Top

24 ವರ್ಷದ ಬಳಿಕ ಅಯೋಧ್ಯೆಗೆ ಗಾಂಧಿ ಕುಟುಂಬ ಭೇಟಿ


Asianet News Thursday 08 September 2016 10:22 pm IST India
24 ವರ್ಷದ ಬಳಿಕ ಅಯೋಧ್ಯೆಗೆ ಗಾಂಧಿ ಕುಟುಂಬ ಭೇಟಿ
08 Sep

ಲಖನೌ (ಸೆ.08): ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್​  ಬಲವರ್ಧನೆಗೆ ಪಣತೊಟ್ಟಿರುವ ರಾಹುಲ್​ಗಾಂಧಿ ಕಿಸಾನ್​ ಯಾತ್ರೆ ನಾಳೆ ಅಯೋಧ್ಯೆಗೆ ಭೇಟಿ ನೀಡಲಿದೆ. ಈ ಮೂಲಕ 24 ವರ್ಷದ ಬಳಿಕ ಗಾಂಧಿ ಕುಟುಂಬದ ವ್ಯಕ್ತಿಯೊಬ್ಬ ಅಯೋಧ್ಯೆಗೆ ಭೇಟಿ ನೀಡಿದಂತಾಗುತ್ತೆ.

ಮುಂದಿನ ವರ್ಷ ಉತ್ತರ ಪ್ರದೇಶದಲ್ಲಿ ವಿಧಾನಸಭಾ ಚುನಾವಣೆ  ಇರುವುದರಿಂದ ಎಐಸಿಸಿ ಉಪಾಧ್ಯಕ್ಷ ರಾಹುಲ್​ ಗಾಂಧಿ ಕಿಸಾನ್​ ಯಾತ್ರೆ ನಡೆಸುತ್ತಿದ್ದಾರೆ. 1992ರ ಡಿಸೆಂಬರ್​ನಲ್ಲಿ ಬಾಬ್ರಿ ಮಸೀದಿ ಧ್ವಂಸವಾದ ಬಳಿಕ  ಗಾಂಧಿ ಕುಟುಂಬದ ಯಾವೊಬ್ಬ ಸದಸ್ಯನೂ ಅಯೋಧ್ಯೆಗೆ ಕಾಲಿಟ್ಟಿರಲಿಲ್ಲ.

ಇನ್ನು ರಾಹುಲ್​ ತಂದೆ ಮಾಜಿ ಪ್ರಧಾನಿ ರಾಜೀವ್​ ಗಾಂಧಿ 1991ರಲ್ಲಿ ಅಯೋಧ್ಯಯಲ್ಲಿನ ಹನುಮಾನ್​ ದೇವಾಲಯಕ್ಕೆ ಭೇಟಿ ನೀಡಬೇಕಾಗಿತ್ತು.ಆದರೆ ಸಮಯದ ಅಭಾವದಿಂದ ಭೇಟಿ ನೀಡಿರಲಿಲ್ಲ.



Follow us on Google Plus

Follow us on Facebook and twitter

Subscribe our youtube channel

Get Latest News in your e-mail Inbox!