Top

ಒಂದಂಕಿ ಲಾಟರಿ ಪ್ರಕರಣ: ರಾಜ್ಯದ ಹಲವು ಪೊಲೀಸ್​​ ಅಧಿಕಾರಿಗಳ ಎದೆಯಲ್ಲಿ ನಡುಕ


Asianet News Tuesday 09 August 2016 05:17 pm IST Karnataka
ಒಂದಂಕಿ ಲಾಟರಿ ಪ್ರಕರಣ: ರಾಜ್ಯದ ಹಲವು ಪೊಲೀಸ್​​ ಅಧಿಕಾರಿಗಳ ಎದೆಯಲ್ಲಿ ನಡುಕ
09 Aug

ಬೆಂಗಳೂರು(ಆ.09): ಸುವರ್ಣ ನ್ಯೂಸ್​​  ಬಯಲು ಮಾಡಿದ್ದ ಒಂದಂಕಿ ಲಾಟರಿ ಪ್ರಕರಣ ರಾಜ್ಯದ ಹಲವು ಪೊಲೀಸ್​​ ಅಧಿಕಾರಿಗಳ ಎದೆಯಲ್ಲಿ ನಡುಕ ಹುಟ್ಟಿಸಿದೆ. ಗೃಹ ಮಂತ್ರಿಗಳ ಸಲಹೆಗಾರರಾದ ಕೆಂಪಯ್ಯ ಮತ್ತು ರಾಜ್ಯ ಪೊಲೀಸ್​ ಮಹಾ ನಿರ್ದೇಶಕ ಓಂ ಪ್ರಕಾಶ್​ ಅವರ ಹೇಳಿಕೆಯನ್ನು ಸಿಬಿಐ ಮೊನ್ನೆಯಷ್ಟೇ ದಾಖಲಿಸಿಕೊಂಡಿತ್ತು. ಇದೀಗ, ಸಿಬಿಐ, ಡಿವೈಎಸ್ಪಿ ಚಲಪತಿ, ಸೆಲ್ವಂ, ಪುಟ್ಟಮಾದಯ್ಯ, ಇನ್ಸ್​ಪೆಕ್ಟರ್​ ಬಾಲಕೃಷ್ಣ ಮತ್ತು ಎಸ್​ಐ ಪರಮೇಶ್ವರ್​ ಅವರನ್ನು ವಿಚವಾರಣೆಗೆ ಒಳಪಡಿಸಲಿದೆ.

ಒಟ್ಟೂ 33 ಅಧಿಕಾರಿಗಳ ಮೊಬೈಲ್​ ಸಂಖ್ಯೆಗಳು ಒಂದಂಕಿ ಲಾಟರಿ ಹಗರಣದ ಪ್ರಮುಖ ಆರೋಪಿ ಪಾರಿ ರಾಜನ್​ನ ಕಾಲ್​ ಡಿಟೇಲ್​ ರೆಕಾರ್ಡ್ಸ್​ನಲ್ಲಿ ಸಿಕ್ಕಿದ್ದು ಒಬ್ಬರಾದ ಮೇಲೊಬ್ಬರ ಹೇಳಿಕೆಗಳನ್ನು ಸಿಬಿಐ ದಾಖಲಿಸುತ್ತಿದೆ. ಈಗಾಗಲೇ 12 ಪೊಲೀಸ್​ ಅಧಿಕಾರಿಗಳ ವಿಚಾರಣೆ ಮುಗಿದಿದೆ ಎಂದು ಸಿಬಿಐ ಮೂಲಗಳು ತಿಳಿಸಿವೆ. ಜತೆಗೆ ಇನ್ನೂ ಕೆಲವು ಐಜಿಪಿ ಮತ್ತು ಎಡಿಜಿಪಿ ದರ್ಜೆಯ ಅಧಿಕಾರಿಗಳಿಗೆ ಕೂಡ ನೊಟೀಸ್​ ಜಾರಿಗೊಳಿಸಿದ್ದು ದೆಹಲಿಯ ಕೇಂದ್ರ ಕಚೇರಿಗೆ ಹಾಜರಾಗಿ ಹೇಳಿಕೆ ನೀಡುವಂತೆ ಸೂಚಿಸಲಾಗಿದೆ.

 



Follow us on Google Plus

Follow us on Facebook and twitter

Subscribe our youtube channel

Get Latest News in your e-mail Inbox!