರು ದೌರ್ಜನ್ಯ ನಡೆಸಿದ್ದು ಹೇಯ ಕೃತ್ಯ. ಗೃಹ ಸಚಿವರು ಹಲ್ಲೆ ಮಾಡಿದವರ ಮೇಲೆ ಕ್ರಮ ತೆಗೆದುಕೊಳ್ಳಬೇಕು. ಬಂಧಿಸಿದವರನ್ನು ಕೂಡಲೇ ಬಿಡುಗಡೆಗೊಳಿಸಬೇಕು ಹಾಗೂ ಗಾಯಗೊಂಡವರಿಗೆ ಸರ್ಕಾರವೇ ಚಿಕಿತ್ಸೆ ಕೊಡಿಸಬೇಕು ಎಂದು ಮಾಜಿ ಪ್ರಧಾನಿ ದೇವೇಗೌಡ ಆಗ್ರಹಿಸಿದ್ದಾರೆ.

ನನಗೆ ಆರೋಗ್ಯ ಸರಿಯಿಲ್ಲದ ಕಾರಣ ಒಂದು ವಾರ ಎಲ್ಲಿಯೂ ಹೋಗೋದಕ್ಕೆ ಸಾಧ್ಯವಿಲ್ಲ‌, ಪಾರ್ಲಿಮೆಂಟ್'ಗೆ ಸಹ ಹೋಗುತ್ತಿಲ್ಲ. ಒಂದು ವಾರ ಕಳೆದ ಬಳಿಕ ಹೋರಾಟಕ್ಕೆ ಇಳಿಯುತ್ತೇನೆ. ಅಗತ್ಯವಾದಲ್ಲಿ ಮತ್ತೊಮ್ಮೆ ಪ್ರಧಾನಿಯವರನ್ನು ಭೇಟಿಯಾಗಿ‌‌ ಮನವೊಲಿಸುವ ಪ್ರಯತ್ನ ಮಾಡುತ್ತೇನೆ ಎಂದಿದ್ದಾರೆ.

ಬಿಜೆಪಿ ಕಾಂಗ್ರೆಸ್ ಕುಂಟು ನೆಪ ಹೇಳೋದು ಯೋಗ್ಯ ಅಲ್ಲ ಮಾಜಿ ಸಿಎಂ ಆಗಿ ಕುಮಾರಸ್ವಾಮಿ ಗೋವಾ, ಮಹಾರಾಷ್ಟ್ರ ಮುಖಂಡರ ಜೊತೆ ಮಾತನಾಡಲು ರೆಡಿ ಇದ್ದಾರೆ. ಆದರೆ ರಾಜ್ಯದ ಬಿಜೆಪಿ, ಕಾಂಗ್ರೆಸ್ ನಾಯಕರು ಯಾರು ಕೂಡಾ ಪ್ರಯತ್ನ ಮಾಡುತ್ತಿಲ್ಲ, ಇದು ಚೌಕಾಶಿ ವ್ಯಾಪಾರ ಅಲ್ಲ ಎಂದಿದ್ದಾರೆ.Follow us on Google Plus

Follow us on Facebook and twitter

Subscribe our youtube channel

Get Latest News in your e-mail Inbox!