Top

ಸ್ವಸ್ಥ ಭಾರತದ ಬಗ್ಗೆಯೂ ಮಾತನಾಡೋಣ: ಸಚಿನ್‌


Asianet News Sunday 28 August 2016 08:08 am IST Karnataka
ಸ್ವಸ್ಥ ಭಾರತದ ಬಗ್ಗೆಯೂ  ಮಾತನಾಡೋಣ: ಸಚಿನ್‌
28 Aug

ಬೆಂಗಳೂರು: ಸ್ವಚ್ಛ ಭಾರತ ಅಭಿಯಾನದ ಬಗ್ಗೆ ಸಾಕಷ್ಟು ಮಾತನಾಡುವ ನಾವು ಸ್ವಸ್ಥ ಭಾರತದ ಬಗ್ಗೆಯೂ ಮಾತನಾಡಬೇಕಿದೆ ಎಂದು ಖ್ಯಾತ ಕ್ರಿಕೆಟಿಗ ಸಚಿನ್‌ ತೆಂಡುಲ್ಕರ್‌ ಅಭಿಪ್ರಾಯಪಟ್ಟರು.

ನಗರದ ಹೆಬ್ಬಾಳದಲ್ಲಿ ನೂತನವಾಗಿ ಆರಂಭವಾದ ಖಾಸಗಿ ಆಸ್ಪತ್ರೆ ಉದ್ಘಾಟಿಸಿ ಮಾತನಾಡಿದ ಅವರು, ಭಾರತದಂತಹ ಜನ ನಿಬಿಡ ರಾಷ್ಟ್ರದಲ್ಲಿ ಆರೋಗ್ಯಕ್ಕೆ ಸಂಬಂಧಿಸಿ ಸಾಕಷ್ಟುಸಮಸ್ಯೆಗಳಿವೆ. ಆದರೆ ಆರೋಗ್ಯವೇ ನಿಜವಾದ ಸಂಪತ್ತಾಗಿದ್ದು ಆರೋಗ್ಯದ ಕುರಿತಾಗಿ ನಿರ್ಲಕ್ಷ್ಯ ಎಂದೆಂದಿಗೂ ಸಲ್ಲ ಎಂದರು.

ಊಟದ ಟೇಬಲ್‌ ಮೇಲೆ ಸಮಯ ಕಳೆಯುವುದಕ್ಕಿಂತ ಹೆಚ್ಚು ಸಮಯ ಜಿಮ್‌ನಲ್ಲಿ ವ್ಯಾಯಾಮಗಳಲ್ಲಿ ಕಳೆಯುವಂತಾಗಬೇಕುಗಿರುತ್ತಾರೆ ಎಂದರು.

ಎಲ್ಲರಿಗೂ ನಮಸ್ಕಾರ ಎಂದು ಭಾಷಣ ಆರಂಭಿಸಿದ ಅವರು ಬೆಂಗಳೂರಿನಲ್ಲಿ ತಾವು ಆಡುತ್ತಿದ್ದ ವೇಳೆ ನೀಡಿದ್ದ ಪ್ರೋತ್ಸಾಹವನ್ನು ನೆನೆದರು. ಕ್ರಿಕೆಟ್‌ ಆಡುವುದನ್ನು ಬಿಟ್ಟಮೇಲೂ ಬೆಂಗಳೂರಿಗರು ನನ್ನ ಮೇಲೆ ಇಷ್ಟೊಂದು ಪ್ರೀತಿ ಅಭಿಮಾನಗಳನ್ನು ತೋರಿಸುತ್ತಿರುವುದಕ್ಕೆ ಅಭಾರಿಯಾಗಿರುವುದಾಗಿ ಹೇಳಿದರು.

