Top

ದಸರಾ ಉದ್ಘಾಟನೆಗೆ ಸಚಿನ್ ತೆಂಡೂಲ್ಕರ್..?


Asianet News Thursday 04 August 2016 07:19 pm IST Karnataka
ದಸರಾ ಉದ್ಘಾಟನೆಗೆ ಸಚಿನ್ ತೆಂಡೂಲ್ಕರ್..?
04 Aug

ಮೈಸೂರು(ಆ.04): ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ದಿನಾಂಕ ನಿಗದಿಯಾಗಿದೆ.  ಅಕ್ಟೋಬರ್ 1ರಿಂದ  ಮೈಸೂರು ದಸರಾ ಆರಂಭವಾಗಲಿದೆ. ವಿಧಾನಸೌಧದಲ್ಲಿ ನಡೆದ ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದ ಉನ್ನತ ಮಟ್ಟದ ಸಮಿತಿ ಸಭೆಯಲ್ಲಿ ಕೆಲವು ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ಇನ್ನೂ, ಉದ್ಘಾಟನೆಗೆ  ಕ್ರಿಕೆಟ್ ದೇವರು ಸಚಿನ್ ತೆಂಡುಲ್ಕರ್ ಹೆಸರು ಚರ್ಚೆಗೆ ಬಂದಿದೆ.

ಅಕ್ಟೋಬರ್​ 1ರಂದು ಬೆಳಗ್ಗೆ 11.40ಕ್ಕೆ ಚಾಮುಂಡಿ ಬೆಟ್ಟದಲ್ಲಿ ನಾಡಹಬ್ಬಕ್ಕೆ ಚಾಲನೆ ದೊರೆಯಲಿದೆ.  ಈ ಬಾರಿ ವಿಜಯ ದಶಮಿ 11ನೇ ದಿನ ಬರುತ್ತಿರುವ ಹಿನ್ನೆಲೆಯಲ್ಲಿ ಅಂದೇ ಜಂಬೂ ಸವಾರಿ ನಡೆಯಲಿದೆ. ಇನ್ನು ದಸರಾ ಉದ್ಘಾಟಕರ ಬಗ್ಗೆ  ಆಗಸ್ಟ್ 9 ರ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲು ನಿರ್ಧರಿಸಲಾಗಿದೆ.

ಇನ್ನೂ ಈ  ಭಾರಿ ಸರಳವೂ ಅಲ್ಲದ, ಅದ್ಧೂರಿಯೂ ಅಲ್ಲದ ಸಾಂಪ್ರದಾಯಿಕ ಮತ್ತು ಜನಾರ್ಷಣಿಯ ದಸರಾ ನಡೆಸಲಾಗುವುದೆಂದು  ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. .

ಇನ್ನೂ,  ನಾಡಹಬ್ಬ ಉದ್ಘಾಟನೆಗೆ  ಕ್ರಿಕೆಟ್ ದೇವರು  ಸಚಿನ್​ ತೆಂಡುಲ್ಕರ್ ಹೆಸರು ಪ್ರಸ್ತಾಪವಾಗಿದೆ. ಜೊತೆಗೆ  ಸಾಹಿತಿಗಳಾದ ಚನ್ನವೀರ ಕಣವಿ, ನಿಸಾರ್​ ಅಹಮದ್​ ಮತ್ತು ಸುತ್ತೂರು ದೇಶಿಕೇಂದ್ರ ಸ್ವಾಮೀಜಿ ಹೆಸರು ಚರ್ಚೆಗೆ ಬಂದಿದ್ದು, ಆಗಸ್ಟ್​ 9ರಂದು ನಡೆಯುವ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಈ ಬಗ್ಗೆ ನಿರ್ಧಾರವಾಗಲಿದೆ.

ಇನ್ನೂ, ಈ ಬಾರಿ ದಸರಾ ಉದ್ಘಾಟನೆಗೆ ಸಾಹಿತಿ ಎಸ್​.ಎಲ್​. ಭೈರಪ್ಪ ಅವರನ್ನು ಆಹ್ವಾನಿಸಬೇಕು ಎಂಬ ಬಗ್ಗೆ ಮೈಸೂರು ಸಂಸದ ಪ್ರತಾಪಸಿಂಹ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಆಗ್ರಹಿಸಿದ್ದರು. ಆದರೆ, ಇಂದಿನ ಸಭೆಗೆ ಪ್ರತಾಪಸಿಂಹ ಗೈರಾಗಿದ್ದರು. 

ಕಿರಣ್​  ಹನಿಯಡ್ಕ ,ಪೊಲಿಟಿಕಲ್​ ಬ್ಯೂರೋ, ಸುವರ್ಣ ನ್ಯೂಸ್​

 

 

 

 

 Follow us on Google Plus

Follow us on Facebook and twitter

Subscribe our youtube channel

Get Latest News in your e-mail Inbox!