Top

ಹರ್ಯಾಣ ಮಾಜಿ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ ಮೇಲೆ ಸಿಬಿಐ ದಾಳಿ


Asianet News Saturday 03 September 2016 12:12 pm IST India
ಹರ್ಯಾಣ ಮಾಜಿ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ ಮೇಲೆ ಸಿಬಿಐ ದಾಳಿ
03 Sep

ನವದೆಹಲಿ (ಸೆ.03): ಭೂ ಅಕ್ರಮದಲ್ಲಿ ಭಾಗಿಯಾಗಿದ್ದಾರೆನ್ನುವ ಆರೋಪದ ಮೇಲೆ ಹರ್ಯಾಣ ಮಾಜಿ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ ಮೇಲೆ ಸಿಬಿಐ ದಾಳಿ ಮಾಡಿದೆ.

ದೆಹಲಿಯ 20 ಕಡೆಗಳಲ್ಲಿ ಸಿಬಿಐ ಇಂದು ದಾಳಿ ಮಾಡಿದೆ. ಎಲ್ಲಾ ಕಚೇರಿಗಳು, ಉನ್ನತ ಅಧಿಕಾರಿಗಳ ಮೇಲೆ  ದಾಳಿ ನಡೆಸಿದೆ. 2004 ರಿಂದ 2007 ರವರೆಗೆ ಮನೆಸಾರ್’ನಲ್ಲಿ ಹಂಚಿಕೆ ಮಾಡಲಾಗಿದ್ದ 400 ಎಕರೆ ಭೂಮಿಗೆ ಸಂಬಂಧಿಸಿದಂತೆ ಸಿಬಿಐ ದಾಳಿ ಮಾಡಿದೆ. ರೈತರಿಂದ ಕಡಿಮೆ ಬೆಲೆಗೆ ಭೂಮಿಯನ್ನು ತೆಗೆದುಕೊಂಡು ಖಾಸಗಿ ಬಿಲ್ಡರ್ಸ್ ಗೆ ಮಾರಾಟ ಮಾಡಿದ್ದಾರೆ ಎಂದು ಆರೋಪವಿದೆ. ಇದಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆ ನಡೆಸುತ್ತಿದೆ.



Follow us on Google Plus

Follow us on Facebook and twitter

Subscribe our youtube channel

Get Latest News in your e-mail Inbox!