ಕೇಂದ್ರ ಸಚಿವ ಶರಣಪ್ರಕಾಶ್‌ ಪಾಟೀಲ್‌, ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲೂ ವಿಶ್ವ ದರ್ಜೆಯ ಚಿಕಿತ್ಸೆ ದೊರೆಯುವಂತೆ ಮಾಡಲು ಸರ್ಕಾರ ಸದಾ ಪ್ರಯತ್ನಿಸುತ್ತಿರುವುದಾಗಿ ಹೇಳಿದರು. ಖಾಸಗಿ ಆಸ್ಪತ್ರೆಗಳೊಂದಿಗೆ ಸ್ಪರ್ಧೆ ನಡೆಸದೇ ಅಲ್ಲಿನ ಎಲ್ಲ ಸವಲತ್ತು ಜೊತೆಗೆ ಚಿಕಿತ್ಸಾ ಗುಣಮಟ್ಟತಂತ್ರಜ್ಞಾನದ ಬಳಕೆ ಸರ್ಕಾರಿ ಆಸ್ಪತ್ರೆಗಳಲ್ಲೂ ಬಡವರಿಗೆ, ಅಶಕ್ತರಿಗೆ ದೊರಕುವಂತಾಗಬೇಕು ಎಂದು ಆಶಯ ವ್ಯಕ್ತಪಡಿಸಿದರು. ಮೆಡಿಕಲ್‌ ಕಾಲೇಜು ಆಸ್ಪತ್ರೆಗಳನ್ನು ಇದೇ ಧ್ಯೇಯದೊಂದಿಗೆ ಅಭಿವೃದ್ಧಿಪಡಿಸುತ್ತಿರುವುದಾಗಿ ಹೇಳಿದರು.

ರಾಜ್ಯ ಯೋಜನಾ ಆಯೋಗದ ಅಧ್ಯಕ್ಷ ಸಿ.ಎಂ.ಇಬ್ರಾಹಿಂ, ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ, ಸಚಿವರಾದ ಯು.ಟಿ.ಖಾದರ್‌, ಕೃಷ್ಣಬೈರೇಗೌಡ, ಮೇಲ್ಮನೆಯಲ್ಲಿ ಪ್ರತಿಪಕ್ಷ ನಾಯಕ ಕೆ.ಎಸ್‌.ಈಶ್ವರಪ್ಪ, ಸಂಸ್ಥೆ ಸಂಸ್ಥಾಪಕ ಡಾ,ಅಜಾದ್‌ ಮೊಪೆನ್‌, ಸಿಇಒ ಡಾ .ನಿತಿನ್‌ ಶೆಟ್ಟಿಮೊದಲಾದವರು ಹಾಜರಿದ್ದರು.

ತೆಂಡುಲ್ಕರ್‌ಗೆ ಬೆಂಗಳೂರಲ್ಲಿ ಮನೆ ನೀಡಿ:
ತೆಂಡುಲ್ಕರ್‌ ಬೆಂಗಳೂರಿಗೆ ಬಂದರೆ ಚಿನ್ನಸ್ವಾಮಿ ಸ್ಟೇಡಿಯಂಗೆ ಭೇಟಿ ನೀಡಿದರೆ ಅವರ ಶಕ್ತಿಯೆಲ್ಲ ಸ್ಟೇಡಿಯಂ ತುಂಬುತ್ತದೆ. ಅಷ್ಟುಸ್ಪೂರ್ತಿ ತುಂಬುವ ತೆಂಡುಲ್ಕರ್‌ ಬೆಂಗಳೂರಿಗೆ ಆಗಾಗ ಬರುತ್ತಿರಬೇಕು. ಸಚಿನ್‌ಗೆ ಬೆಂಗಳೂರಿನಲ್ಲೊಂದು ಮನೆ ನೀಡುವಂತೆ ಸರ್ಕಾರಕ್ಕೆ ಇಂದೇ ಪತ್ರ ಬರೆಯುತ್ತೇನೆ ಎಂದು ರಾಜ್ಯ ಯೋಜನಾ ಆಯೋಗದ ಅಧ್ಯಕ್ಷ ಸಿಎಂ ಇಬ್ರಾಹಿಂ ಹೇಳಿದರು.

ನಾವು ರಾಜಕಾರಣಿಗಳು ದಶಕಗಳ ಕಾಲ ಬೊಬ್ಬೆ ಹೊಡೆಯುತ್ತೇವೆ. ಆದರೆ ತೆಂಡುಲ್ಕರ್‌ ದಶಕಗಳ ಕಾಲ ಲಕ್ಷಾಂತರ ಪ್ರೇಕ್ಷಕರು ಬೊಬ್ಬೆ ಹೊಡೆಯುವಂತೆಹ ಸಾಧನೆ ಮೆರೆದರು ಎಂದು ಶ್ಲಾಘಿಸಿದರು.

 



Follow us on Google Plus

Follow us on Facebook and twitter

Subscribe our youtube channel

Get Latest News in your e-mail Inbox!