Top

ಜೆಡಿಎಸ್'ನ ಪುಟ್ಟಣ್ಣಗೆ ಹ್ಯಾಟ್ರಿಕ್ ಗೆಲುವು


Asianet News Tuesday 24 June 2014 12:12 pm IST Karnataka
ಜೆಡಿಎಸ್'ನ ಪುಟ್ಟಣ್ಣಗೆ ಹ್ಯಾಟ್ರಿಕ್ ಗೆಲುವು
24 Jun

ಬೆಂಗಳೂರು(ಜೂ. 24): ಬೆಂಗಳೂರಿನ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಜೆಡಿಎಸ್'ನ ಪುಟ್ಟಣ್ಣ ಹ್ಯಾಟ್ರಿಕ್ ಗೆಲುವು ಸಾಧಿಸಿದ್ದಾರೆ. ಪುಟ್ಟಣ್ಣ 8,522 ಮತಗಳ ಭಾರೀ ಅಂತರದಿಂದ ಜಯ ಪಡೆದಿದ್ದಾರೆ. ಇತರ ಮೂರು ಕ್ಷೇತ್ರಗಳಾದ ಗುಲ್ಬರ್ಗ, ಚಿತ್ರದುರ್ಗ ಮತ್ತು ಧಾರವಾಡ ಪಶ್ಚಿಮ ಕ್ಷೇತ್ರದ ಮತ ಎಣಿಕೆ ಕಾರ್ಯ ನಡೆಯುತ್ತಿದೆ. ಜೂನ್ 20ರಂದು ವಿಧಾನಪರಿಷತ್'ಗೆ ಈ ನಾಲ್ಕು ಕ್ಷೇತ್ರಗಳಿಗೆ ಚುನಾವಣೆ ನಡೆದಿತ್ತು.

ಧಾರವಾಡ ಪಶ್ಚಿಮ ಪದವಿಧರ ಕ್ಷೇತ್ರದಲ್ಲಿ ಗದಗ, ಹಾವೇರಿ, ಧಾರವಾಡ ಮತ್ತು ಉತ್ತರ ಕನ್ನಡ ಜಿಲ್ಲೆಗಳು ಒಳಗೊಂಡಿವೆ. ಜೆಡಿಸ್'​ನಿಂದ ವಸಂತ ಹೊರಟ್ಟಿ, ಕಾಂಗ್ರೆಸ್'​ನಿಂದ ಪಿ.ಎಚ್.ನೀರಲಕೇರಿ ಹಾಗೂ ಬಿಜೆಪಿಯಿಂದ ಎಸ್​.ವಿ.ಸಂಕನೂರ ಸ್ಪರ್ಧಿಸಿದ್ದು ಒಟು 16 ಅಭ್ಯರ್ಥಿಗಳ ಹಣೆಬರಹ ಇಂದು ಸಂಜೆ ವೇಳೆಗೆ ಗೊತ್ತಾಗಲಿದೆ.

ಗುಲ್ಬರ್ಗಾದ ವಿವಿಯ ಗಣಿತ ಶಾಸ್ತ್ರ ವಿಭಾಗದಲ್ಲಿ ಗುಲ್ಬರ್ಗಾದ ಮತ ಏಣಿಕೆ ಕಾರ್ಯ ನಡೆಯುತ್ತಿದೆ.

ಜೆಡಿಎಸ್ ಕಾರ್ಯಕರ್ತರ ಸಂಭ್ರಮಾಚರಣೆ..
ಬೆಂಗಳೂರಿನ ಶಿಕ್ಷಕರ ಕ್ಷೇತ್ರದಲ್ಲಿ ಪುಟ್ಟಣ್ಣ ಗೆಲುವು ಸಾಧಿಸುತ್ತಿರುವಂತೆಯೇ ಜೆಡಿಎಸ್ ಕಾರ್ಯಕರ್ತರು ಕುಣಿದುಕುಪ್ಪಳಿಸಿದ್ದಾರೆ. ತನ್ನ ಗೆಲುವಿಗಿಂತ ಇದು ಕಾರ್ಯಕರ್ತರ ಗೆಲುವು ಎಂದು ವಿಜೇತ ಅಭ್ಯರ್ಥಿ ಪುಟ್ಟಣ್ಣ ಹೇಳಿಕೊಂಡಿದ್ದಾರೆ. ಹಾಗೆಯೇ, ಯಾವುದೇ ಸರ್ಕಾರವಿದ್ದರೂ ತಾನು ಶಿಕ್ಷಕರ ಪರವಾಗಿ ಹೋರಾಟ ಮುಂದುವರಿಸುವುದಾಗಿ ಪುಟ್ಟಣ್ಣ ಪಣ ತೊಟ್ಟಿದ್ದಾರೆ.Follow us on Google Plus

Follow us on Facebook and twitter

Subscribe our youtube channel

Get Latest News in your e-mail Inbox!